ವಾಷಿ೦ಗ್ಟನ್: ಒಸಾಮನನ್ನು ಜೀವಂತವಾಗಿ ಸೆರೆಹಿಡಿಯಲು ಸಾಧ್ಯವಿಲ್ಲ |
ಪ್ರಕಟಿಸಿದ ದಿನಾಂಕ : 2010-03-17
ವಾಷಿಂಗ್ಟನ್:ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಅಮೆರಿಕದಲ್ಲಿ ವಿಚಾರಣೆಗೊಳ ಪಡಬೇಕಾಗಿ ಬರಲ್ಲ ಯಾಕೆಂದರೆ ಆತನನ್ನು ಎಂದಿಗೂ ಜೀವಂತವಾಗಿ ಸೆರೆಹಿಡಿಯಲು ಸಾದ್ಯ ವಾಗಲ್ಲ ಎಂದು ಅಮೆರಿಕದ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ನುಡಿದಿದ್ದಾರೆ.
ರಿಪಬ್ಲಿಕನ್ ಪ್ರತಿನಿಧಿಯ ಜೊತೆ ವಾಗ್ವಾದ ಮಾಡಿದ ಹೋಲ್ಡರ್, ಬಿನ್ ಲಾಡೆನ್‌ನ ಹೆಣದ ಮುಂ ದೆ ಮಿರಾಂಡ ಹಕ್ಕು ಓದಬೇಕಾಗಿ ಬರಬಹುದು. ಆದಾಗ್ಯೂ, ಲಾಡೆನ್‌ನ್ನು ಜೀವಂತವಾಗಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವು ಅರಿತುಗೊಳ್ಳಬೇಕಾಗಿದೆ ಎಂದು ಅಟಾರ್ನಿ ಜನರಲ್ ಹೇಳಿ ದ್ದಾರೆ. ಬಿನ್ ಲಾಡೆನ್ ಎಂದಿಗೂ ಅಮೆರಿಕದ ಕೋರ್ಟಿನಲ್ಲಿ ಹಾಜರಾಗುವ ಸಾಧ್ಯತೆಗಳಿರುವುದಿಲ್ಲ ಎಂದು ಅವರ ಅಭಿಪ್ರಾಯವಾಗಿದೆ.
ಬಿನ್ ಲಾಡೆನ್‌ನಂತಹ ಪ್ರಮುಖ ಉಗ್ರನನ್ನು ಅಮೆರಿಕದ ಕೋರ್ಟಿನಲ್ಲಿ ಹಾಜರುಪಡಿಸುವ ಅಟಾರ್ನಿ ಜನರಲ್ ಅವರ ಪ್ರಸ್ತಾವನೆಯು ಅಮೆರಿಕವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆ ಎಂದು ರಿಪಬ್ಲಿಕನ್ ಪ್ರತಿನಿಧಿಯವರ ಟೀಕಾ ಪ್ರಹಾರಕ್ಕೆ ಹೋಲ್ಡರ್ ಈ ರೀತಿ ಉತ್ತರಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|