| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ |
ಪ್ರಕಟಿಸಿದ ದಿನಾಂಕ : 2010-03-19
ಬೆಂಗಳೂರು, ಮಾ.೧೮: ಸುಮಾರು ೧೩ ಜಿಲ್ಲೆಗಳಲ್ಲಿ ೧೦ ಮಂದಿ ಸರಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ೮.೨೮ ಕೋಟಿ ರೂಪಾಯಿ ಮೌಲ್ಯದ ಸ್ತಿರ ಮತ್ತು ಜರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಮೂರು ಮಂದಿ ಸಬ್‌ರಿಜಿಸ್ಟರ್‌ಗಳು, ಉತ್ತರ ಕನ್ನಡ ಜಿಲ್ಲೆಯ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ಕಡೂರು ತಾಲೂಕು ಪಂಚಾಯತ್ ಮುಖ್ಯಾಧಿಕಾರಿ, ಮೂವರು ಇಂಜಿನಿಯರ್‌ಗಳು, ಜಿಲ್ಲಾ ಪಂಚಾಯತ್ ಮತ್ತು ಎಂಎಸ್‌ಐಎಲ್‌ಗಳಲ್ಲಿನ ಪ್ರಥಮ ದರ್ಜೆ ಸಹಾಯಕರು ಲೋಕಾಯುಕ್ತರ ದಾಳಿಗೆ ಸಿಕ್ಕಿಬಿದಿದ್ದಾರೆ. ಈ ಎಲ್ಲ ಅಧಿಕಾರಿಗಳು ನಿಗದಿತ ಆದಾಯಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಉತ್ತರ ಕನ್ನಡ, ಬಳ್ಳಾರಿ, ಗುಲ್ಬರ್ಗ, ಕೊಪ್ಪಳ, ಧಾರವಾಡ, ಮಂಗಳೂರು, ಚಿಕ್ಕಮಗಳೂರು, ದಾವಣಗೆರೆ, ಯಾದಗಿರಿ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಮೇಲೂ ದಾಳಿ: ಉತ್ತರ ಕನ್ನಡ ಜಿಲ್ಲೆಯ ಸಿರಸಿಯಲ್ಲಿ ವೃತ್ತ ನಿರೀಕ್ಷಕರಾಗಿರುವ ಕೆ.ರಾಮರಾವ್‌ರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ೮೧.೧೭ ಲಕ್ಷ ರೂಪಾಯಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಸೇವಾವಧಿಯಲ್ಲಿ ೧೮ ಲಕ್ಷ ರೂಪಾಯಿ ಮಾತ್ರ ಆದಾಯ ಹೊಂದಿರುವ ರಾಮರಾವ್, ಬಳ್ಳಾರಿ ಹಲವೆಡೆ ಆಸ್ತಿಯನ್ನು ಹೊಂದಿದ್ದಾರೆ. ಬೆಂಗಳೂರಿನ ಟಿಚರ‍್ಸ್ ಕಾಲೋನಿಯಲ್ಲಿ ೬೫ ಲಕ್ಷ ರೂಪಾಯಿ ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಬ್ಯಾಂಕ್ ಖಾತೆಯ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮದ್ಯದಂಗಡಿ ಹೊಂದಿದ್ದ ನೌಕರ: ಎಂಎಸ್‌ಐಎಲ್‌ನ ಗುಲ್ಬರ್ಗ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಈರಣ್ಣಗೌಡರ ಮನೆ ಮೇಲೆ ದಾಳಿ ನಡೆಸಿದಾಗ ೯೦,೮೦,೮೩೩ ರೂಪಾಯಿ ಮೌಲ್ಯದ ಆಸ್ತಿ ಮತ್ತು ನಗದನ್ನು ಪತ್ತೆ ಹಚ್ಚಲಾಗಿದೆ. ೧೯೯೩ರಲ್ಲಿ ಸೇವೆಗೆ ಸೇರಿದಾಗಿನಿಂದ ಈವರೆಗೆ ೧೯.