ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ. |
ಪ್ರಕಟಿಸಿದ ದಿನಾಂಕ : 2010-03-17
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಮಾ.17 : ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚ ರಣೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾದ ಛೋಟಾ ಶಕೀಲ್‌ನ 11 ಜನ ಸಹಚರರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ರಿವಾಲ್ವರ್ ಮತ್ತು 3 ಮದ್ದುಗುಂಡುಗಳು, 5 ತಲವಾರು, 16 ಮೊಬೈಲ್ ಫೋನ್‌ಗಳು, ಒಂದು ಕಾರು, ಒಂದು ಬೈಕ್ ಹಾಗೂ 62 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನಲ್ಲಿರುವ ನಾಲ್ಕು ಜನ ರವಿಪೂಜಾರಿಯ ಸಹಚರರನ್ನು 15 ದಿನದ ಒಳಗೆ ಹತ್ಯೆ ಮಾಡಿ ನಂತರ ಇಲ್ಲಿನ ಶ್ರೀಮಂತ ಉದ್ದಿಮೆದಾರರಿಗೆ ದೂರವಾಣಿ ಕರೆಗಳನ್ನು ಮಾಡಿ ಹಣ ವಸೂಲಿ ಮಾಡುವ ಷಡ್ಯಂತ್ರವನ್ನು ರೂಪಿಸಿದ್ದ ಛೋಟಾಶಕೀಲನ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.
ಪಶ್ಚಿಮ ವಲಯ ಐ.ಜಿ.ಪಿ ಗೋಪಾಲ ಹೊಸೂರು ಹಾಗೂ ದ.ಕ.ಜಿಲ್ಲಾ ಎಸ್.ಪಿ ಡಾ| ಸುಬ್ರಮಣ್ಯೇಶ್ವರ ರಾವ್ ಅವರು ನಗರದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.
ಕಳೆದ ಸಪ್ಟೆಂಬರ್ ನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸರಹದ್ದಿನ ಮದ್ದಡ್ಕ ಎಂಬಲ್ಲಿ ನಡೆದ ಮೂಸಕುಂಜ್ನಿ ಎಂಬವರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆದಳಕ್ಕೆ ನಿರ್ದೇಶನ ನೀಡಲಾಗಿತ್ತು. ಅದರಂತೆ ನಿನ್ನೆ ದಿನ ಮಂಗಳೂರಿನ ಅಶೋಕನಗರದ ದಂಬೇಲ್ ನಲ್ಲಿರುವ ಮನೆಯೊಂದರಲ್ಲಿ ಪ್ರಕರಣದ ಆರೋಪಿಯಾದ ಚಿಕ್ಕ ಮಂಗಳೂರಿನ ವಾಸಿ ಮಂಜುನಾಥ ಎಂಬವನು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಡಿ.ಸಿ.ಐ.ಬಿ ಪೊಲೀಸರು ಅಲ್ಲಿಗೆ ಧಾಳಿ ನಡೆಸಿದಾಗ ಮಂಜುನಾಥನ ಜೊತೆಗೆ ಇತರ 7 ಜನರು ಅಲ್ಲಿದ್ದು, ಅವರ ಬಳಿ ಮಾರಾಕಾಯುಧಗಳು ಇರುವುದು ಕಂಡು ಬಂತು. ಅವರಗಳನ್ನು ಈ ಬಗ್ಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು.
