ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ. |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು,ಮಾ.16: ನಗರದ ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು, ನೂತನವಾಗಿ ನಿರ್ಮಿಸಿದ ಗಜಪ್ರಷ್ಠಾಕಾರದ ಶಿಲಾಮಯ ಗರ್ಭಗುಡಿಯ ದೇಗುಲದಲ್ಲಿ ಇಂದಿನಿಂದ ಮಾರ್ಚ್ 25 ರವರೆಗೆ ಪುನರ್ ಪ್ರತಿಷ್ಠೆ- ಅಷ್ಟಬಂಧ- ಬ್ರಹ್ಮಕಲಶೋತ್ಸವ, ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಸಂಧರ್ಭದಲ್ಲಿ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದರಿಂದ ಊರಿನ ಭಕ್ತಾಧಿಗಳು ಹಾಗೂ ಸಂಘ ಸಂಸ್ಥೆಗಳ ಅಶ್ರಯದಲ್ಲಿ ಸಲ್ಲಿಸಿರುವ ಹಸಿರು ಹೊರೆಕಾಣಿಕೆಯ ಮೆರೆವಣಿಗೆಯು ಇಂದು ನಡೆಯಿತು.
ನಗರದ ಮಂಗಳಾ ಸ್ಟೇಡಿಯಂ ಬಳಿಯಿಂದ ಆರಂಭಗೊಂಡ ಈ ಹೊರೆಕಾಣಿಕೆಯ ಭವ್ಯ ಮೆರೆವಣಿಗೆಯನ್ನು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|ಎಂ. ಮಾಧವ ಭಂಡಾರಿಯವರು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಹೊರಕಾಣಿಕೆ ಮೆರೆವಣಿಗೆಯು ಲೇಡಿಹಿಲ್, ಉರ್ವಾಸ್ಟೋರ್ ರಸ್ತೆಯಾಗಿ ದೇವಳ ತಲುಪಿತು. ಬ್ರಹ್ಮಕಲಶೋತ್ಸವ ಸಮಿತಿಯಾ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಪದ್ಮನಾಭ ಅಮೀನ್, ಗುರುಪ್ರಸಾದ್ ಇನ್ನಿತತರು ಉಪಸ್ಥಿತರಿದ್ದರು.
ಹಸಿರು ಹೊರಕಾಣಿಕೆ ಸಮಿತಿಯಾ ಸಂಚಾಲಕರಾದ ರಾಜಗೋಪಾಲ ರೈ ಸ್ವಾಗತಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|