ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-03-18
ಮಂಗಳೂರು,ಮಾ.18: ಭೂಗತ ದೊರೆಗಳ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ್‌ಗೆ ನ್ಯಾಯಲಯವು ಇಂದು ಜಾಮೀನು ಮೇಲೆ ಬಿಡುಗಡೆ ಮಾಡಿದೆ.
ಭೂಗತ ಪಾತಕಿ ರವಿ ಪೂಜಾರಿಗೆ ಹಫ್ತಾ ವಸೂಲಿಗೆ ಸಹಕರಿಸಲು ನಗರದ ಖ್ಯಾತ ಉದ್ಯಮಿಗಳ ಫೋನ್ ನಂಬ್ರಗಳನ್ನು ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ್ ನಿಡುತ್ತಿರುವ ಆರೋಪದ ಮೇಲೆ ಕದ್ರಿ ಪೊಲೀಸರು ಮಾರ್ಚ್ 1ರಂದು ಅತ್ತಾವರ್‌ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.
ಆದರೆ ಭೂಗತ ದೊರೆ ರವಿ ಪೂಜಾರಿ ಜೊತೆ ನಂಟು ಹೊಂದಿದ ಆರೋಪದ ಮೇಲೆ ಬಂಧಿತನಾಗಿರುವ ಅತ್ತಾವರ್ ಮೇಲೆ ಸೆಕ್ಷನ್ 120 ಆಧಾರದಲ್ಲಿ ಪ್ರಕರಣ ದಾಖಲಿಸಿದ್ದು, ಈ ಸೆಕ್ಷನ್ ಕ್ರೈಂ ನಡೆದರೆ ಮಾತ್ರ ದಾಖಲಿಸಬಹುದಾಗಿದ್ದು ಅಂತಹ ಯಾವುದೇ ಕೃತ್ಯದಲ್ಲಿ ತನ್ನ ಕಕ್ಷಿದಾರರು ಭಾಗಿಯಾಗಿಲ್ಲ. ಮಾತ್ರವಲ್ಲದೆ ಅತ್ತಾವರ್‌ನಿಂದ ಯಾವುದೇ ಆಯುಧವನ್ನು ವಶಪಡಿಸಿಕೊಂಡಿಲ್ಲ ಎಂದಿರುವ ಅತ್ತಾವರ್ ವಕೀಲರಾದ ಆಶಾ ನಾಯಕ್, ಅತ್ತಾವರ್‌ಗೆ ಜಾಮೀನು ದೊರೆಯುವಲ್ಲಿ ಯಶಸ್ವಿಯಾಗಿದ್ದಾರೆ .
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-18 00:00:00
|
|
| riyaaz, nala | 2010-03-20 | | bugatha doreya samparkadallida prasad na bidugade poisarige bahala santhosha tandide poisarige aropiya bidogdeya sandrba poisaro thanna santhosavanu vekthapadicida rethiyanu newkanabahodo |
| Ronald, Udupi | 2010-03-19 | | Only difference is change of advocate! System is working as usual! May be there is no scope for improvement!! Can we assume the bottom line... Pay Hafta, otherwise you will be in trouble!!! Vasooli has mighty power!!! Dedication of G. Hosur favours fearless life to common man who earns a deserved living and life! If you make it big in life why you need to part it!? Why these goons are not touching Ambani\'s or Mahajans or Ballary mine Gowdas? Why barking in the home yard alone? |
| narendra naik, munbai | 2010-03-18 | | polisarannu nodi prasad na bidugade awarige bahala santhosha tandide? |
|