ನವದೆಹಲಿ: ಶ್ರೀ ರವಿಸ೦ಕರ್ ಅವರ ನೇತ್ರತ್ವದಲ್ಲಿ 8ದಿನದ ಯಮುನಾ ನದಿ ಸ್ವಚ್ಚತಾ ಆ೦ದೋಲನಕ್ಕೆ ಚಾಲನೆ |
ಪ್ರಕಟಿಸಿದ ದಿನಾಂಕ : 2010-03-17
ನವದೆಹಲಿ: ಪ್ರಖ್ಯಾತ ಧರ್ಮ ಗುರು ಶ್ರೀ ಶ್ರೀ ರವಿಶಂಕರ್‌ರವರ ನೇತೃತ್ವದಲ್ಲಿ ಯಮುನಾ ನದಿ ಯನ್ನು ಸ್ವಚ್ಛಗೊಳಿಸಿ, ನದಿ ತೀರದಲ್ಲಿ ವಾಸಿಸುವ ಜನರಲ್ಲಿ ಈ ಸಂಬಂಧವಾಗಿ ಅರಿವು ಮೂಡಿ ಸುವ ಆಂದೋಲನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಇದು ಒಟ್ಟು ಎಂಟು ದಿನಗಳ ಕಾಲ ನಡೆಯಲಿದೆ. ಯಮುನಾ ನದಿಯ ಪುರಾನ ಗತ ವೈಭವವನ್ನು ಪುನರ್ ಪ್ರತಿಷ್ಠಾ ಪಿಸುವುದು ಈ ಯೋಜನೆಯ ಉದ್ದೇಶ.
ಪವಿತ್ರ ಯಮುನಾ ನದಿಯ ನೀರನ್ನು ಸ್ವಚ್ಛಗೊಳಿಸಿ, ಕುಡಿಯುವ ನೀರನ್ನಾಗಿ ಮಾರ್ಪಾಡಿಸುವ ಕಾರ್ಯದ ಜೊತೆ ಜನತೆ ಕೈ ಜೋಡಿಸಬೇಕು ಮತ್ತು ಜನರಿಗೆ ಈ ನಿಟ್ಟಿನಲ್ಲಿ ಅರುವು ಮೂಡಿಸ ಬೇಕು ಎಂದು ಗುರೂಜಿ ಈ ಸಂದರ್ಭದಲ್ಲಿ ಮಾತನಾಡುತ್ತಾ ಮನವಿ ಮಾಡಿಕೊಂಡಿದ್ದಾರೆ.
`ಮುಂಚೆ ನದಿಗಳು ನಮ್ಮನ್ನು ಪವಿತ್ರಗೊಳಿಸುತ್ತಿದ್ದವು. ಆದರೆ ನಾವು ಈಗ ಅದನ್ನು ಸ್ವಚ್ಛಗೊಳಿಸ ಬೇಕಾದ ಪರಿಸ್ಥಿತಿಗೆ ಬಂದಿದ್ದೇವೆ. ಆದರೆ ಇದನ್ನು ಸರ್ಕಾರ ಅಥವಾ ಇನ್ಯಾವುದೋ ಸಂಘ ಸಂಸ್ಥೆ ಯೊಂದೇ ಮಾಡಲು ಸಾಧ್ಯವಿಲ್ಲ. ಸಮಸ್ತ ಜನರೂ ಈ ಮಹತ್ಕಾರ್ಯದಲ್ಲಿ ಕೈ ಜೋಡಿಸುವ ಅಗತ್ಯವಿದೆ,' ಎಂದು ನೆರೆದ ಅಧಿಕಾರಿಗಳು, ಕಲಾವಿದರು, ರಾಜಕಾರಣಿಗಳು ಮತ್ತು ಇತರೆ ಗಣ್ಯ ರಿಗೆ ಗುರೂಜಿ ಇಲ್ಲಿಯ ಪುರಾನಾ ಕಿಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|