ಕಿಂಗ್‌ಫಿಶರ್‌ನಿಂದ ಶೀಘ್ರದಲ್ಲಿಯೇ 7 ಅಂತಾರಾಷ್ಟ್ರೀಯ ವಿಮಾನ ಆರ೦ಭ |
ಪ್ರಕಟಿಸಿದ ದಿನಾಂಕ : 2010-03-16
ಬರ್ಲಿನ್: ಭಾರತದ ೨ನೇ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್‌ಫಿಶರ್ ಏರ್‌ಲೈನ್ಸ್ ಈ ಬೇಸಿಗೆಯಲ್ಲಿ ೭ ನೂತನ ಅಂತಾರಾಷ್ಟ್ರೀಯ ಸೇವೆ ಆರಂಭಿಸಲಿದೆ. ಮಾ.೨೮ರಂದು ನವದೆಹಲಿ-ಲಂಡನ್ ತಡೆರಹಿತ ವಿಮಾನ ಹಾಗೂ ಏ. ೭ರಂದು ನವದೆಹಲಿ-ಹಾಂಕಾಂಗ್ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆಯ ಕೈಗಾರಿಕಾ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಅರ್ಜುನ್ ದಾಸ್‌ಗುಪ್ತಾ ತಿಳಿಸಿದ್ದಾರೆ.
ಪ್ರವಾಸೋದ್ಯಮ ಮೇಳದಲ್ಲಿ ಮಾತನಾಡಿದ ಅವರು, ಇತರ ೫ ವಿಮಾನ ಸಂಚಾರ ಯಾವಾಗ ಆರಂಭವಾಗುವುದು ಎಂಬ ಮಾಹಿತಿಯಿಲ್ಲ. ಆದರೆ, ವಿಮಾನಗಳು ಇದೇ ಬೇಸಿಗೆಯಲ್ಲಿ ಸಂಚಾರ ಆರಂಭಿಸಲಿದೆ ಎಂದಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|