ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ

 ಬ್ಯಾಲಾಳು ಇಸ್ರೋ ಕೇಂದ್ರ ಆವರಣದಲ್ಲಿ ಪತ್ತೆಯಾದ ಬುಲೆಟ್.   

ಮಾ.೧೬: ಬೆಂಗಳೂರು ನಗರದ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿರುವ ಭಾರೀ ಭದ್ರತೆ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಬಳಿ ಮಂಗಳವಾರ ಬೆಳಗ್ಗಿನ ಜಾವ ಏರ್ಪಟ್ಟ ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ತಾನು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದೇನೆ ಎಂದು ಅವರು ಹೇಳಿದರು.

ಇದೊಂದು ಭಯೋತ್ಪಾದಕ ದಾಳಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ತನ್ನಿಂದ ಸಾಧ್ಯವಿಲ್ಲ. ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.

ಘಟನೆ ಕುರಿತು ಕೇಂದ್ರ ಸರಕಾರ ವರದಿ ಯಾಚಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ಶೀಘ್ರವೇ ಕೇಂದ್ರಕ್ಕೆ ನೀಡಲಾಗುವುದು ಎಂದರು. ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಪರಿಸ್ಥಿತಿ ಕುರಿತು ಅವಲೋಕಿಸುವ ಸಲುವಾಗಿ ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ
ಬೆಂಗಳೂರು, ಮಾ.೧೬: ನಗರದ ಹೊರವಲಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಅಪರಿಚಿತರು ಮಂಗಳವಾರ ಬೆಳಗ್ಗಿನ ಜಾವ ಸಂಸ್ಥೆಯ ಭದ್ರತಾ ಸಿಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬಂದಿ ಪ್ರತಿದಾಳಿ ನಡೆಸಿದಾಗ ಕತ್ತಲಲ್ಲಿ ಪರಾರಿಯಾದರು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಬ್ಯಾಲಾಳು ಬಳಿಯ ಸಂಸ್ಥೆಯ ಗೇಟ್ ಎದುರು ಖಾಕಿ ಸಮವಸ್ತ್ರದಲ್ಲಿದ್ದ ಇಬ್ಬರು ಆಗಂತುಕರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಭದ್ರತಾ ಸಿಬಂದಿ ಅವರನ್ನು ಪ್ರಶ್ನಿಸಲು ಮುಂದಾದರು. ಈ ಸಂದರ್ಭ ತಮ್ಮಲ್ಲಿದ್ದ ಚಿಕ್ಕ ಪಿಸ್ತೂಲಿನಿಂದ ಅವರು ಭದ್ರತಾ ಸಿಬಂದಿಯತ್ತ ಗುಂಡು ಹಾರಿಸಿದರು. ರಕ್ಷಣಾ ಸಿಬಂದಿ ಕೂಡ ಪ್ರತಿದಾಳಿ ನಡೆಸಿದಾಗ ಬಂದಿದ್ದ ಆಗಂತುಕರು ಕತ್ತಲಲ್ಲಿ ಪರಾರಿಯಾದರು. ಮಂಗಳವಾರ ಬೆಳಗ್ಗಿನ ಜಾವ ೩.೩೦ರಿಂದ ೪ರ ಮಧ್ಯೆ ಈ ಘಟನೆ ನಡೆದಿದೆ ಎಂದು ಇಸ್ರೋ ಮೂಲಗಳು ಹೇಳಿವೆ.

ಈ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹಗಳ ಅಧ್ಯಯನ ಕೇಂದ್ರವು ಕಾರ್ಯನಿರ್ವ ಹಿಸುತ್ತಿದೆ. ಕೇಂದ್ರದ ಮೇಲೆ ದಾಳಿ ನಡೆಸುವ ದುಷ್ಕರ್ಮಿಗಳ ಪ್ರಯತ್ನವನ್ನು ಭದ್ರತಾ ಸಿಬಂದಿ ವಿಫಲಗೊಳಿಸಿದ್ದಾರೆ ಎಂದು ಸಂಸ್ಥೆಯ ವಕ್ತಾರ ಎಸ್. ಸತೀಶ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ದೂರು ದಾಖಲಾಗಿದೆ.

