ಹೊನ್ನಾವರ: ಮಾ.20,21ರ೦ದು ಕಾಸರಕೋಡ ಕಡಲ ತೀರದಲ್ಲಿ ರಾಜ್ಯಮಟ್ಟದ ಕೊಂಕಣಿ ಜಾನಪದ ಉತ್ಸವ |
ಪ್ರಕಟಿಸಿದ ದಿನಾಂಕ : 2010-03-18
ಹೊನ್ನಾವರ, ಮಾ. ೧೭ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾತೃ ಛಾಯಾ ಟ್ರಸ್ಟ್ (ರಿ.) ಹೊನ್ನಾವರ ಇವರ ಸಹಕಾರದೊಂದಿಗೆ ಮಾರ್ಚ್ ೨೦, ೨೧ರಂದು ಕಾಸರಕೋಡಿನ ಕಡಲ ತೀರದಲ್ಲಿ ರಾಜ್ಯಮಟ್ಟದ ಕೊಂಕಣಿ ಜಾನಪದ ಉತ್ಸವ ನಡೆಯಲಿದೆ.
ಮಾ. ೨೦ರಂದು ಸಂಜೆ ೫-೩೦ಕ್ಕೆ ಜಿ.ಪಂ. ಅಧ್ಯಕ್ಷ ಎಲ್.ವಿ. ಶಾನಭಾಗ ಕಾರ್ಯಕ್ರಮ ಉದ್ಘಾಟಿ ಸುವರು. ಶಾಸಕರುಗಳಾದ ಜೆ.ಡಿ. ನಾಯ್ಕ, ದಿನಕರ ಶೆಟ್ಟಿ, ಯುವ ಉದ್ಯಮಿ ನಿವೇದಿತ ಆಳ್ವ ಮೊದಲಾದ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸುವರು.
ಸಂಜೆ ೭ಗಂಟೆಯಿಂದ ಶ್ರೀ ಬ್ರಹ್ಮದೇವ ಗುಮಟಾಪಾಂಗ್ ಕಲಾ ತಂಡದ ಗುಮಟಾಪಾಂಗ, ಸಿದ್ಧಿ ಜಾನಪದ ಕಲಾವಿದರ ದಮಾಮ್ ಕುಣಿತ, ಯಾಕುಬ್ ಮಹ್ಮದ್‌ಜೀ ಶಿರೂರು ಅವರ ದಫ್ ಕುಣಿತ, ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯ ಕೋಲಾಟ, ಗಂಗೊಳ್ಳಿ ಗುಡ್ಡೆಕೇರಿಯ ವಿಶ್ವೇಶ್ವರ ಹೋಳಿ ಪಂಗಡದ ಹೋಳಿ ಕುಣಿತ, ಶಿರಸಿ ಕೊಂಕಣಿ ಕಲಾಮಂಡಳದ ವೋವಿಯೋ-ವುಮಣಿ, ಕ್ಯಾಥೊಲಿಕ್ ಸಭಾ ಸುರತ್ಕಲ್ ಘಟಕದ ಮಾಂಡೊ, ಕಡವಾಡ ವಿಠ್ಠಲ ರುಕುಮಾಯಿ ಖೇಳ್ ತಂಡದ ಕೊಂಕಣಿ ಖೇಳ, ಹೊನ್ನಾವರ ಜಿ.ಎಸ್.ಬಿ. ಮಹಿಳಾ ತಂಡದ ಜಿ.ಎಸ್.ಬಿ. ಜಾನ ಪದ, ಎಂ.ಬಿ. ಶೇಟರ ಗೌಳಿ ಕುಣಿತ ಹಾಗೂ ನಾರಾಯಣ ವಾಸು ಮರಾಠಿ ಮತ್ತು ತಂಡದಿಂದ ಸುಗ್ಗಿಕುಣಿತ-ಕೋಲಾಟ ನಡೆಯುವುದು.
ಮಾ. ೨೧ರಂದು ಸಂಜೆ ೫-೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕೊಂ ಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸುವರು. ಕೆಎಸ್‌ಡಿಎಲ್ ಅಧ್ಯಕ್ಷ ಶಿವಾನಂದ ನಾಯ್ಕ, ತಾ.ಪಂ. ಅಧ್ಯಕ್ಷ ಕೃಷ್ಣ ಗೌಡ, ರಾಮ ಮೊಗೇರ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ ೭ ಗಂಟೆಯಿಂದ ಮಂಗಳೂರು ಕುಡ್ಮಿ ಜಾನಪದ ಕಲಾ ವೇದಿಕೆಯ ಗುಮಟೆ ಕೋಲಾಟ, ಸದಾಶಿವಗಡದ ಶ್ರೀ ದುರ್ಗಾ ಮಹಿಳಾ ರಂಗಕಲಾ ಸಂಘದ ಕೋಲಾಟ-ಪುಗಡಿ, ಭಟ್ಕಳ ಕೊಂಕಣಿ ಖಾರ್ವಿ ಕಲಾ ಮಾಂಡ್‌ನ ಕೋಲಾಟ-ಗುಮಟೆ, ಕಾರವಾರ ಚಿತ್ತಾಕುಲ ಮಹಾಮಾಯಿ ಸಾಂಸ್ಕೃತಿಕ ಕಲಾ ತಂಡದ ದೀಪಮಾಳಾ ದೀವಟಿ ನೃತ್ಯ, ಕಾಸರಕೋಡ ಕರಾವಳಿ ಬಳಗದ ಕೋಲಾಟ-ಗುಮಟೆ, ಶಿರೂರ ಮಲ್ಲಿಕಾರ್ಜುನ ತಂಡದ ಹೋಳಿ ಕುಣಿತ, ಕಾಸರಕೋಡ ಖಾರ್ವಿ ಮಾಂಡ್‌ನ ದಾಲೋರು, ಚಾರ್ಲ್ಸ್ ಡಿಸೋಜಾರ ಗುಮ್ಟಾಂ, ಚಂದ್ರಶೇಖರ ಖಾರ್ವಿಯ ಬೆಂಕಿ ಯಾಟ, ಕಾರವಾರ ಅರ್ಜುನಕೋಟಾ ಮಲ್ಲಿಕಾರ್ಜುನ ಕಲಾ ಸಂಘದ ಗುಮಟಾ-ಪಂಚವಾದ್ಯ ಹಾಗೂ ಹೊನ್ನಾವರ ಕೊಂಕಣಿ ಖಾರ್ವಿ ಹತ್ತು ಸಮಸ್ತರ ಹೋಳಿ ಮಾಂಡ್ ಕಾರ್ಯಕ್ರಮಗಳು ನಡೆಯುವುವು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-18
|
|
|