೫೦ ಲಕ್ಷ ರೂಪಾಯಿ ಮಾತ್ರ ಆದಾಯ ಹೊಂದಿರುವ ಈರಣ್ಣಗೌಡ ನಿಯಮಬಾಹಿರವಾಗಿ ಎರಡು ಮದ್ಯ ಮಾರಾಟ ಅಂಗಡಿಗಳ ಮಾಲಕರಾಗಿದ್ದಾರೆ. ಮದ್ಯ ಮಾರಾಟ ಮಾಡುವ ಸಂಸ್ಥೆಯಾದ ಎಂಎಸ್‌ಐಎಲ್‌ನ ನೌಕರರು ಈ ರೀತಿ ಅಂಗಡಿಗಳನ್ನು ಹೊಂದುವುದು ಕಾನೂನು ಬಾಹಿರವಾಗಿದೆ. ಆದಾಗ್ಯೂ ಈರಣ್ಣ ತಮ್ಮ ಸಹೋದರ ಹಾಗೂ ಭಾವಮೈದುನ ಹೆಸರಿನಲ್ಲಿ ಅಂಗಡಿಗಳನ್ನು ಹೊಂದಿದ್ದಾರೆ. ಜೊತೆಗೆ ೪ ಕಾರುಗಳು, ಒಂದು ಸರಕು ಸಾಗಾಣಿಕೆ ವಾಹನ ಹಾಗೂ ಒಂದು ಪಿಕ್‌ಅಪ್ ವ್ಯಾನ್ ಸೇರಿದಂತೆ ನಾಲ್ಕು ದ್ವೀಚಕ್ರವಾಹನಗಳನ್ನು ಹೊಂದಿದ್ದಾರೆ. ಬ್ಯಾಂಕ್‌ನ ಅವರ ಐದು ಖಾತೆಗಳ ಪರಿಶೀಲನೆ ನಡೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚು ವಾಹನ ಹೊಂದಿರುವ ಈರಣ್ಣಗೌಡ ಕಳ್ಳಸಾಗಾಣಿಕೆಯ ದಂದೆ ನಡೆಸುತ್ತಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಸಂತೋಷ ಹೆಗ್ಡೆ ಹೇಳಿದರು.
ದ್ವೀಗುಣ ಮೊತ್ತದ ಆಸ್ತಿ ಮಾಲಕ: ರೋಣದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಉಮಾಪತಿ ೧೯೮೭ರಲ್ಲಿ ಸೇವೆಗೆ ಸೇರಿದಂದಿನಿಂದ ಈವರೆಗೆ ೩೧.೫೦ ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ. ಆದರೆ, ದಾಳಿಯ ವೇಳೆ ೬೧,೩೧,೧೯೮೫ ಲಕ್ಷ ರೂಪಾಯಿ ಆಸ್ತಿ ಪತ್ತೆಯಾಗಿದೆ. ಕೊಪ್ಪಳದಲ್ಲಿ ೧೨ ಲಕ್ಷ ರೂಪಾಯಿ ಮೌಲ್ಯದ ಮನೆ ಮತ್ತು ೩೫ ಲಕ್ಷ ರೂಪಾಯಿ ಮೌಲ್ಯದ ಇನ್ನೊಂದು ನಿರ್ಮಾಣ ಹಂತದ ಮನೆ ಸೇರಿದಂತೆ ಅಪಾರ ಮೊತ್ತದ ಆಸ್ತಿ ಪತ್ತೆಯಾಗಿದೆ.
ಮಗಳ ಹೆಸರಿನಲ್ಲಿ ಬೇನಾಮಿ ಆಸ್ತಿ: ಮಂಗಳೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಎನ್.ಟಿ.ರಾಜ ಗೋಪಾಲ್‌ರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ೧,೨೬,೧೪,೦೫೭ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಇವರ ಮಗಳು ವೈದ್ಯೆ ಎಂದು ಹೇಳಲಾಗಿದ್ದು, ಆಕೆಯ ಹೆಸರಿನಲ್ಲಿ ೭.೫೩ ಲಕ್ಷ ರೂಪಾಯಿ ಮೌಲ್ಯದ ಸ್ಕೋಡಾ ಕಾರು ಇರುವುದು ಪತ್ತೆಯಾಗಿದೆ. ಇದರ ಬೆನ್ನತ್ತಿರುವ ಲೋಕಾಯುಕ್ತ ಪೊಲೀಸರು ಮಗಳು ಓದಿದ ಕಾಲೇಜು, ಅಲ್ಲಿ ಪಾವತಿಸಲಾಗಿರುವ ದೇಣಿಗೆ, ಶುಲ್ಕ, ಈಗ ಕೆಲಸ ಮಾಡುತ್ತಿರುವ ಸಂಸ್ಥೆ, ಆದಾಯದ ಕುರಿತು ತನಿಖೆ ನಡೆಸಲಾಗುವುದು ಎಂದು ಸಂತೋಷ ಹೆಗ್ಡೆ ಹೇಳಿದರು.