ಅಧಿಕಾರಿಗಳ ಭೇಟಿ
ಘಟನಾ ಸ್ಥಳಕ್ಕೆ ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ ಹಾಗೂ ವಿಮಾನನಿಲ್ದಾಣ ಮತ್ತು ಇತರ ಸ್ಥಾವರಗಳ ರಕ್ಷಣೆ ಉಸ್ತುವಾರಿ ವಹಿಸಿಕೊಂಡಿರುವ ಸಿ‌ಐ‌ಎಸ್‌ಎಫ್‌ನ ಡಿ‌ಐಜಿ ಭೇಟಿ ನೀಡಿದ್ದಾರೆ.

ಭಾರತದ ಪ್ರಪ್ರಥಮ ಚಂದ್ರಯಾನ ಅಭಿಯಾನ ಚಂದ್ರಯಾನ-೧ಕ್ಕೆ ಬಾಹ್ಯಾಕಾಶ ತಂತ್ರeನದ ನೆರವು ಒದಗಿಸಲು ೨೦೦೮ರಲ್ಲಿ ಬೆಂಗಳೂರು ಬಳಿಯ ಬ್ಯಾಲಾಳುವಿನಲ್ಲಿ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್ (ಐಡಿ‌ಎಸ್‌ಎನ್) ಸ್ಥಾಪನೆ ಗೊಂಡಿತ್ತು. ೩೨ ಮೀಟರ್ ವ್ಯಾಸದ ಡೀಪ್ ಸ್ಪೇಸ್ ಆಂಟೆನಾ, ೧೮ ಮೀಟರ್ ಆಂಟೆನಾ ಟರ್ಮಿನಲ್, ೧೧ ಮೀಟರ್ ಆಂಟೆನಾ ಟರ್ಮಿ ನಲ್, ಇಂಡಿಯನ್ ಸ್ಪೇಸ್ ಡಾಟಾ ಸೆಂಟರ್ ,ಟೆಕ್ನಿಕಲ್ ಸರ್ವಿಸ್ ಕಾಂಪ್ಲೆಕ್ಸನ್ನು ಐಡಿ‌ಎಸ್‌ಎನ್ ಒಳಗೊಂಡಿದೆ.
ಇಸ್ರೋ ಸ್ಥಾವರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಗುಪ್ತಚರ ವರದಿಯ ಬೆನ್ನಲ್ಲಿಯೇ ಬ್ಯಾಲಾಳು ಪ್ರಕರಣ ನಡೆದಿರುವುದು ಸಾಕಷ್ಟು ಮಹತ್ವ ಪಡೆದಿದೆ.

ಮರುಪರಿಶೀಲನೆ:

ಇಸ್ರೋಗೆ ನೀಡಲಾಗಿರುವ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಸಿ‌ಐ‌ಎಸ್‌ಎಫ್‌ಗೆ ಗೃಹಸಚಿವ ಪಿ.ಚಿದಂಬರಂ ಸೂಚಿಸಿದ್ದಾರೆ. ಆಗಂತುಕರು ಸ್ವದೇಶಿ ನಿರ್ಮಿತ ಪಿಸ್ತೂಲು ಬಳಸಿ ದಾಳಿ ಮಾಡಿದ್ದು, ದಾಳಿಯಲ್ಲಿ ಯಾವುದೇ ಭಯೋತ್ಪಾದಕರ ಕೈವಾಡ ಸಾಧ್ಯತೆಯಿಲ್ಲ ಎಂದು ತಿಳಿಸಿದ್ದಾರೆ.

