6ರ ಬಾಲೆ ಸರ್ಜನಾಳಿಂದ ಪರಿಹಾರ ನಿಧಿ ಸಂಗ್ರಹ: ಖುಷ್ ಆದ ರಾಷ್ಟ್ರಪತಿ !: ಶಿಕ್ಷಣಕ್ಕಾಗಿ 10,000 ರೂ. ಕೊಡುಗೆ |
ಪ್ರಕಟಿಸಿದ ದಿನಾಂಕ : 2010-03-18
ನವದೆಹಲಿ, ಮಾ.೧೭ : ಕಳೆದ ವರ್ಷ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಐಲಾ ಚಂಡಮಾರುತ ದಲ್ಲಿ ನಿರ್ಗತಿಕಳಾದ ೬ರ ಬಾಲೆಯೊಬ್ಬಳು ಈಗ ರಾಷ್ಟ್ರಪತಿಯವರ ಪರಿಹಾರ ನಿಧಿಗೆ ತಾನೇ ಸಂಪಾದಿಸಿದ ೨೦೫ ರು.ಗಳನ್ನು ನೀಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ರೈಲಲ್ಲಿ ತನಗೆ ಬರುವ ಹಾಡನ್ನು ಹಾಡಿ, ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನಿಧಿಗೆ ಹಣ ಸಂಗ್ರಹಿಸಿದ ಬಾಲಕಿಯ ಹೆಸರು ಸರ್ಜನಾ. ಆಕೆಯ ಈ ಮಹಾನ್ ಕಾರ್ಯಕ್ಕೆ ತಲೆಬಾಗಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶಿಕ್ಷಣದ ಖರ್ಚಿಗೆಂದು ಸ್ವತಃ ೧೦,೦೦೦ ರು.ಗಳ ಕೊಡುಗೆ ನೀಡಿದ್ದಾರೆ.
ಐಲಾ ಚಂಡಮಾರುತದ ಅನುಭವ ಆಕೆಯನ್ನು ಈ ಕಾರ್ಯಕ್ಕೆ ಪ್ರೇರೇಪಿಸಿತಂತೆ. ಬಾಸಿರತ್ ನಿಂದ ಹೃದಯಪುರಕ್ಕೆ ಸಂಚರಿಸುವ ರೈಲಿನಲ್ಲಿ ಪ್ರತಿದಿನ ತನ್ನ ತಾಯಿ ಹೇಳಿಕೊಟ್ಟ ಹಾಡನ್ನು ಹಾಡಿ, ಕುಣಿದು ೨೦೫ರು.ಗಳನ್ನು ಸಂಗ್ರಹಿಸಿದ್ದಾಗಿ ಆಕೆ ಹೇಳುತ್ತಾಳೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|