ಬಂಧಿತರ ವಿವರ: ೧. ಮಂಜುನಾಥ್ ಯಾನೆ ಮಂಜು(೨೨ವ), ತಂದೆ: ಕಲ್ಲೇಶ ಗೌಡ, ವಾಸ: ಸಿ.ಮೂರ್ತಿ ನಿಲಯ ಕಾವೇರಿ ಸಾಮೀಲ್ ಹಿಂಬಾಗ, ಕೆಂಪನಹಳ್ಳಿ, ಚಿಕ್ಕಮಂಗಳೂರು. ೨. ಸುಶೀಲ್ ಕುಮಾರ್ ಯಾನೆ ಮೋನು(೨೪ ವ), ತಂದೆ: ಹರೀಶ್ ಸಾಲಿಯಾನ್, ವಾಸ: ಇ-ಎಲ್ ಶೆಡೈ ಮ್ಯಾನರ್, ತರುಣ ವ್ರಂದದ ಎದುರು, ಅಶೋಕನಗರ,ದಂಬೇಲ್, ಮಂಗಳೂರು. ೩. ಲತೀಶ್ ನಾಯಕ್ ಯಾನೆ ಲಸ್ಸೆ(೨೧ ವ), ತಂದೆ: ಮಾರುತಿ ವಿ ನಾಯಕ್, ವಾಸ: ಭಗೀರಥಿ ನಿವಾಸ, ಕುದ್ರೋಳಿ ಯುವಕ ಮಂಡಲದ ಬಳಿ, ಮಂಗಳೂರು. ೪.ಅಶ್ವಿನ್ ಅಂಚನ್(೨೫), ತಂದೆ: ಶ್ರೀನಿವಾಸ, ವಾಸ: ಡ್ರ್‍ಐವರ್ ನಾಗಪ್ಪ ಕಂಪೌಂಡ್, ಕುದೋಳಿ, ಮಂಗಳೂರು. ೫.ಸುರೇಶ್ ಅಲ್ಬನ್ ಡಿ’ಸೋಜ(೩೮), ತಂದೆ: ಡೋಲ್ಫಿ ಡಿ’ಸೋಜ, ವಾಸ: ಸಂದೀಪ್ ವಿಲ್ಲ, ಕೊಟ್ಟಾರ ಕ್ರಾಸ್, ಬಿಜೈ ಕಾಪಿಕಾಡು, ಮಂಗಳೂರು. ೬. ಲೋಹಿತ್ ಗಟ್ಟಿ(೨೧ವ), ತಂದೆ: ಕೂಸಪ್ಪ ಗಟ್ಟಿ, ವಾಸ: ಸಿ.ಬಿ.ಕಂಪೌಂಡ್, ಭವಂತಿಸ್ಟ್ರೀಟ್,ಮಂಗಳೂರು. ೭. ಪ್ರವೀಣ (೩೦ವ), ತಂದೆ: ನಾರಾಯಣ ಗಟ್ಟಿ, ವಾಸ:ಎನ್.ಎಸ್.ಕಂಪೌಂಡ್, ದೀಪಕ್ ನಿಲಯ, ವಿನಾಯಕ ನಗರ, ಉರ್ವಸ್ಟೋರ್, ಮಂಗಳೂರು. ೮. ಸುಶಾನ್‌ಚಂದ್ರ(೨೨ ವ), ತಂದೆ: ರಾಮಚಂದ್ರ, ವಾಸ: ಕ್ಯಾ/ಆಪ್ ಬಾಂಬೆ ಹೌಸ್, ಭಟ್‌ಲೇನ್, ಕಪಿತಾನಿಯ ಶಾಲೆಯ ಹಿಂಬಾಗ, ಕಪಿತಾನಿಯ ಮಂಗಳೂರು.
ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರುಗಳು ಭೂಗತ ಪಾತಕಿ ಛೋಟಾ ಶಕೀಲನ ನಿರ್ದೇಶನದಂತೆ ಮಂಗಳೂರಿನಲ್ಲಿರುವ ರವಿಪೂಜಾರಿಯ 4 ಜನ ಸಹಚರರು ಗಳನ್ನು 15 ದಿನದ ಒಳಗಾಗಿ ಹತ್ಯೆ ಮಾಡಿ ನಂತರ ಇಲ್ಲಿಂದ ಚಿಕ್ಕಮಂಗಳೂರಿಗೆ ಹೋಗಿ ತಲೆತಪ್ಪಿಸಿಕೊಳ್ಳವ ಉದ್ದೇಶಕ್ಕಾಗಿ ಚಿಕ್ಕಮಂಗಳೂರಿನ ಚಂದ್ರಕಟ್ಟೆಯಲ್ಲಿ ಒಂದು ಬಾಡಿಗೆ ಮನೆಯನ್ನು ಮಾಡಿದ್ದು, ಅಲ್ಲಿ ಮುಂಬಾಯಿಯಿಂದ ಬಂದ ಶಾರ್ಪ್ ಶೂಟರ್‌ಗಳು ಇರುತ್ತಾರೆ ಎಂದು ತಿಳಿಸಿರುತ್ತಾರೆ. ಅಷ್ಟೇ ಅಲ್ಲದೇ ಈ ಉದ್ದೇಶಕ್ಕಾಗಿ ಛೋಟಾಶಕೀಲನು ಇವರುಗಳಿಗೆ ಈಗಾಗಲೇ 2 ಲಕ್ಷ ರೂಪಾಯಿ ಹಣವನ್ನು ವೆಸ್ಟರ್ನ್ ಯೂನಿಯನ್ ಮನಿ ಎಕ್ಸೆಂಜ್ ಮುಖಾಂತರ ಕಳುಹಿಸಿಕೊಟ್ಟಿದ್ದು, ಆರೋಪಿಗಳು ತಮ್ಮ ಐ.ಡಿ ಕಾರ್ಡ್‌ನ್ನು ನೀಡಿ ಹಣವನ್ನು ಪಡೆದುಕೊಂಡಿರು ವುದು ತಿಳಿದು ಬಂದಿರುತ್ತದೆ. ಇವರುಗಳ ಬಳಿಯಿಂದ 5 ತಲವಾರುಗಳು ಮತ್ತು ಕ್ರತ್ಯಕ್ಕೆ ಬಳ ಸಲು ಯೋಜಿಸಿದ್ದ ಒಂದು ಕಾರು, ಒಂದು ಬೈಕ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿ ಕೊಳ್ಳಲಾಯಿತು.
ನಂತರ ಈ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಚಿಕ್ಕಮಂಗಳೂರು ಚಂದ್ರಕಟ್ಟೆಯ ಮನೆಗೆ ದಾಳಿ ಮಾಡಿದಾಗ ಅಲ್ಲಿ ಮೂರು ಜನ ಆರೋಪಿಗಳು ಸಿಕ್ಕಿದ್ದರೆ.
ಚಿಕ್ಕಮಂಗಳೂರು ಬಳಿ ಬಂಧಿತ ಅರೋಪಿಗಳ ಹೆಸರು:
೧.ಗಣೇಶ್ ಶಿವರಾಮ್ ಶೆಟ್ಟಿ (೩೫ ವ), ತಂದೆ: ಶಿವರಾಮ ಶೆಟ್ಟಿ, ವಾಸ: ನಂಬ್ರ ೧೭, ಚಾಲ್ ನಂಬ್ರ ೧, ಆದರ್ಶಲೇನ್, ಅಶೋಕವಾಡಿ, ಜವಹಾರನಗರ, ಕಾರ್ ಈಸ್ಟ್, ಮುಂಬಯಿ -೫೧. ೨. ರಾಕೇಶ್ ಮಿಶ್ರಾ ಯಾನೆ ರೋಹನ್(೨೮ವ), ತಂದೆ: ರಾಮಶಂಕರ್ ಮಿಶ್ರ, ವಾಸ: ಜ್ನಾನಬಹದ್ದೂರು ಮಿಶ್ರಾ ಚಾವ್ಲ್, ಆದರ್ಶಲೇನ್, ಜವಹಾರ್‌ನಗರ, ಖಾರ್‌ಈಸ್ಟ್, ಮುಂಬಯಿ, ಸ್ವಂತ ವಿಳಾಸ ಕಾಲಿಕಾಬಾರ್, ಸೇವಾಪುರಿ ಅಂಚೆ, ಕುಂಕರಿ, ವಾರಣಾಸಿ, ಉತ್ತರಪ್ರದೇಶ. ೩. ಮಂಜು ಯಾನೆ ಮಂಜುನಾಥ್ (೨೧ ವ), ತಂದೆ: ವೆಂಕಟೇಶ, ವಾಸ; ಅರಳೀಮರದ ಪಕ್ಕ, ಕೆಂಪನಹಳ್ಳಿ, ಚಿಕ್ಕ ಮಂಗಳೂರು.
