| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ನಾಳೆ ಖಾಝಿ ಸೂಫಿವರ್ಯ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧಿಕಾರ ಸ್ವೀಕಾರ |
ಪ್ರಕಟಿಸಿದ ದಿನಾಂಕ : 2010-03-19
ಮಂಗಳೂರು, ಮಾ.೧೮: ದ.ಕ. ಜಿಲ್ಲಾ ಖಾಝಿಯಾಗಿ ಇಸ್ಲಾಮಿಕ್ ಮತ ಪಂಡಿತ, ಸೂಫಿವರ್ಯ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮಾ.೨೦ರಂದು ನಗರದ ಬಂದರ್‌ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಸಂಜೆ ೪ ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ ರಶೀದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಖಾಝಿ ಪಟ್ಟ ನೀಡಲಿದ್ದು, ಕಾಸರಗೋಡು ಸಂಯುಕ್ತ ಖಾಝಿ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಸಮಸ್ತ ಮುಶಾವರ ಸದಸ್ಯ ಅಲ್‌ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಉಡುಪಿ ಸಂಯುಕ್ತ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಮೂಡಿಗೆರೆ ಖಾಝಿ ಅಲ್‌ಹಾಜ್ ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್, ಅತ್ರಾಡಿ ಖಾಝಿ ಅಲ್‌ಹಾಜ್ ವಿ.ಕೆ.ಅಬೂಬಕರ್ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಇಬಾಹೀಂ ದಾರಿಮಿ, ಡೊಂಗರಕೇರಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದಿರ್ ಸಾಹೇಬ್, ಬಂಬ್ರಾಣ ಮುದರ್ರಿಸ್ ಅಲ್‌ಹಾಜ್ ಅಬ್ದುಲ್ ಖಾದರ್ ಮುಸ್ಲಿಯಾರ್, ಸೀರತ್ ಕಮಿಟಿಯ ಮಂಗಳೂರು ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ವಕ್ಫ್ ಅಧ್ಯಕ್ಷ ಅಲ್‌ಹಾಜ್ ಯೆನೆಪೋಯ ಮುಹಮ್ಮದ್ ಕುಂಞಿ, ಶಾಸಕ ಯು.ಟಿ.ಖಾದರ್, ಅಲ್‌ಹಾಜ್ ಸಿ.ಎ.ಮುಹಮ್ಮದ್ ಶಾಫಿ, ಮಾಜಿ ಮೇಯರ್ ಕೆ.ಅಶ್ರಫ್ ಸೇರಿದಂತೆ ಧಾರ್ಮಿಕ ವಿದ್ವಾಂಸರು, ಭಾಗವಹಿಸಲಿದ್ದಾರೆ.
ಅಂದು ಸಂಜೆ ೩:೩೦ಕ್ಕೆ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ಹಿಫಾಲುಲ್ ಕುರ್‌ಆನ್ ಮತ್ತು ಅಫ್ಝಲುಲ್ ಉಲೆಮಾ ಅರೆಬಿಕ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವರು ಎಂದು ಹಾಜಿ ಎಸ್.ಎಂ. ರಶೀದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಸೀದಿಯ ಟ್ರಸ್ಟಿಗಳಾದ ಹನೀಫ್ ಹಾಜಿ, ಸಯ್ಯದ್ ಅಹ್ಮದ್ ಭಾಷಾ ತಂಙಳ್ ಉಪಸ್ಥಿತರಿದ್ದರು. ನೂತನ ಖಾಝಿಯ ಪರಿಚಯ
ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕಾಸರಗೋಡು ಜಿಲ್ಲೆಯ ಚೆಂಬರಿಕ ಎಂಬಲ್ಲಿ ೧೯೪೭ರ ಆಗಸ್ಟ್ ೧೦ರಂದು ಜನಿಸಿದರು. ತ್ವಾಕಾ ಉಸ್ತಾದರು ಉತ್ತರ ಪ್ರದೇಶದ ದೇವ್‌ಬಂದ್‌ನ ಅರೆಬಿಕ್ ಕಾಲೇಜಿನಲ್ಲಿ ದೌರ ಹದೀಸ್, ದೌರಾ ಮಹ್‌ಕೂಲತ್, ದೌರ ಅದಬ್ ಮತ್ತು ದೌರ ತಫ್ಸೀರ್ ಎಂಬ ನಾಲ್ಕು ಪದವಿಯನ್ನು ಪಡೆದಿದ್ದಾರೆ. ಈಜಿಪ್ಟ್‌ನ ಅಝ್‌ಹರ್ ಯುನಿವರ್ಸಿಟಿಯಿಂದ ಉಫ್‌ಯಿಲ್ ಫಿಖ್ಹ್ (ಅಡಿಸ್ಥಾನ ಕರ್ಮಶಾಸ್ತ್ರ) ನಲ್ಲಿ ಪದವಿ ಪಡೆದಿದ್ದಾರೆ. ೩೦ ವರ್ಷಗಳ ಕಾಲ ಒಮಾನ್‌ನ ಸಲಾಲದಲ್ಲಿ ತ್ವಾಕ ಎಂಬಲ್ಲಿ ಸುಲ್ತಾನರ ಮಸೀದಿಯಲ್ಲಿ ಇಮಾಮ್ ಮತ್ತು ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮುತ್ತಾತ ಶೈಖುನ ಅಬ್ದುಲ್ಲ ಹಾಜಿ (ಅವ್‌ಲಾಜಿ)೧೯೮೯ರಲ್ಲಿ ಮಂಗಳೂರಿನ ಖಾಝಿ ಯಾಗಿ ಸೇವೆ ಸಲ್ಲಿಸಿದ್ದರು. ತ್ವಾಕ ಉಸ್ತಾದರಿಗೆ ದ.ಕ. ಜಿಲ್ಲೆಯೊಂದಿಗೆ ಬಹಳ ಹಿಂದಿನಿಂದಲೂ ಸಂಪರ್ಕವಿದ್ದು, ಉಸ್ತಾದರು ಪುತ್ತೂರಿನ ಕಂಬ್ಲೊಟ್ ಮುಹಮ್ಮದ್ ಮುಸ್ಲಿಯಾರ್ ಕುಟುಂಬದ ಹೆಣ್ಣನ್ನು ಮದುವೆಯಾಗಿದ್ದಾರೆ. ಇತ್ತೀಚೆಗೆ ನಿಧನರಾದ ಮಂಗಳೂರು ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರ ಸಹೋದರಿಯ ಪುತ್ರ ಇವರಾಗಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|