ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ. |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು,ಮಾ.16: ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಕಾಂಕ್ರಿಟ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕ್ರಷ್ಣ ಪಾಲೆಮಾರ್ ಅವರು ಪರಿಶೀಲನೆ ನಡೆಸಿದರು.
ಕಾಮಗಾರಿ ನಡೆಯುತ್ತಿರುವ ಫಳ್ನೀರ್, ಶಿವಬಾಗ್, ಕದ್ರಿ, ದೇರಬೈಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ ಸಚಿವರು ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಮ್ಮಂದ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಅಗಲೀಕರಣಕ್ಕೆ ಜಾಗ ನೀಡುವಲ್ಲಿ ಕೆಲವರು ಅಕ್ಷೇಪ ವ್ಯಕ್ತ ಪಡಿಸಿರುವ ಬಗ್ಗೆ ಸ್ಥಳದಲ್ಲಿ ಹಾಜಾರಿದ್ದ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹಾಗೂ ಮ.ನ.ಪಾ ಅಯುಕ್ತ ಡಾ| ವಿಜಯ ಪ್ರಕಾಶ್ ಅವರಲ್ಲಿ ಚರ್ಚೆ ನಡೆಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರ ಸಮಸ್ಯೆ ಪರಿಹರಿಸುವಂತೆ ಸಲಹೆ ಸೂಚನೆಯನ್ನು ನೀಡಿದರು.
ಮೇಯರ್ ಶ್ರೀಮತಿ ರಜನಿ ದುಗ್ಗಣ, ಉಪಮೇಯರ್ ರಾಜೇಂದ್ರ ಕುಮಾರ್, ಸ್ಥಳೀಯ ಮ.ನ.ಪಾ ಸದಸ್ಯೆ ರೂಪ.ಡಿ.ಬಂಗೇರ ಹಾಗೂ ಮ.ನ.ಪಾ ಇಂಜಿನಿಯರ್‌ಗಳು, ಅಧಿಕಾರಿಗಳು ಈ ಸಂಧರ್ಭದಲ್ಲಿ ಹಾಜಾರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|