ಇವರ ಬಳಿ ಒಂದು ರಿವಾಲ್ವರ್ ಮತ್ತು ಮತ್ತು 3 ಮದ್ದುಗುಂಡುಗಳು 63 ಸಾವಿರ ರೂಪಾಯಿ ನಗದು ಹಣ ಮತ್ತು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾ ಯಿತು.
ಗಣೇಶ ಶಿವರಾಮ ಶೆಟ್ಟಿ ಎಂಬವನು ಮುಂಬಾಯಿಯಿಂದ ಈ ಕ್ರತ್ಯಕ್ಕೆ ಬಂದ ಶಾರ್ಪ್‌ಶೂಟರ್ ಆಗಿದ್ದು, ಈತನು ಮುಂಬಾಯಿಯಲ್ಲಿ ೧೯೯೪ ರಲ್ಲಿ ನಡೆದ ಮಹೇಂದ್ರ ಪ್ರತಾಪ್ ಸಿಂಗ್ ಎಂಬವರ ಹತ್ಯಾಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಯಾಗಿರುತ್ತಾನೆ. ಮುಂಬಯಿ ಉಚ್ಚ ನ್ಯಾಯಾಲಯದಿಂದಲೂ ಶಿಕ್ಷೆ ಖಾಯಂ ಆದ ನಂತರ ಈತ ತಲೆಮರೆಸಿಕೊಂಡಿದ್ದು, ಮುಂಬಯಿ ಪೊಲೀಸರು ಈತನ ಪತ್ತೆಗೆ ಶ್ರಮಿಸುತ್ತಿದ್ದರು. ಈತನ ಮೇಲೆ ಇನ್ನೂ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ಮುಂಬಯಿಯಲ್ಲಿ ದಾಖಲಾಗಿರುತ್ತದೆ.
ಈ ಪ್ರಕರಣದ ಪ್ರಮುಖ ಆರೋಪಿಯಾದ ಹರೀಶ ಶೆಟ್ಟಿ ಎಂಬವನು ತಲೆಮರೆಸಿಕೊಂಡು ನೇಪಾಳ ದೇಶಕ್ಕೆ ಹೋಗಿದ್ದು, ಈತನು ಮುಂಬಯಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕುರುಪು ಸಹೋದರರ ೧೯೯೮ ರಲ್ಲಿ ನಡೆದ ಹತ್ಯಾಕಾಂಡ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿರುತ್ತದೆ. ಅವನನ್ನು ಬಂಧಿಸುವ ಪ್ರಯತ್ನವನ್ನು ಮುಂದುವರಿಸ ಲಾಗಿದೆ ಮತ್ತು ಈತನ ತಂಡದ ನೇಪಾಳದ ಮೈಕಲ್ ತಾಪ ಮತ್ತು ಜಿತೇಂದ್ರ ಎಂಬ ಇಬ್ಬರು ಆರೋಪಿಗಳನ್ನು ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರು ನೇಪಾಳದ ಗಡಿಪ್ರದೇಶವಾದ ಸೋನಾಲಿಯಲ್ಲಿ ವಶಕ್ಕೆ ತೆಗೆದುಕೊಂಡು ಸೋನಾಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಅವರ ಬಳಿ ಶಸ್ತ್ರಾಸ್ತ್ರಗಳು ಸಿಕ್ಕಿದ್ದು, ಸೋನಾಲಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.
ಬಂಧಿತ ಆರೋಪಿಗಳು ಕೆಲವು ಪ್ರಮುಖ ಉದ್ಯಮಿಗಳು ಹಾಗೂ ರಾಜಕಾರಣಿಗಳ ಮೊಬೈಲ್ ನಂಬ್ರ ಹಾಗೂ ಮನೆ ಹಾಗೂ ಕಛೇರಿಗಳ ಪೋನ್ ನಂಬ್ರವನ್ನು ಸಂಹ್ರಗಿಸಿ ಈಗಾಗಲೇ ಛೋಟಾಶಕೀಲ ನಿಗೆ ಕಳುಹಿಸಿರುವುದಾಗಿ ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿರು ತ್ತದೆ.
