ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ |
ಪ್ರಕಟಿಸಿದ ದಿನಾಂಕ : 2010-03-17
ನವದೆಹಲಿ: ಮುಸ್ಲಿಂ ಮೀಸಲಾತಿಗಾಗಿ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಾವಿರಾರು ಕಾರ್ಯಕರ್ತರು ಪಾರ್ಲಿಮೆಂಟ್ ಮಾರ್ಚ್ ನಡೆಸಿದರು. ಜಂತರ್ ಮಂತರ್ ನಲ್ಲಿ ಸೇರಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿ ಯಾದ ರಾಷ್ಟ್ರೀಯ ಅಧ್ಯಕ್ಷ ಇ. ಅಬೂಬಕರ್ ಕೇಂದ್ರ ಸರ್ಕಾರ ಕೂಡಲೇ ರಂಗನಾಥ ಮಿಶ್ರ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಆಂಧ್ರ, ಕರ್ನಾಟಕ, ಕೇರಳ , ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಮಣಿ ಪುರ, ಪಶ್ಚಿಮ ಬಂಗಾಳದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪಿ.ಎಫ್.ಐ .ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ-ಮ್ಯಾ೦ಗಲೋರಿಯನ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17 00:00:00
|
|
| riyaaz, nala | 2010-03-18 | | mashaalla |
|