| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕೊಂಕಣಿ ಅಕಾಡಮಿ ಗೌರವ ಪ್ರಶಸ್ತಿ ಪ್ರಕಟ: 28ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-19
ಮಂಗಳೂರು, ಮಾ.೧೮: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ೨೦೦೯ನೆ ಸಾಲಿನ ಗೌರವ ಪ್ರಶಸ್ತಿಗಾಗಿ ವಿ.ವಿ.ಶೆಣೈ (ಭಾಷೆ ಸಂಘಟಕ), ವಲೇರಿಯನ್ ಡಿಸೋಜಾ (ಸಾಹಿತ್ಯ), ರಿಚರ್ಡ್ ಕ್ಯಾಸ್ತಲಿನೊ (ಕಲೆ, ಚಲನ ಚಿತ್ರ)ರನ್ನು ಆಯ್ಕೆ ಮಾಡಿದ್ದು, ಪುಸ್ತಕ ಪುರಸ್ಕಾರಕ್ಕಾಗಿ ಸಿರಿಲ್ ಜೆ.ಸಿಕ್ವೇರಾರ ಲೇಖನ ‘ಸುಳ್ಸುಳೆ’, ಎಂ.ಪಿ. ರಾಡ್ರಿಗಸ್‌ರ ಕವನ ‘ರುಮ್ಡಿ ಫುಲಾಂ’ ಆಯ್ಕೆಯಾಗಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೊಂಕಣಿ ಅಕಾಡಮಿಯ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಮಾ.೨೮ರಂದು ಉಡುಪಿಯ ಮಹಾತ್ಮ ಗಾಂಧಿ ಕಾಲೇಜಿನ Uತಾಂಜಲಿ ಮಂಟಪದಲ್ಲಿ ಸಂಜೆ ೫:೩೦ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಫೆಲಿಕ್ಸ್ ಎ.ಡಿಸೋಜಾರ ಸಣ್ಣ ಕತೆ ‘ಪಯ್ಣಾರ್ ವಿಂಚ್ಲೆಲಿ ಮೊತಿಯಾಂ’ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾ ಗಿದೆ. ಈಜುವಿಕೆಯಲ್ಲಿ ದಾಖಲೆ ಮಾಡಿ ರುವ ಗೋಪಾಲ ಖಾರ್ವಿಯನ್ನು ವಿಶೇಷ ಪ್ರಶಸ್ತಿಗಾಗಿ ಆಯ್ಕೆ ಮಾಡಲಾ ಗಿದೆ ಎಂದು ನಾರಾಯಣ ಖಾರ್ವಿ ತಿಳಿಸಿದರು.
ಗೌರವ ಪ್ರಶಸ್ತಿಯು ೧೦,೦೦೦ ರೂ. ನಗದು ಸ್ಮರಣಿಕೆ, ಪ್ರಮಾಣ ಪತ್ರವನ್ನು ಒಳಗೊಂಡಿದೆ. ಪುಸ್ತಕ ಬಹುಮಾನವು ೫೦೦೦ ರೂ. ನಗದು, ಸ್ಮರಣಿಕೆ, ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ, ವಿ.ಎಸ್. ಆಚಾರ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಾರಾಯಣ ಖಾರ್ವಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ನಾಮದೇವ್ ಶೆಣೈ, ಹರೀಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
೨೦-೨೧ರಂದು ಹೊನ್ನಾವರದಲ್ಲಿ ಜಾನಪದ ಉತ್ಸವ
ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ಮಾತೃ ಛಾಯಾ ಟ್ರಸ್ಟ್ ಸಹಕಾರದಲ್ಲಿ ಮಾ.೨೦ ಮತ್ತು ೨೧ರಂದು ಹೊನ್ನಾವರದದ ಕಾಸರಕೋಡಿನ ಕಡಲ ತೀರ (ಹೀರೇಮಠ ಬೀಚ್)ದಲ್ಲಿ ರಾಜ್ಯ ಮಟ್ಟದ ಕೊಂಕಣಿ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಖಾರ್ವಿ ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|