ಹೇಗಾಯಿತು ?
ಇಬ್ಬರು ಅಪರಿಚಿತ ವ್ಯಕ್ತಿಗಳು ಮಂಗಳವಾರ ಬೆಳಗ್ಗಿನ ಜಾವ ೩.೩೦ರ ವೇಳೆ ಬೈನಾಕ್ಯುಲರ್ ನೆರವಿನಿಂದ ಸ್ಥಾವರವನ್ನು ಪರಿಶೀಲಿಸುತ್ತಿದ್ದುದನ್ನು ಸಿ‌ಐ‌ಎಸ್‌ಎಫ್‌ನ ಸಿಬಂದಿ ಜಾದವ್ ಗಮನಿಸಿದರು . ಇದನ್ನು ತಡೆಯಲು ಮುಂದಾದ ಜಾದವ್ ಮೇಲೆ ಆಗಂತುಕರು ಎರಡು ಸುತ್ತು ಗುಂಡು ಹಾರಿಸಿದರು. ಗುಂಡಿನ ಶಬ್ದ ಕೇಳಿದ ಇತರ ಇಬ್ಬರು ಸಿ‌ಐ‌ಎಸ್‌ಎಫ್ ಸಿಬಂದಿ ಸ್ಥಳಕ್ಕೆ ಧಾವಿಸಿ ಆಗಂತುಕರತ್ತ ಪ್ರತಿದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆ ಆಗಮಿಸುವ ಮುನ್ನ ಆಗಂತುಕರಿಬ್ಬರೂ ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಸಿದ್ಧತೆಯೇ ?
ಮಂಗಳವಾರ ಬೆಳಗ್ಗಿನ ಜಾವ ಇಬ್ಬರು ಆಗಂತುಕರು ಇಸ್ರೋ ಕೇಂದ್ರದ ಬಳಿ ಬೈನಾಕ್ಯುಲರ್ ಹಿಡಿದು ಕಟ್ಟಡವನ್ನು ಪರೀಕ್ಷಿಸುತ್ತಿದ್ದುದು ಕಂಡು ಬಂತು. ಸಂಭಾವ್ಯ ಭಯೋತ್ಪಾದಕ ದಾಳಿಗೆ ಉಗ್ರರು ಕೈಗೊಂಡಿರುವ ಪೂರ್ವ ಸಿದ್ಧತೆ ಇದಾಗಿರಬೇಕು ಎಂದು ಇಸ್ರೋ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರಿಗೆ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಇರಲೇಬೇಕು. ಇದೊಂದು ಪೂರ್ವಸಿದ್ಧತೆ ಇರಬೇಕು. ಇದಲ್ಲವಾದಲ್ಲಿ ಬೆಳಗ್ಗಿನ ಜಾವದಲ್ಲಿ ಅವರೇಕೆ ಸಂಸ್ಥೆಯ ಬಳಿ ಬರಬೇಕಿತ್ತು ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಸಂಶಯಗಳ ಹುತ್ತ

ಬೆಂಗಳೂರು, ಮಾ. ೧೬: ಅಪರಿಚಿತರು ಹಾಗೂ ಸಿ‌ಐ‌ಎಸ್‌ಎಫ್ ನಡುವೆ ನಡೆದಿದೆ ಎನ್ನಲಾದ ಗುಂಡಿನ ಚಕಮಕಿ ಬಗ್ಗೆ ಪೊಲೀಸರು ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ.

ಗುಂಡಿನ ಚಕಮಕಿ ನಡೆದಿದೆ ಎನ್ನಲಾದ ಪ್ರದೇಶದಲ್ಲಿ ತಡೆಗೋಡೆಯ ಮೇಲೆ ಯಾವುದೇ ಗುಂಡು ತಗುಲಿದ ಚಿಹ್ನೆಗಳು ಹಾಗೂ ಖಾಲಿ ಮದ್ದುಗುಂಡುಗಳು ಕಂಡು ಬರದೇ ಇರುವುದು ಇಡೀ ಪ್ರಕರಣದ ಬಗ್ಗೆ ಸಂಶಯ ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಲಾಳುವಿನ ಇಸ್ರೋ ಕೇಂದ್ರದ ಹೊರಾವಣದಲ್ಲಿ ಗುಂಡಿನ ಚಕಮಕಿ ನಡೆದಿ ರುವ ಯಾವುದೇ ಚಿಹ್ನೆಗಳು ಕಾಣಿಸುತ್ತಿಲ್ಲ . ಈ ಹಿನ್ನೆಲೆಯಲ್ಲಿ ಇದು ಖಂಡಿತವಾಗಿಯೂ ಭಯೋತ್ಪಾದಕರ ಕೃತ್ಯವಲ್ಲ ಎಂದು ಎಡಿಜಿಪಿ ಎ.ಆರ್.ಇನ್‌ಫ್ಯಾಂಟ್ ತಿಳಿಸಿದ್ದಾರೆ.

