| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬಂಟ್ವಾಳ: ಇಲ್ಲಿ ಯಶಸ್ವಿಯಾಗಿದೆ ೨೪ಗಂಟೆಯ ಆರೋಗ್ಯ ಸೇವೆ |
ಪ್ರಕಟಿಸಿದ ದಿನಾಂಕ : 2010-03-19
ಬಂಟ್ವಾಳ, ಮಾ.೧೮: ತಾಲೂಕಿನಲ್ಲಿನ ಕುರ್ನಾಡು, ಮಾಣಿ ಹಾಗೂ ಪೂಂಜಾಲಕಟ್ಟೆಯ ಆರೋಗ್ಯ ಕೇಂದ್ರಗಳು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ೨೪x೭ ಸೇವೆಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿದ್ದು ಮೂರೂ ಕೇಂದ್ರಗಳೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಕುರ್ನಾಡು ಹಾಗೂ ಮಾಣಿ ಆರೋಗ್ಯ ಕೇಂದ್ರಗಳಿಗೆ ಸೋಮವಾರ ಇಲಾಖೆಯ ಅಧಿಕಾರಿಗಳು ಹಾಗೂ ಪತ್ರಕರ್ತರ ನಿಯೋಗ ಕ್ಷಣೆ ಪ್ರವಾಸ ಕೈಗೊಂಡು ೨೪x೭ ಯೋಜನೆಯ ಬಗ್ಗೆ ಅಧ್ಯಯನ ನಡೆಸಿತು.
೨೪x೭ ಎಂಬುದು ವಾರದ ಏಳು ದಿನದಲ್ಲಿಯೂ ೨೪ ಗಂಟೆ ನಿರಂತರ ಸೇವೆ ನೀಡುವ ವ್ಯವಸ್ಥೆ. ಕುರ್ನಾಡು ಆರೋಗ್ಯ ಕೇಂದ್ರದಲ್ಲಿ ಈ ಸೇವೆ ೨೦೦೮ರ ಸೆಪ್ಟೆಂಬರ್‌ನಲ್ಲಿ ಜಾರಿಯಾಗಿದ್ದು, ಇದುವರೆಗೆ ಈ ಯೋಜನೆಯಡಿ ೫೦ಕ್ಕೂ ಅಧಿಕ ಹೆರಿಗೆಯಾಗಿದೆ. ಪ್ರತೀ ತಿಂಗಳೂ ೩ರಿಂದ ೬ ಹೆರಿಗೆಯಾಗುತ್ತಿದೆ. ಇದಕ್ಕೂ ಮೊದಲು ಈ ಆಸ್ಪತ್ರೆಯಲ್ಲಿ ಹೆರಿಗೆಯಾಗುತ್ತಿದ್ದುದೇ ಅಪರೂಪ. ಹತ್ತಿರದಲ್ಲಿಯೇ ಇರುವ ಖಾಸಗಿ ಆಸ್ಪತ್ರೆಗಳೂ ವಿವಿಧ ಆರೋಗ್ಯ ಯೋಜನೆಗಳನ್ನು ಸ್ಥಳೀಯ ವಾಗಿ ಹಮ್ಮಿಕೊಳ್ಳುತ್ತಿರುವುದರಿಂದ, ಜನಾಕ ರ್ಷಣೆ ಅತ್ತ ಹೆಚ್ಚಾಗುತ್ತಿದೆ. ಆದರೂ ಸರಕಾರದ ಈ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಇಲ್ಲಿನ ವೈದ್ಯಾಧಿಕಾರಿ ಡಾ.ಗೋಪಿ ಪ್ರಕಾಶ್ ತಿಳಿಸಿದ್ದಾರೆ.
೨೦೦೮ರ ಆಗಸ್ಟ್ ನಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಯೋಜನೆ ಜಾರಿ ಯಾಗಿದ್ದು ಇದುವರೆಗೆ ೧೨೯ ಹೆರಿಗೆಯಾಗಿದೆ. ತಿಂಗಳಿಗೆ ಸರಾಸರಿ ೧೦ರಿಂದ ೧೨ ಹೆರಿಗೆಯಾ ಗುತ್ತಿದೆ. ಸಮುದಾಯದ ಪಾಲ್ಗೊಳ್ಳುವಿಕೆ ಯೊಂದಿಗೆ ಇಲ್ಲಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.
ಇದೇ ಸಂದರ್ಭ ಪತ್ರಕರ್ತರಿಗೆ ಯೋಜನೆಯ ಬಗ್ಗೆ ವಿವರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಹೆರಿಗೆ ಸಂದರ್ಭದಲ್ಲಿ ಶಿಶು ಮರಣ, ತಾಯಂದಿರ ಮರಣವನ್ನು ತಡೆಗಟ್ಟಲು ಆದ್ಯತೆ ನೀಡಲಾಗಿದೆ,ಉತ್ತಮ ಆರೋಗ್ಯ ಸೇವೆ ನೀಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದರು.
ಜಿಲ್ಲಾ ಮಲೇರಿಯಾ ಪರಿಕ್ಷಣಾಧಿಕಾರಿ ಜಯರಾಮ ಪೂಜಾರಿ,ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಆರೋಗ್ಯ ನಿರೀಕ್ಷಕ ಎಸ್.ಎ.ರಹಿಮಾನ್, ವೈದ್ಯಾಧಿಕಾರಿಗಳಾದ ಡಾ.ಗೋಪಿ ಪ್ರಕಾಶ್, ಡಾ.ಪದ್ಮನಾಭ ಭಟ್ ನಿಯೋಗದಲ್ಲಿದ್ದು ಮಾಹಿತಿ ನೀಡಿದರು.
ಸೌಲಭ್ಯಗಳು...
ಮೇಲ್ದರ್ಜೆಗೇರಿಸಿರುವ ಆರೋಗ್ಯ ಕೇಂದ್ರಗಳಿಗೆ ಆಧುನಿಕ ಸೌಲಭ್ಯವಿರುವ ಸುಸಜ್ಜಿತ ಹೆರಿಗೆ ಕೊಠಡಿ, ೨೪ ಗಂಟೆ ಬಿಸಿ ನೀರಿನ ವ್ಯವಸ್ಥೆ, ದಿನವಿಡೀ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿ ಸಹಿತ ೩ ಮಂದಿ ಸ್ಟಾಫ್ ನರ್ಸ್, ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಜನವಾಹಿನಿ ಅಂಬ್ಯುಲೆನ್ಸ್, ಪ್ರತಿ ವಾರ ತಪಾಸಣೆ ವ್ಯವಸ್ಥೆ ಸೌಲಭ್ಯಗಳಿವೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|