ರಾಜಗೋಪಾಲ್‌ರ ೨೫ ವರ್ಷ ಸೇವೆಯಲ್ಲಿ ೭೦,೩೪,೯೬೩ ರೂಪಾಯಿ ಮಾತ್ರ ಆದಾಯ ಹೊಂದಿದ್ದಾರೆ. ಆದಾಗ್ಯೂ, ಬ್ರಹ್ಮಾವರದಲ್ಲಿ ಪತ್ನಿ ಹೆಸರಿಗೆ ೨೧ ಲಕ್ಷ ರೂಪಾಯಿ ಮೌಲ್ಯದ ಮನೆ, ಮಗಳ ಹೆಸರಿಗೆ ಉಡುಪಿಯಲ್ಲಿ ನಿರ್ಮಾಣ ಹಂತದಲ್ಲಿರುವ ೩೭ ಲಕ್ಷ ರೂಪಾಯಿ ಮೌಲ್ಯದ ಮನೆ, ೧೫ ಲಕ್ಷ ರೂಪಾಯಿ ಮೌಲ್ಯದ ಪ್ಲಾಟ್, ೧೪ ಲಕ್ಷ ರೂಪಾಯಿ ಮೌಲ್ಯದ ಪೋರ್ಡ್ ಎನ್‌ಡೇವೊರ್ ಕಾರು, ೬೦೦ ಗ್ರಾಮ್ ಚಿನ್ನ, ಮೂರು ಗ್ರಾಮ್ ಬಳ್ಳಿ ಸೇರಿದಂತೆ ಇನ್ನಿತರ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ೧೫ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೆಗ್ಡೆ ಹೇಳಿದರು.
ಸಿಕ್ಕಿಬಿದ್ದ ಇ.ಒ.: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಪಂಚಾಯತ್‌ನ ಮುಖ್ಯಾಧಿಕಾರಿಯಾಗಿರುವ ಇ.ಅಂಜನ್ ಕುಮಾರ್ ೧೯೯೧ರಲ್ಲಿ ಸೇವೆಗೆ ಸೇರ್ಪಡೆಯಾದಾಗಿನಿಂದ ೩೫ ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ. ಆದರೆ, ದಾಳಿಯ ವೇಳೆ ೭೨.೬೨ ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬಹುತೇಕ ಆಸ್ತಿಗಳು ಭೂಮಿ ರೂಪದಲ್ಲಿದ್ದು, ಬೇನಾಮಿ ಹೆಸರಿನಲ್ಲಿವೆ.
ದ್ವೀಚಕ್ರ ವಾಹನಗಳ ಮಮಕಾರ: ದಾವಣಗೆರೆ ಜಿಲ್ಲೆಯ ಚನ್ನಗಿರಿ ಲೋಕೋಪಯೋಗಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಹನುಮಂತಪ್ಪ ೧೯೮೭ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದು, ಈವರೆಗೆ ೨೭ ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ. ದಾಳಿ ನಡೆಸಿದಾಗ ೭೯,೧೩,೦೨೯ ರೂಪಾಯಿ ಆಸ್ತಿ ಪತ್ತೆಯಾಗಿದೆ. ಮೂರು ದ್ವೀಚಕ್ರವಾಹನ, ದಾವಣಗೆರೆಯಲ್ಲಿ ೪೦ ಲಕ್ಷ ರೂಪಾಯಿ ಮೌಲ್ಯದ ಮನೆ, ಅರ್ಧ ಕೆ.ಜಿ. ಚಿನ್ನ, ೩ ಕೆ.ಜಿ.ಬೆಳ್ಳಿ, ೧೬ ಜೀವವಿಮಾಪಾಲಸಿಗಳು, ಬಿರ್ಲಾ ಇನ್ಸೂರೆನ್ಸ್ ಕಂಪೆನಿಯಲ್ಲಿ ೧೦ ಪಾಲಸಿಗಳ ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆ ನಡೆಯುತ್ತಿದೆ ಎಂದು ಹೆಗ್ಡೆ ತಿಳಿಸಿದರು.
