ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು |
ಪ್ರಕಟಿಸಿದ ದಿನಾಂಕ : 2010-03-17
ಮಂಗಳೂರು, ಮಾ. ೧೬: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಮಧ್ಯಾಹ್ನ ೧.೩೦ ರಿಂದ ೨.೩೦ರ ವರೆಗಿನ ೧ ಗಂಟೆ ಕಾಲ ವೇದಿಕೆಯಲ್ಲಿ ವ್ಯಂಗ್ಯ ಚಿತ್ರಗಳ ಕ್ಯಾರಿಕೇಚರ್ ಕಾರ್ಯಕ್ರಮ ನೀಡಿದ ಪ್ರಕಾಶ್ ಶೆಟ್ಟಿ ಅವರು ತನ್ನ ವ್ಯಂಗ್ಯ ಗೆರೆಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನು ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು ನೆರೆದಿದ್ದರು.
ಸಭಿಕರಲ್ಲಿಯೇ ಕೆಲವರನ್ನು ವೇದಿಕೆಗೆ ಕರೆದು ಅವರ ವ್ಯಂಗ್ಯ ಚಿತ್ರ ಬಿಡಿಸುವ ಅಪೂರ್ವ ಕಾರ್ಯಕ್ರಮವೂ ನಡೆಯಿತು. ಎಚ್.ಡಿ. ದೇವೇ ಗೌಡ, ಮತ್ತವರ ಮಕ್ಕಳಾದ ರೇವಣ್ಣ ಹಾಗೂ ಕುಮಾರ ಸ್ವಾಮಿ ಅವರ ವ್ಯಂಗ್ಯ ಚಿತ್ರ ‘ತ್ರಿ ಇನ್ ವನ್’; ಓರ್ವ ರಾಜಕಾರಣಿ. ಓರ್ವ ಬ್ಯಾಂಕರ್ ಮತ್ತು ಓರ್ವ ಶಿಕ್ಷಕರ ವ್ಯಂಗ್ಯ ಚಿತ್ರ ‘ತ್ರಿ ಈಡಿಯೆಟ್ಸ್ ಅಲ್ಲ!’ ವ್ಯಂಗ್ಯ ಚಿತ್ರ, ಆನೆಯನ್ನು ಹೊತ್ತ ಕಡ್ಡಿ ಮನುಷ್ಯ ಮತ್ತು ಕಡ್ಡಿ ಮನುಷ್ಯನನ್ನು ಹೊತ್ತ ಆನೆಯ ವ್ಯಂಗ್ಯ ಚಿತ್ರ ‘ಟು ಇನ್ ವನ್’, ಅಮಿತಾಭ್‌ಬಚ್ಚನ್ ಕುರಿತ ‘ರೂಪಾಂತರ’, ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ವ್ಯಂಗ್ಯ ಚಿತ್ರಗಳು ಗಮನ ಸೆಳೆದವು.
ಮೂಲ್ಕಿಯ ಶಾಂಭವಿ ಜೇಸಿಸ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು. ಅವಿನಾಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ: ರಾಜೇಶ್ ಶೆಟ್ಟಿ, ಮ್ಯಾಂಗಲೂರಿಯನ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|