ಮಂಗಳೂರು ಮೂಲದ ಬಾಲಕೃಷ್ಣ ಎಸ್.ಭಂಡಾರಿ ಮಾಸ್ಟರ್‍ಸ್ ಸ್ವಿಮ್ಮಿಂಗ್ ಚ್ಯಾಂಪಿಯನ್ ವಿಜೇತರು |
ಪ್ರಕಟಿಸಿದ ದಿನಾಂಕ : 2010-03-17
ಸ್ವಿಮ್ಮಿಂಗ್ ಫೆಡೆರೇಶನ್ ಆಫ್ ಇಂಡಿಯಾ ಇವರು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಳೆದ ೨೦೧೦ರ ಫೆಬ್ರವರಿ ೨೬ರಿಂದ ೨೮ರ ವರೇಗೆ ನಡೆಸಿದ ೬ನೇ ರಾಷ್ಟ್ರೀಯ ಮಾಸ್ಟರ್‍ಸ್ ಸ್ವಿಮ್ಮಿಂಗ್ ಚ್ಯಾಂಪಿಯನ್‌ಶಿಪ್ ಇದರಲ್ಲಿ ಮುಂಬಯಿಯ ಚೆಂಬೂರು ಇಲ್ಲಿನ ೧೧ನೇ ರಸ್ತೆಯಲ್ಲಿ ನೆಲೆಸಿರುವ ಜೇಷ್ಠ ನಾಗರಿಕ, ಮಂಗಳೂರು ತಲಪಾಡಿ ಮೂಲದ ಬಾಲಕೃಷ್ಣ ಎಸ್.ಭಂಡಾರಿ ಇವರು ಭಾಗವಹಿಸಿದ್ದರು. ಮಹಿಳೆಯರು ಮತ್ತು ಪುರುಷರನ್ನೊಳಗೊಂಡು ಸುಮಾರು ೬೦೦ರಕ್ಕೂ ಅಧಿಕ ಹಿರಿಯ ನಾಗರಿಕ ಈಜು ಸ್ಪರ್ಧಾಳುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ೫೦ ಮೀಟರ್ ಅಂತರದ ಫ್ರೀ ಸೈಲ್ ಮತ್ತು ಬಟರ್‌ಪ್ಲೈ ಸ್ಪರ್ಧೆಯಲ್ಲಿ ಬಾಲಕೃಷ್ಣ ಎಸ್.ಭಂಡಾರಿ ಇವರು ಚಿನ್ನದ ಪದಕ ಹಾಗೂ ೫೦ ಮೀಟರ್ ಅಂತರದ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿ ಜಯಭೇರಿ ಪಡೆದಿರುವರು.
ರಾಷ್ಟ್ರದ ಅನೇಕ ರಾಜ್ಯಗಳ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡು ಈಜುಮೋಜಿನ ಮತ್ತ್ತು ಆರೋಗ್ಯಭಾಗ್ಯದ ಬಗ್ಗೆಯೂ ವಿಚಾರ ವಿನಿಮಯ ಈ ಕಾರ್ಯಕ್ರಮದಲ್ಲಿ ನಡೆದಿತ್ತು. ಭಂಡಾರಿ ಇವರು ಚೆಂಬೂರು ಇಲ್ಲಿನ ಎಕ್ಕರ್‍ಸ್ ಲೈಫ್ ಸ್ಟೈಲ್ ಕ್ಲಬ್ (Acres Life Style Club) ಇಲ್ಲಿ ನಿರಂತರವಾಗಿ ಈಜು ಅಭ್ಯಾಸ ಮಾಡುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|