| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸಾಹಿತ್ಯ ಸಮ್ಮೇಳನದಲ್ಲಿ ೫ ಮಂದಿ ದಲಿತರು, ೭೫ ಮಂದಿ ಬ್ರಾಹ್ಮಣರು: ಭಾಷೆ-ಶಿಕ್ಷಣ ಗೋಷ್ಠಿಯಲ್ಲಿ ಲೋಲಾಕ್ಷ |
ಪ್ರಕಟಿಸಿದ ದಿನಾಂಕ : 2010-03-18
ಮಂಗಳೂರು, ಮಾ.೧೭: ಸಾಮಾಜಿಕ ನ್ಯಾಯ ವಸ್ತು ಸ್ಥಿತಿ ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಜಾತಿ, ವರ್ಣ, ಧರ್ಮ, ಲಿಂಗ, ಆಧಾರದ ಅಸಮಾನತೆ ನಮ್ಮ ನಡುವೆ ಇನ್ನು ಅಳಿಸಿ ಹೋಗಿಲ್ಲ. ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ೫ ಮಂದಿ ದಲಿತರಿಗೆ ಮಾತ್ರ ಅವಕಾಶ ದೊರೆತಿದೆ. ಉಳಿದ ೭೫ ಮಂದಿ ಬ್ರಾಹ್ಮಣರಿಗೆ ಅವಕಾಶ ದೊರೆತಿದೆ ಎಂದು ಅಹಿಂದ ಸಂಘಟನೆಯ ಮುಖಂಡ ಲೋಲಾಕ್ಷ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಡೆದ ಭಾಷೆ ಮತ್ತು ಶಿಕ್ಷಣ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದಲ್ಲೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯುವ ನೀತಿಯನ್ನು ಅನುಸರಿಬೇಕಾಗಿದೆ. ಕನ್ನಡ ಭಾಷೆ ಇಂದು ಜೀವಂತವಾಗಿ ಉಳಿಯಲು ಕಾರಣರಾದ ಒಂದು ವರ್ಗದ ಜನರಿಗೆ ಉನ್ನತ ಶಿಕ್ಷಣದಲ್ಲೂ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆಯಾದರೆ ಆರ್ಥಿಕವಾಗಿ, ಸಾಮಾಜಿಕವಾಹಿ ದುರ್ಬಲರಾದ ಶೋಷಣೆಗೊಳಗಾದವರು ಉನ್ನತ ಶಿಕ್ಷಣದ ಅವಕಾಶಗಳನ್ನು ಪಡೆಯಲು ಸಾಧ್ಯವೇ? ಎಂದು ಲೋಲಾಕ್ಷ ಪ್ರಶ್ನಿಸಿದರು.
ಯುಜಿಸಿ ವೇತನದ ಪ್ರಕಾರ ತಿಂಗಳಿಗೆ ಒಂದು ಲಕ್ಷ ವೇತನ ಪಡೆಯುವ ಉಪನ್ಯಾಸಕರು ,ತಿಂಗಳಿಗೆ ೮ ಸಾವಿರ ರೂಪಾಯಿ ವೇತನ ಪಡೆಯುವ ಸಾಮಾನ್ಯ ವ್ಯಕ್ತಿಗಳು ಇದ್ದಾರೆ. ಆ ಕಾರಣದಿಂದ ಕನ್ನಡ ಮಾತನಾಡುವ ಎಲ್ಲರಿಗೂ ಸಾರ್ವತ್ರಿಕವಾಗಿ ಮೀಸಲಾತಿ ನೀಡುವುದರಿಂದ ಈ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಶೋಷಣೆಗೊಳಗಾದವರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ನೀಡುವ ಮೀಸಲಾತಿ ಅನುಷ್ಠಾನಗೊಳ್ಳಬೇಕಾಗಿದೆ ಎಂದು ಲೋಲಾಕ್ಷ ಅಭಿಪ್ರಾಯಪಟ್ಟರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|