| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
21ರಂದು ಯಕ್ಷಗಾನ ಬಯಲಾಟ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-19
ಮಂಗಳೂರು, ಮಾ.೧೮: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ೨೦೦೮ ಮತ್ತು ೨೦೦೯ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಮಾ.೨೧ರಂದು ಸಂಜೆ ೪:೩೦ಕ್ಕೆ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆಯಲ್ಲಿ ನಡೆ ಯಲಿರುವ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕನ್ನಡ ಮತ್ತು ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರಕಾರದ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್, ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ೬:೩೦ರಿಂದ ೯ ಗಂಟೆಯವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಗಳಿಂದ ಸುದರ್ಶನ ವಿಜಯ ಹಾಗೂ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕುಂಬಾಸಿ ತಂಡದಿಂದ ‘ಧರ್ಮಾಂಗದ ದಿಗ್ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕರ್ನಾಟಕ ಯಕ್ಷಗಾನ ಅಕಾಡಮಿಯು ಈಗ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಯಾಗಿ ಮಾರ್ಪಟ್ಟಿದೆ. ಅಕಾಡಮಿಯ ವ್ಯಾಪ್ತಿಗೆ ತೆಂಕುತಿಟ್ಟು, ಬಡಗುತಿಟ್ಟು, ಸಣ್ಣಾಟ, ದೊಡ್ಡಾಟ, ಕೃಷ್ಣ ಪಾರಿಜಾತ, ಘಟ್ಟದ ಕೋರೆ ಮೊದಲಾದ ಕಲಾ ಪ್ರಕಾರಗಳೂ ಸೇರಿವೆ ಎಂದು ಕುಂಬ್ಳೆ ಸುಂದರ ರಾವ್ ತಿಳಿಸಿದರು.
೨೦೦೮ನೆ ಸಾಲಿನ ಗೌರವ ಪ್ರಶಸ್ತಿಗೆ ಎಚ್.ಸುಬ್ಬಣ್ಣ ಭಟ್, ಕರ್ಕಿ ನಾರಾಯಣ ಹಾಸ್ಯಗಾರ, ಮೊಳಹಳ್ಳಿ ಹೆರಿಯ ನಾಯ್ಕ್, ಹೊಸಹಿತ್ಲು ಮಹಾಲಿಂಗ ಭಟ್, ವಂಡ್ಸೆ ನಾರಾಯಣ ಗಾಣಿಗ, ರಾಮಯ್ಯ ರೈ ಮುಂಬೈ, ಕೆ. ಫಕೀರ ಗೇರುಕಟ್ಟೆ, ಮಾದೇವಯ್ಯ ನೂಲಿ, ಕ.ನ. ದಾಸಾಚಾರ್, ಸಿದ್ದಣ್ಣ ಚನ್ನಪ್ಪ ಸರಸಂಬಿ ಆಯ್ಕೆಯಾಗಿದ್ದಾರೆ.
೨೦೦೯ನೆ ಸಾಲಿನ ಗೌರವ ಪ್ರಶಸ್ತಿಗೆ ಕಡಂದೇಲು ಪುರುಷೋತ್ತಮ ಭಟ್, ಪೆರುವಡಿ ನಾರಾಯಣ ಭಟ್, ಮತ್ಯಾಡಿ ನರಸಿಂಹ ಶೆಟ್ಟಿ, ಧರ್ಮಶಾಲೆ ಮಹಾಬಲೇಶ್ವರ ಭಟ್, ಮುಖ್ಯಪ್ರಾಣ ಕಿನ್ನಿಗೋಳಿ, ಶೀನಪ್ಪ ರೈ ಸಂಪಾಜೆ, ಎಂ.ಕೆ.ರಮೇಶ್ ಆಚಾರ್ಯ, ಖಾದರ್ ಸಾಬ್, ಕೆ.ಬಿ.ಜಯಚಂದ್ರ ರಾಜ ಅರಸು, ಕಾಶಿಬಾಯಿ ದಾದನಟ್ಟಿ ಆಯ್ಕೆಯಾಗಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|