ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-18
ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ಇಲ್ಲಿ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿ ರಚಿಸಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ‘ಮೂರ್ತಿದೇವಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.
ಕನ್ನಡದ ಪ್ರಮುಖ ಬರಹಗಾರರಾಗಿರುವ ಮೊಯಿಲಿ, ಐದು ಸಂಪುಟಗಳ ಬೃಹದ್ಗ್ರಂಥ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಾತ್ರವಲ್ಲದೆ, ನಾಲ್ಕು ಕಾದಂಬರಿ, ಮೂರು ಕವನ ಸಂಕಲನ, ಹಾಗೂ ಪ್ರಬಂಧಗಳ ಸಂಗ್ರಹವನ್ನು ಹಾಗೂ ಮೂರು ನಾಟಕಗಳನ್ನು ರಚಿಸಿದ್ದಾರೆ.
ಪ್ರಸ್ತುತ ಅವರು ದ್ರೌಪದಿಯನ್ನು ಕುರಿತಾದ ಪೌರಾಣಿಕ ಕಾವ್ಯ “ಶ್ರೀಮುಡಿ ಪರಿಕ್ರಮನಾಮ’ ಬರೆಯುತ್ತಿದ್ದು ಇನ್ನೊಂದು ವರ್ಷದಲ್ಲಿ ಪ್ರಕಟವಾಗುವ ನಿರೀಕ್ಷೆಯಲ್ಲಿದೆ.
2007ರಲ್ಲಿ ಅವರಿಗೆ 2ನೇ ಪಿತಾಮಹಾ ಕಮೀಲ್ ಬುಲ್ಕೆ ರಾಮಾಯಣ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಲಾಗಿತ್ತು.
ಮೊಯಿಲಿ ಅವರ ‘ಕೊಟ್ಟಾ’ ಕಾದಂಬರಿ ಕನ್ನಡ ಮತ್ತು ಹಿಂದಿಯಲ್ಲಿ ಕಿರುಚಿತ್ರವಾಗಿ ನಿರ್ಮಾಣವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|