ಮಂಗಳವಾರ ಇಬ್ಬರು ಖಾಕಿಧಾರಿಗಳು ಶಂಕಾಸ್ಪದ ರೀತಿಯಲ್ಲಿ ಸಂಸ್ಥೆಯ ಹೊರಾವರಣದಲ್ಲಿ ನಿಂತಿದ್ದುದನ್ನು ತಾನು ನೋಡಿದ್ದಾಗಿ ಕೇಂದ್ರದ ಮುಖ್ಯದ್ವಾರದ ಬಳಿ ಕರ್ತವ್ಯದಲ್ಲಿದ್ದ ಸಿ‌ಐ‌ಎಸ್‌ಎಫ್ ಕಾನ್‌ಸ್ಟೇಬಲ್ ಜಾಧವ್ ಹೇಳಿಕೊಂಡಿ ದ್ದಾರೆ.ಅವರನ್ನು ಪ್ರಶ್ನಿಸಲು ತೆರಳಿದ ಜಾಧವ್ ಮೇಲೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಜಾಧವ್ ಕೂಡ ಎಂಟು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಇರದಿದ್ದ ಇತರ ಇಬ್ಬರು ಸಿ‌ಐ‌ಎಸ್‌ಎಫ್ ಯೋಧರು ಅಲ್ಲಿಗೆ ಧಾವಿಸಿ ಗುಂಡಿನ ದಾಳಿ ನಡೆಸಿದರೆಂದು ಹೇಳಲಾಗುತ್ತಿದೆ.

ಎಂಟು ಸುತ್ತಿನ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಜಾಧವ್ ಹೇಳಿಕೊಂಡಿದ್ದರೂ ಅಲ್ಲಿ ಕೇವಲ ಆರು ಖಾಲಿ ಮದ್ದುಗುಂಡುಗಳು ಪತ್ತೆಯಾಗಿವೆ. ಕಾಂಪೌಂಡ್‌ನ ಹೊರಗಡೆ ಯಾವುದೇ ಖಾಲಿ ಮದ್ದುಗುಂಡುಗಳು ಸಿಕ್ಕಿಲ್ಲ ಎಂದು ಇನ್‌ಫ್ಯಾಂಟ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಕಮಲ್‌ನಾಥ್, ರಾಮನಗರ ಎಸ್‌ಪಿ ಬಿ.ಎಸ್.ಬಿಸ್ನಾಲಿ ಮತ್ತಿತರರು ಭೇಟಿ ನೀಡಿದ್ದಾರೆ.

ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿ ಜಾಧವ್ ಹಾಗೂ ಇತರ ಇಬ್ಬರು ಸಿ‌ಐ‌ಎಸ್‌ಎಫ್ ಯೋಧರನ್ನು ಪ್ರಶ್ನಿಸಲಾಗುತ್ತಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲು ಕಾಲ ಪಕ್ವವಾಗಿಲ್ಲ ಎಂದು ಇನ್‌ಫ್ಯಾಂಟ್ ತಿಳಿಸಿದ್ದಾರೆ.

ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳದೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

