ಕನ್ನಡದ ಮೈಲಾರಿ ಚಿತ್ರಕ್ಕೆ ನಾಯಕಿಯಾಗಿ ತೆಲುಗು, ತಮಿಳಿನ ಪ್ರಸಿದ್ದ ನಟಿ ಸದಾ |
ಪ್ರಕಟಿಸಿದ ದಿನಾಂಕ : 2010-03-16
ಕೊನೆಗೂ ತೆಲುಗು ಮತ್ತು ತಮಿಳಿನ ಪ್ರಸಿದ್ಧ ನಟಿ `ಸದಾ' ಕನ್ನಡಕ್ಕೆ ಬರುವುದು ಕಾಯಂ ಆಗಿದೆಯಂತೆ. ಇಷ್ಟಕ್ಕೂ ಸದಾ ಕನ್ನಡಕ್ಕೆ ನಾಯಕಿಯಾಗಿ ಬರುತ್ತಿರುವುದು ಶಿವರಾಜ್‌ಕುಮಾರ್ ಅಭಿನಯದ ಚಿತ್ರಕ್ಕೆ ಎಂಬುದು ವಿಶೇಷ. ಶಿವರಾಜ್‌ಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷೆಯ `ಮೈಲಾರಿ' ಚಿತ್ರಕ್ಕೆ ಶಿವಣ್ಣ ಮತ್ತು ಸದಾ ಜೋಡಿ ಪಕ್ಕಾ ಎಂಬ ಮಾತುಗಳಿವೆ.
ಈಗಾಗಲೇ ಚಿತ್ರದ ನಿರ್ದೇಶಕ ಆರ್.ಚಂದ್ರು ನಟಿ ಸದಾಳನ್ನು ಭೇಟಿಯಾಗಿದ್ದು ಅವರಿಗೆ ಚಿತ್ರದ ಕಥೆ ಹೇಳಿ ಬಂದಿದ್ದಾರಂತೆ. ಸದಾ ಕೂಡಾ ಚಿತ್ರದ ಕಥೆ ಕೇಳಿ ಓಕೆ ಅಂದಿದ್ದಾರಂತೆ. ಇನ್ನೂ ಸಂಭಾವನೆ ಫೈನಲ್ ಆದರೆ ನಟಿ ಸದಾ ಗಾಂಧಿನಗರದಲ್ಲಿ ಸದ್ದು ಮಾಡುವುದು ಖರೆ. ಹಾಗೆ ನೋಡಿದರೆ ಸದಾ ಈ ಹಿಂದೆಯೇ ಕನ್ನಡಕ್ಕೆ ಬರಬೇಕಿತ್ತು.
`ಮೊಗ್ಗಿನಮನಸ್ಸು' ಶಶಾಂಕ್ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಬರಲಿದ್ದಾರೆಂಬ ಸುದ್ದಿ ಇತ್ತು. ಆದೇನಾತೋ ಗೊತ್ತಿಲ್ಲ, ಸದಾ ಬರುವ ಸುದ್ದಿ ಸೈಲೆಂಟ್ ಆಯಿತು. ಅಲ್ಲಿಗೆ ಇಂದ್ರಜಿತ್ ಲಂಕೇಶ್‌ರ `ಮೊನಾಲಿಸಾ' ನಂತರ ಸದಾಗೆ ಕನ್ನಡಕ್ಕೆ ಬರುವ ಯೋಗ ಇಲ್ಲ ಅಂದುಕೊಳ್ಳುತ್ತಿ ರುವಾಗಲೇ ಈಗ `ಮೈಲಾರಿ' ಮೂಲಕ ಸದಾ ಸುದ್ದಿಯಲ್ಲಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|