ಯಾದಗಿರಿ ಜಿಲ್ಲಾ ಪಂಚಾಯತ್ ಸುರಪೂರ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮದರ್ಜೆ ಸಹಾಯಕರಾಗಿರುವ ಜಯರಾಮ ಸೋಮಪ್ಪ ಸೇವಾವಧಿಯಲ್ಲಿ ೨೦ ಲಕ್ಷ ರೂಪಾಯಿ ಆದಾಯ ಹೊಂದಿದ್ದರೂ, ದಾಳಿಯ ವೇಳೆ ೪೧.೨೩ ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಮೂವರು ಸಬ್‌ರಿಜಿಸ್ಟರ್‌ಗಳು:
ಇಂದು ದಾಳಿಗೆ ಒಳಗಾದ ಅಧಿಕಾರಿಗಳ ಪೈಕಿ ಚಿಕ್ಕಬಳ್ಳಾಪುರ ಉಪನೋಂದಾವಣಾಧಿಕಾರಿ ವಿಷ್ಣುತೀರ್ಥ ಈ ಮೊದಲೆ ಲೋಕಾಯುಕ್ತ ದಾಳಿಗೆ ಸಿಲುಕಿ ತಪ್ಪಿಸಿಕೊಂಡಿದ್ದವರು. ಸೇವಾವಧಿಯಲ್ಲಿ ೩೦ ಲಕ್ಷ ರೂಪಾಯಿ ಆದಾಯ ಹೊಂದಿದ್ದ ವಿಷ್ಣುತೀರ್ಥ ಇಂದಿನ ದಾಳಿಯಲ್ಲಿ ೯೦,೭೭,೮೨೨ ಮೌಲ್ಯದ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.
ಗೋಣಿಚೀಲದಲ್ಲಿ ಹಣ ಸಾಗಿಸಿದ್ದರು: ೨೦೦೭ರಲ್ಲಿ ದಾಳಿ ನಡೆಸಿದಾಗ ತನ್ನ ಮನೆಯಿಂದ ಮೂರು ಗೋಣಿಚೀಲದಲ್ಲಿ ಹಣವನ್ನು ತನ್ನ ಮಧ್ಯವರ್ತಿ ಮೂಲಕ ಬೇರೆಡೆ ಸಾಗಿಸಿದ್ದರು ಎಂದು ಹೆಗ್ಡೆ ತಿಳಿಸಿದರು. ಅಂದು ಹಣ ಸಾಗಿಸುವಾಗ ಗೋಣಿಚೀಲದಲ್ಲಿನ ಸ್ವಲ್ಪ ಕಡಿಮೆಯಾಗಿದೆ ಎಂದು ಆರೋಪಿಸಿ ವಿಷ್ಣುತೀರ್ಥ ಮಧ್ಯವರ್ತಿಯ ೨ ಮನೆಗಳನ್ನು ಮಾರಾಟ ಮಾಡಿಸಿ ತಾನೇ ಖರೀದಿಸಿದ್ದಾರೆ.
ಇವುಗಳ ಮೌಲ್ಯ ೫೧ ಲಕ್ಷ ರೂಪಾಯಿಗಳಾಗಿದೆ. ಮನೆ ಕಳೆದುಕೊಂಡ ಮಧ್ಯವರ್ತಿ ಉಪನೋಂದಣಾಧಿಕಾರಿಯ ಎಲ್ಲ ಆಸ್ತಿಗಳ ವಿವರ ನೀಡಿದ್ದಾರೆ. ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು, ಅಂತಿಮವಾಗಿ ಮ್ಯಾಜಿಸ್ಟೆಟರ ಮುಂದೆಯೇ ಹೇಳಿಕೆ ಪಡೆಯಲಾಗುವುದು ಎಂದು ಹೆಗ್ಡೆ ತಿಳಿಸಿದರು.
ಉಡುಪಿಯ ಉಪನೋಂದಣಾಧಿಕಾರಿ ಎಂ.ಪರಮೇಶ್ವರಪ್ಪನವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ೮೫,೦೯,೪೯೯ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ. ೧೯೮೨ರಲ್ಲಿ ಸೇವೆಗೆ ಸೇರಿದ ಇವರ ಈವರೆಗಿನ ಆದಾಯ ೫೬ ಲಕ್ಷ ರೂಪಾಯಿ, ದಾಳಿಯ ವೇಳೆ ಉಡುಪಿಯ ಕಡೆಕರು ಗ್ರಾಮದಲ್ಲಿ ೧೫ ಲಕ್ಷ ರೂಪಾಯಿ ಮೌಲ್ಯದ ಮನೆ, ೪.೭೮ ಲಕ್ಷ ರೂಪಾಯಿ ಮೌಲ್ಯದ ೨೨ ಸೆಂಟ್ಸ್ ಭೂಮಿ, ದೇವರಾಜ ಟವರ್‌ನಲ್ಲಿ ೩.೫ ಲಕ್ಷ ರೂಪಾಯಿ ಮೌಲ್ಯದ ಅಂಗಡಿ ಮಳಿಗೆ, ೫೫ಲಕ್ಷ ರೂಪಾಯಿ ಮೌಲ್ಯದ ಎರಡು ಮನೆಗಳು ಸೇರಿದಂತೆ ವಾಹನ, ಚಿನ್ನಬೆಳ್ಳಿ ಆಭರಣಗಳು ಪತ್ತೆಯಾಗಿವೆ.