ಎಂಸಿ‌ಎಫ್: ಕಟ್ಟೆಚ್ಚರ

ಹಾಸನ,ಮಾ.೧೬: ಇಸ್ರೋ ಕೇಂದ್ರದ ಬಳಿ ಗುಂಡಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಇಲ್ಲಿನ ಬಾಹ್ಯಾಕಾಶ ನಿಯಂತ್ರಣ ಕೇಂದ್ರ (ಎಂ.ಸಿ.ಎಫ್.) ದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಎಂ.ಸಿ.ಎಫ್.ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆಯನ್ನು ಒದಗಿಸಲಾಗಿದೆ. ಯಾವಾಗಲೂ ಸಿ.ಐ.ಎಸ್.ಎಫ್. ರಕ್ಷಣೆ ಪಡೆದಿರುವ ಎಂ.ಸಿ.ಎಫ್. ನಲ್ಲಿ ಭಯೋತ್ಪಾದಕರ ದಾಳಿ ರಾಷ್ಟ್ರದಲ್ಲಿ ನಡೆದಾಗ ಭದ್ರತೆಯನ್ನು ಬಿಗಿಗೊಳಿಸಲಾಗುತ್ತದೆ. ಅಂತೆಯೇ ಇಂದಿನಿಂದ ಎಂ.ಸಿ.ಎಫ್.ಗೆ ಭದ್ರತೆ ಹೆಚ್ಚಿಸಿದ್ದು, ಸಿ.ಐ.ಎಸ್.ಎಫ್. ಯೋಧರು ಹದ್ದಿನ ಕಣ್ಣಿಟ್ಟು ಎಂ.ಸಿ.ಎಫ್. ನ ಕಾವಲು ಕಾಯುತ್ತಿದ್ದಾರೆ.

ಹಾಸನ- ಹಳೆಬೀಡು ರಸ್ತೆಯಲ್ಲಿ ಸಾಲಗಾಮೆ ಸಮೀಪ ಇರುವ ಎಂ.ಸಿ.ಎಫ್. ಕೇಂದ್ರದ ಪಕ್ಕದಲ್ಲಿಯೇ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಅಲ್ಲಿ ಸಂಚರಿಸುವ ವಾಹನಗಳ ಮೇಲೂ ಸಿ.ಐ.ಎಸ್.ಎಫ್. ಯೋಧರು ಕಣ್ಗಾವಲು ಇಟ್ಟಿದ್ದಾರೆ. ಅಲ್ಲಿ ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ಸಂಚರಿಸಿದರೂ ತಕ್ಷಣವೇ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ದೂರ ವ್ಯೋಮ ಜಾಲ ?  

ಬೆಂಗಳೂರು, ಮಾ.೧೬: ಭಾರತದ ಮೊದಲ ಚಂದ್ರಯಾನ ಅಭಿಯಾನ ಚಂದ್ರಯಾನ-೧ಕ್ಕೆ ನೆಲದಿಂದ ಬಾಹ್ಯಾಂತರಿಕ್ಷ ನೆರವು ಒದಗಿಸುವ ಸಲುವಾಗಿ ೨೦೦೮ರಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿ ಭಾರತೀಯ ದೂರ ವ್ಯೋಮ ಜಾಲ (ಐಡಿ‌ಎಸ್‌ಎನ್)ಅಸ್ತಿತ್ವಕ್ಕೆ ಬಂದಿತ್ತು.

೩೨ ಮೀಟರ್ ಬಾಹ್ಯಾಂತರಿಕ್ಷ ಆಂಟೆನಾ, ೧೮ ಮೀಟರ್ ಆಂಟೆನಾ ಟರ್ಮಿನಲ್, ೧೧ ಮೀಟರ್ ಆಂಟೆನಾ ಟರ್ಮಿನಲ್, ಭಾರತೀಯ ಬಾಹ್ಯಾಕಾಶ ವಿeನ ದತ್ತಾಂಶ ಕೇಂದ್ರ (ಐ‌ಎಸ್‌ಎಸ್‌ಡಿಸಿ) ಹಾಗೂ ತಾಂತ್ರಿಕ ಸೇವಾ ಕಾಂಪ್ಲೆಕ್ಸನ್ನು ಐಡಿ‌ಎಸ್‌ಎನ್ ಒಳಗೊಂಡಿದೆ.

ಇಸ್ರೋಗೆ ಬಾಹ್ಯಾಂತರಿಕ್ಷ ಅಭಿಯಾನ ಕೈಗೊಳ್ಳುವ ಸಾಮರ್ಥ್ಯ ಹಾಗೂ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಇತರ ಬಾಹ್ಯಾಂತರಿಕ್ಷ ಅಭಿಯಾನಕ್ಕೆ ನೆರವು ಒದಗಿಸಲು ಭಾರತದಲ್ಲಿ ಆರಂಭಗೊಂಡ ಮೊದಲ ಯೋಜನೆ ಇದಾಗಿದೆ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-17 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri