ಮ೦ಗಳೂರು: ಅಸ್ವಸ್ಥನ೦ತೆ ಕಾಣುತ್ತಿದ್ದ ಈತ ಮಹಾನ್ ಕಲಾವಿದ |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು: ಕಲೆಗೆ ಮತ್ಸರ ಇಲ್ಲ. ಅದಕ್ಕೆ ಜಾತಿ, ಮತ, ಪಂಥ, ಪಂಗಡಗಳ ಭೇದವೂ ಇಲ್ಲ. ಬಡವ ಶ್ರೀಮಂತ ಎಂಬ ತಾರತಮ್ಯ ಇಲ್ಲ. ಅದು ಎಂತವರನ್ನೂ ಎಷ್ಟು ಎತ್ತರಕ್ಕೂ ಏರಿಸಬಲ್ಲು ದು. ಅದಕ್ಕೆ ಸಾಕ್ಷಿಯೇ ಈ ವ್ಯಕ್ತಿ.
ನೋಡಲು ಥೇಟ್ ಮಾನಸಿಕ ಅಸ್ವಸ್ಥನಂತೆ ಇರುವ ವ್ಯಕ್ತಿ ಗೋಡೆಯ ಮೇಲೆ ಬಣ್ಣದ ಕಡ್ಡಿ ಇಟ್ಟು ಎಳೆಯುವ ಗೆರೆಗಳೇ ಮನೋಜ್ಞ ಚಿತ್ರವಾಗಿ ಮೂಡಿಬರುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ಅದೆಂತಹ ಅದ್ಭುತ ಚಿತ್ರ ಚಿತ್ರಿಸಿದ ಎಂದರೆ ನೋಡಲು ನೂರಾರು ಜನರಂತೆ ಸೇರಿದರು. ಸಾಕಷ್ಟು ಹಣವನ್ನೂ ನೀಡಿದರು.
ಒಂದು ಕಾಲದಲ್ಲಿ ಖ್ಯಾತ ಚಿತ್ರ ಕಲಾವಿದನಾಗಿದ್ದು ಆ ಬಳಿಕ ಅವಕಾ ಶದ ಕೊರತೆಯಿಂದಲೋ ಇನ್ಯಾ ವುದೋ ಕೌಟುಂಬಿಕ ಸೋಲಿನಿಂ ದಲೋ ಮಾನಸಿಕ ಸ್ಥಿಮಿತ ಕಳೆದು ಕೊಂಡಂತೆ ಕಂಡರೂ ಕಲ್ಪನೆಗಳಿಗೆ ಮಾತ್ರ ಯಾವುದೇ ಮಸುಕು ಕವಿದಿಲ್ಲ.
ಮನದಲ್ಲಿ ಮೂಡುವ ಭಾವನೆಗಳನ್ನು ಕ್ಷಣಮಾತ್ರದಲ್ಲಿ ಗೋಡೆಯ ಮೇಲೆ ಮೂಡಿಸುವಷ್ಟು ಚುರು ಕುತನ ಈ ವ್ಯಕ್ತಿಯಲ್ಲಿದೆ. ಹಾಗಾಗಿ ಯಾವುದೋ ಕಂಪ್ಯೂಟರ್ ಪ್ರಿಂಟ್ ನೋಡಿದಷ್ಟು ನೈಜ್ಯ ವಾಗಿ ಈತನ ಚಿತ್ರಗಳು ಮೂಡಿ ಬರುತ್ತಿದೆ.
ಅವಕಾಶ ಇದ್ದರೂ ಬಳಸಿಕೊಳ್ಳಲಾಗದ ಜನರ ನಡುವೆ ಅವಕಾಶ ವಂಚಿತನಾದ ರಸ್ತೆ ಬದಿಯ ಗೋಡೆಯನ್ನು ಬೋರ್ಡ್ ಮಾಡಿಕೊಂಡು ಬಣ್ಣದ ಕಡ್ಡಿಯನ್ನು ಬಳಸಿಕೊಂಡು ಚಿತ್ರಕಲೆ ಬರೆಯುವ ತಾಕತ್ತು ಇರುವ ಕಲಾವಿದನಿಗೆ ತಲೆ ಬಾಗಲೇ ಬೇಕು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16
|
|
|