ಆರೋಪಿ ಲತೀಶ ನಾಯಕ್‌ನ ಮೇಲೆ ಸುಲಿಗೆ ಮತ್ತು ಕೋಮುಗಲಭೆ ಸಂಧರ್ಭದಲ್ಲಿ ಪ್ರಕರಣ ದಾಖಲಾಗಿದ್ದು, ವಾರಾಣಾಸಿಯಿಂದ ಬಂದಿರುವ ರಾಕೇಶ್ ವಿಶ್ರಾನ ಮೇಲೂ ಸಹ ಮುಂಬಯಿ ನಗರದಲ್ಲಿ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯನ್ನು ಲಭ್ಯವಾಗಿದೆ. ಆರೋಪಿ ಸುಶೀಲನ ಮೇಲೆ ಹಲ್ಲೆ ಪ್ರಕರಣಗಳು ಈಗಾಗಲೇ ದಾಖಲಾಗಿದೆ ಎಂದು ಅವರು ವಿವರಿಸಿದರು.
ಈ ಹಿಂದೆ ರಶೀದ್ ಮಲ್‌ಬಾರಿಯನ್ನು ಮಂಗಳೂರಿಗೆ ಕಳುಹಿಸಿ ಇಲ್ಲಿನ ಕೆಲವು ಜನರನ್ನು ಹತ್ಯೆ ಮಾಡಿ ಕೋಲಾಹಲ ಉಂಟು ಮಾಡುವ ಛೋಟಾಶಕೀಲನ ಷಡ್ಯಂತ್ರವನ್ನೂ ಸಹ ದ.ಕ ಜಿಲ್ಲಾ ಪೊಲೀಸರು ವಿಫಲಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಪಶ್ಚಿಮ ವಲಯ ಐ.ಜಿ.ಪಿ ಗೋಪಾಲ ಹೊಸೂರು, ಎಸ್.ಪಿ ಡಾ| ಸುಬ್ರಮಣ್ಯೇಶ್ವರ ರಾವ್ ಮತ್ತು ಎಡಿಷನಲ್ ಎಸ್.ಪಿ. ಆರ್.ರಮೇಶ್ ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಇನ್ಸ್‌ಪೆಕ್ಟರ್ ವೆಂಕಟೇಶ ಪ್ರಸನ್ನ ಮತ್ತು ಎ.ಎಸ್.ಐ ಕೆ.ನಾರಾಯಣ ಮಣಿಯಾಣಿ, ಸಿಬ್ಬಂದಿಯವರಾದ ಶಶಿಧರ ಶೆಟ್ಟಿ, ಚೇತನ ಬೊಟ್ಯಾಡಿ, ಗಣೇಶ್ ಮಾನ್ಯ, ಚಂದ್ರ ಆಡೂರು, ದಿನೇಶ್ ಬೇಕಲ್, ಸಂತೋಷ್ ಪಡೀಲ್, ಕುಮಾರ್ ಬಿ, ಧರ್ಮೇಂದ್ರ, ಪ್ರಶಾಂತ್ ಶೆಟ್ಟಿ, ಗಣೇಶ್ ಕಲ್ಲಡ್ಕ, ರಿತೇಶ್ ಕೊಟ್ಟಾರಿ, ಸುಧಾಕರ ಚಾಲಕರುಗಳಾದ ಶಾಂತ ಶೆಟ್ಟಿ ಮತ್ತು ದೇವಯ್ಯ ಹಾಗೂ ಡಿ.ಎ.ಆರ್ ಸಿಬ್ಬಂದುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆ ತಂಡಕ್ಕೆ ನಗದು ಬಹುಮಾನ :
ಈ ಅರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದ ತಂಡಕ್ಕೆ ನಗದು ಬಹುಮಾನ 20 ಸಾವಿರವನ್ನು ಈ ಸಂದರ್ಭದಲ್ಲಿ ಐಜಿಪಿಯವರು ಪ್ರಕಟಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|