ತಂಡದಿಂದ ದಾಂಧಲೆ: ಜಟ್ಟಿಪಳ್ಳ ಕ್ರೈಸ್ತ ಧರ್ಮಗುರುವಿನ ವಾಹನ ಜಖಂ
ಪ್ರಕಟಿಸಿದ ದಿನಾಂಕ : 2010-03-19
ಮಂಗಳೂರು, ಮಾ.೧೮: ಪೆಂಟಕೋಸ್ಟಲ್ ಚರ್ಚ್ ಸಮುದಾಯಕ್ಕೆ ಸೇರಿದ ಅಸೆಂಬ್ಲೀಸ್ ಆಫ್ ಗಾಡ್ ಚರ್ಚ್‌ನ ಧರ್ಮಗುರು ಎನ್.ಎಸ್. ವಲ್ಸಲನ್ ಎಂಬವರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ಎಂಬಲ್ಲಿ ಸೋಮವಾರ ರಾತ್ರಿ ಸುತ್ತುವರಿದ ತಂಡವೊಂದು ಅವರಿದ್ದ ವಾಹನವನ್ನು ಜಖಂಗೊಳಿಸಿದೆ ಎಂದು ಚರ್ಚ್‌ನ ಪ್ರತಿನಿಧಿಗಳು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಮಾ.೧೫ರಂದು ರಾತ್ರಿ ಜಟ್ಟಿಪಳ್ಳ ಎಂಬಲ್ಲಿ ಮೂಲತಃ ಗದಗದಿಂದ ಬಂದು ನೆಲೆಸಿದ ಸಂಕಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಅಸೆಂಬ್ಲೀಸ್ ಆಫ್ ಗಾಡ್ ಚರ್ಚ್‌ನ ಧರ್ಮಗುರು ವಲ್ಸಲನ್‌ರನ್ನು ಮನೆಗೆ ಆತ್ಮೀಯತೆಯಿಂದ ಆಹ್ವಾನಿಸಿದ್ದರು.
ವಲ್ಸಲನ್ ರಾತ್ರಿ ಸುಮಾರು ೮ ಗಂಟೆಗೆ ಸಂಕಪ್ಪರ ಮನೆಗೆ ತೆರಳಿ ಊಟ ಮಾಡಿ ಹಿಂದಿರುಗಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಬಂದ ಸಂಘ ಪರಿವಾರದವರೆನ್ನಲಾದ ಸದಸ್ಯರ ಗುಂಪೊಂದು ವಾಹನವನ್ನು ಅಡ್ಡಗಟ್ಟಿ ದಾಂಧಲೆ ನಡೆಸಿದ್ದು, ವಾಹನ ವನ್ನು ಜಖಂಗೊಳಿಸಿದೆ ಹಾಗೂ ಮನೆಯ ಮಾಲಕ ಸಂಕಪ್ಪರಿಗೆ ಬೆದರಿಕೆ ಹಾಕಿದೆ. ಈ ನಡುವೆ ಐಜಿಪಿ ಹಾಗೂ ಜಿಲ್ಲಾ ಎಸ್ಪಿಯನ್ನು ಸಂಪರ್ಕಿಸಿದಾಗ ಅವರು ತಕ್ಷಣ ಸ್ಪಂದಿಸಿದ್ದು, ಸ್ಥಳಕ್ಕಾಗ ಮಿಸಿದ ಸುಳ್ಯ ಪೊಲೀಸರು ವಲ್ಸಲನ್ ಹಾಗೂ ಸಂಕಪ್ಪರನ್ನು ಠಾಣೆಗೆ ಕರೆದು ಕೊಂಡು ಹೋಗಿ ಆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಿದ್ದರು ಎಂದು ಚರ್ಚ್‌ನ ಪ್ರತಿನಿಧಿಗಳು ತಿಳಿಸಿದ್ದಾರೆ.
ಮರುದಿನ ಯುಗಾದಿಯಾದುದ ರಿಂದ ಧರ್ಮಗುರುವನ್ನು ಹೊರಗೆ ಬಿಟ್ಟರೆ ತೊಂದರೆಯಾದೀತು ಎಂದು ಪೊಲೀಸರು ಅವರನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿದ್ದು, ಈ ನಡುವೆ ಧರ್ಮ ಗುರು ಮತಾಂತರದಲ್ಲಿ ತೊಡಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಪರಿವಾರಕ್ಕೆ ಸೇರಿದವರೆ ನ್ನಲಾದ ಕೆಲವರು ಸಹಿ ಮಾಡಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಯಲ್ಲಿ ಇದೀಗ ಸುಳ್ಯ ಪೊಲೀಸರು ಧರ್ಮಗುರುವನ್ನ್ನು ಜಿಲ್ಲಾ ನ್ಯಾಯಾಲ ಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಘಟನೆಯ ಬಗ್ಗೆ ಚರ್ಚ್‌ನ ಪ್ರತಿನಿಧಿ ಗಳು ಪತ್ರಿಕೆಗೆ ವಿವರಿಸಿದ್ದಾರೆ.