ಬೆಂಗಳೂರಿನ ಬೋಮ್ಮನಹಳ್ಳಿಯಲ್ಲಿ ಉಪನೋಂದಾಣಾಧಿಕಾರಿಯಾಗಿರುವ ಚಲುವರಾಜು ಎಂಬವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ೯೩,೯೨,೫೦೦ ರೂ.ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ೬೦ ಮತ್ತು ೪೮ ಲಕ್ಷ ರೂಪಾಯಿ ಮೌಲ್ಯ ಎರಡು ಮನೆಗಳು ಇವರ ಪ್ರಮುಖ ಆಸ್ತಿಯಾಗಿವೆ. ಈ ಅಧಿಕಾರಿ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಸ್ತಿ ವಿವರಗಳನ್ನು ನೀಡಿಲ್ಲ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.
ಲೋಕಾಯುಕ್ತ ಎಡಿಜಿಪಿ ರೂಪ್‌ಕುಮಾರ್ ದತ್ತಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ದಾಳಿಗೆ ಸಿಕ್ಕಿ ಬಿದ್ದ ಅಧಿಕಾರಿಗಳು-ಜಪ್ತಿ ಮಾಡಲಾದ ಆಸ್ತಿ ರಾಮರಾವ್, ಸರ್ಕಲ್ ಇನ್ಸ್‌ಪೆಕ್ಟರ್, ಶಿರಶಿ. ೮೧,೧೭,೦೦೦ ಈರಣ್ಣಗೌಡ, ಎಫ್‌ಡಿಎ, ಎಂಎಸ್‌ಐಎಲ್, ಗುಲ್ಬರ್ಗ ೯೦,೮೦,೮೩೩ ಉಮಾಪತಿ, ಎಇ, ಪಿಡಬ್ಲೂಡಿ, ರೋಣ ೬೭,೩೧,೯೮೫ ಎನ್.ಟಿ.ರಾಜಗೋಪಾಲ್, ಇಇ, ಸಣ್ಣ ನೀರಾವರಿ ಇಲಾಖೆ, ಮಂಗಳೂರು ೧,೨೬,೧೪,೦೫೭ ಇ.ಅಂಜನ್‌ಕುಮಾರ್, ಕಾರ್ಯನಿವಾರ್ಹಣಾಧಿಕಾರಿ ಕಡೂರು ೭೨,೬೨,೦೦೦ ಹನುಮಂತಪ್ಪ, ಎ.ಇ, ಪಿಡಬ್ಲೂಡಿ, ಚನ್ನಗಿರಿ ೭೯,೧೩,೦೨೯ ಜಯರಾಮ್‌ಸೋಮಪ್ಪ ಎಫ್‌ಡಿಎ, ಸೂರಪುರ, ಯಾದಗಿರಿ ೪೧,೨೩,೦೦೦ ಎಂ.ಪರಮೇಶ್ವರ, ಸಬ್‌ರಿಜಿಸ್ಟರ್, ಉಡುಪಿ ೮೫,೦೯,೪೯೯ ವಿಷ್ಣುತೀರ್ಥ, ಸಬ್‌ರಿಜಿಸ್ಟರ್, ಚಿಕ್ಕಬಳ್ಳಾಪುರ ೯೦,೭೭,೮೨೨ ಚಲುವರಾಜ್, ಸಬ್‌ರಿಜಿಸ್ಟರ್, ಬೋಮ್ಮನಹಳ್ಳಿ ೯೩,೯೨,೫೦೦
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ /ಹೆಚ್ಚಿನ ಚಿತ್ರಗಳು-ದುರ್ಗಪ್ರಸಾದ್ ಕೆ. ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
| »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ಜುವೆಲ್ಲರ್ಸ್ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ; ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | | »ಹಾಸನದ ಆರು ತಾಲೂಕುಗಳು ಬರಪೀಡಿತ: ಬೇಸಿಗೆ ಸಮಸ್ಯೆ ನಿವಾರಣೆಗೆ ಕ್ರಮ: ನೂತನ ಜಿಲ್ಲಾಧಿಕಾರಿ ಮೋಹನ್‌ರಾಜ್ | | »ರೈತರ ಮೇಲೆ ನಿರಂತರ ದಬ್ಬಾಳಿಕೆ ತಡೆಗೆ ಸರಕಾರ ವಿಫಲ: ಕುಮಾರಸ್ವಾಮಿ ಆರೋಪ | | »ಪುಣ್ಯಕ್ಷೇತ್ರದಲ್ಲಿ ಗಾಂಜಾ ಬಾಬಾಗಳ ದಮ್ ಮಾರೋ ದಮ್* | |