ಮ೦ಗಳೂರು: ಬೀಚ್‌ಗೆ ವಿಹಾರಕ್ಕೆ ಬ೦ದ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಕಿರುಕುಳ |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು: ರಜಾದಿನಗಳಂದು ಮುಸ್ಸಂಜೆ ಹೊತ್ತು ಬೀಚ್ ವಿಹಾರಕ್ಕೆ ಬರುವ ಜನ ಸಾಮಾ ನ್ಯರಿಗೆ ಹಿಂದೂ ಸಂಘಟನೆಯ ಹೆಸರಲ್ಲಿ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ಸಂಜೆ ವೇಳೆ ಸುರತ್ಕಲ್ ಬೀಚ್ಗೆ ವಿಹಾರಕ್ಕೆ ಬಂದಿದ್ದ ಹಿಂದು ಕುಟುಂಬವೊಂದನ್ನು ಹಿಂದು ಸಂಘಟನೆಯೊಂದರ ಹೆಸರು ಹೇಳಿಕೊಂಡ ತಂಡವೊಂದು ತಡೆದು ನಿಲ್ಲಿಸಿ ಮಹಿಳೆಯರಿಗೆ ಅಶ್ಲೀ ಲವಾಗಿ ನಿಂದಿಸಿದ ಘಟನೆ ನಡೆದಿದೆ. ಇದನ್ನು ವಿಚಾರಿಸಿದ ಕುಟುಂಬದ ಹಿರಿಯರಿಗೆ ಸಂಘಟನೆ ಯ ಸದಸ್ಯರೆನ್ನಲಾದ ಮಂದಿ ಧಮ್ಕಿ ಹಾಕಿದರು ಎನ್ನಲಾಗಿದೆ.
ಕಾವೂರು ಮುಲ್ಲಕಾಡಿನ ಕುಟುಂಬವೊಂದು ನಿನ್ನೆ ಸಂಜೆ ತಡಂಬೈಲಿನ ಸದಾಶಿವ ಮಹಾಗಣ ಪತಿ ದೇವಸ್ಥಾ ನಕ್ಕೆಂದು ಬಂದಿದ್ದು ದೇವರ ದರ್ಶನದ ಬಳಿಕ ಇವರು ಸುರತ್ಕಲ್ ಬೀಚಿಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಇವರನ್ನು ತಡೆದು ನಿಲ್ಲಿಸಿದ ಹನ್ನೆರಡು ಜನರ ತಂಡವೊಂದು ಕುಟುಂಬದ ಮಹಿಳೆಯರ ಬಳಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಅವರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ತಕ್ಷಣ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಾಸ್ತವವಾಗಿ ಕುಟುಂಬವನ್ನು ತಡೆಗಟ್ಟಿದವರು ನಿಜವಾಗಿಯೂ ಹಿಂದೂ ಸಂಘಟನೆಯ ಸದಸ್ಯರೇ ಅಥವಾ ಸಂಘಟನೆ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಯೇ ಎಂದು ತಿಳಿದು ಬಂದಿಲ್ಲ.
ಮೊನ್ನೆ ಪಿಲಿಕುಳದಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದ್ದು. ಪಿಲಿಕುಳಕ್ಕೆ ತಿರುಗಾಟಕ್ಕೆ ಬಂದಿದ್ದ ಕಾರಿನ ಚಕ್ರದ ಗಾಳಿ ತೆಗೆದ ಘಟನೆ ನಡೆದಿದೆ.
ಇದಕ್ಕೆ ಮೊದಲು ಪಿಳಿಕುಳಕ್ಕೆ ಬಂದಿದ್ದ ಮಂಜೇಶ್ವರದ ಮುಸ್ಲಿಂ ಜೋಡಿಯೊಂದರ ಮೇಲೆ ತಪ್ಪು ಕಲ್ಪನೆಯಿಂದ ಮುಸ್ಲಿಂ ಯುವಕರ ತಂಡ ಹಲ್ಲೆಗೆ ಮುಂದಾಗಿತ್ತು. ಓಡಿಹೋಗುವ ಭರದಲ್ಲಿ ಹುಡುಗನ ಬೈಕ್ ಅಪಘಾತಕ್ಕೀಡಾಗಿತ್ತು.
ಇಂತಹ ನೈತಿಕ ಪೊಲೀಸರಿಂದಾಗಿ ಇತ್ತೀಚಿನ ದಿನಗಳಲ್ಲಿ ಬೀಚ್ ಮತ್ತು ಇತರ ಪ್ರವಾಸಿ ತಾಣ ಗಳಿಗೆ ಕುಟುಂಬ ಸಮೇತರಾಗಿ ಬರಲು ಜನರು ಹಿಂಜರಿಯುತ್ತಿದ್ದು ಪೊಲೀಸರು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
| Ronald, Udupi | 2010-03-16 | | \'Annake Nashta Bhoomige Bhara\'! is the true profile of Moral Policing Brigade! |
|