ನವದೆಹಲಿ: ಗದ್ಕರಿ ಪಟ್ಟಿ: ಕೆಲವರಿಗೆ ಬೇವು, ಕೆಲವರಿಗೆ ಬೆಲ್ಲ |
ಪ್ರಕಟಿಸಿದ ದಿನಾಂಕ : 2010-03-17
ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗದ್ಕರಿಯ ಹೊಸ ತಂಡವು ಯುವ ನಾಯಕ ರನ್ನು ಹೆಚ್ಚೆಚ್ಚು ಒಳಗೊಂಡಿದ್ದು, ಈ ತೀರ್ಮಾನವು ಕೆಲವರಿಗೆ ಖುಷಿಯನ್ನು ತಂದಿದ್ದರೆ, ಮತ್ತೆ ಕೆಲವರಿಗೆ ನಮಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಆದ್ದರಿಂದ ಬಿಜೆಪಿ ಕಾರ್ಯಕಾರಿ ಸಮಿತಿಯ ಪಟ್ಟಿಯು ಕೆಲವರಿಗೆ ಬೇವಾಗಿದ್ದರೆ, ಇನ್ನು ಕೆಲವರಿಗೆ ಬೆಲ್ಲವಾಗಿ ಪರಿಣಮಿಸಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ರವಿ ಶಂಕರ್ ಪ್ರಸಾದ್ ತಮ್ಮ ಸಂತೋಷವನ್ನು ಬಚ್ಚಿಡಲಾಗದೇ, ಈ ಸುದ್ದಿಗೆ ಪ್ರತಿಕ್ರಿಯೆಸಿ ತಮ್ಮ ಮುಂದಿನ ಅನೇಕ ಯೋಜನೆಗಳ ಬಗ್ಗೆ ಹೇಳಿದರು.
`ನನಗೆ ಕೇಂದ್ರಿಯ ಮಂತ್ರಿ ಸ್ಥಾನವಿರಬಹುದು, ಅಥವಾ ಕಾರ್ಯಕಾರಿ ಸಮಿತಿಯ ಯಾವುದೇ ಹುದ್ದೆಯಿರಬಹುದು ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ. ನಾನು ಮಾಡುವ ಕೆಲಸದ ಮೂಲಕ ನಾನು ಮಾತನಾಡುತ್ತೇನೆ. ಅದೇ ದ್ಯೇಯವನ್ನು, ಆದರ್ಶವನ್ನು ಇಲ್ಲೂ ಪಾಲಿಸುತ್ತೇನೆ,' ಎಂದು ಅವರು ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯೆಸಿದ್ದಾರೆ.
ತಮ್ಮದೇ ಶೈಲಿಯಲ್ಲಿಯೇ ಸಂತೋಷವನ್ನು ವ್ಯಕ್ತಪಡಿಸುತ್ತಾ, ಪಕ್ಷದ ಕಾರ್ಯದರ್ಶಿಯಾಗಿ ನೇಮಕಗೊಂಡ ಕ್ರಿಕೆಟರ್, ಸಂಸದ ನವಜೋತ್ ಸಿಂಗ್ ಸಿದ್ದು ಇದು ಅವರಿಗೆ ನೀಡಿದ ಗೌರವ ಮತ್ತು ಈ ಹೊಸ ಜವಾಬ್ದಾರಿಯು `ಒಳ್ಳೆಯದು ಹೌದು, ಕಹಿಯೂ ಹೌದು (ಬೆಟರ್ ಆರ್ ಬಿಟ್ಟರ್)', ಎಂದು ಹೇಳಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17
|
|
|