ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ. |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು,ಮಾ.16: ಶ್ರೀರಾಮ ನಾಮ ತಾರಕ ಮಂತ್ರ ಯಜ್ನ ಸಮಿತಿ ಕಲ್ಲಡ್ಕ ಇವರ ವತಿಯಿಂದ ಮಾರ್ಚ್ 20 ಹಾಗೂ 21 ರಂದು ನಡೆಯಲಿರುವ ಶ್ರೀರಾಮ ನಾಮ ತಾರಕ ಮಂತ್ರ ಜಪ- ಯಜ್ನ ಪ್ರಯುಕ್ತ ಭಕ್ತಾಧಿಗಳು ನೀಡಿರುವ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ ಕಾರ್ಯಕ್ರಮವು ನಗರದ ವುಡ್‌ಲ್ಯಾಂಡ್ಸ್ ಅವರಣದಲ್ಲಿ ಇಂದು ಜರಗಿತು.
ಆದಿ ಚುಂಚನಗಿರಿ ಶಾಖಾ ಮಠ ಕಾವೂರು ಇಲ್ಲಿನ ಶ್ರೀ.ಶ್ರೀ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಇದರ ಉದ್ಘಾಟನೆಯನ್ನು ನೆರೆವೇರಿಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕ್ರಷ್ಣ ಜೆ ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎನ್ ಯೋಗಿಶ್ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ, ಮಂಗಳೂರು ಮೇಯರ್ ಶ್ರೀಮತಿ ರಜನಿ ದುಗ್ಗಣ, ಉಪಮೇಯರ್ ರಾಜೇಂದ್ರ ಕುಮಾರ್, ದ.ಕ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರು ಆದ ಪದ್ಮನಾಭ ಕೊಟ್ಟಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಯಾಗ ಪ್ರದಾನರಾದ ಕಲ್ಲಡ್ಕದ ಡಾ| ಪ್ರಭಾಕರ್ ಭಟ್, ಧರ್ಮ ಸಂಸತ್ತು ಸಮಿತಿ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್, ಡಾ| ವಾಮನ್ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಸುಧೀರ್ ಶೆಟ್ಟಿ ಕಣ್ಣೂರು ಸ್ವಾಗತಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-16
|
|
|