ಬೆ೦ಗಳೂರು: ಪಂಕಜ್ ಆಡ್ವಾಣಿ ಸ್ನೂಕರ್ ಚಾಂಪಿಯನ್ |
ಪ್ರಕಟಿಸಿದ ದಿನಾಂಕ : 2010-03-16
ಬೆಂಗಳೂರು: ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ರಾಷ್ಟ್ರೀಯ ೬ ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್ ಆಡ್ವಾಣಿ ಪ್ರಶಸ್ತಿ ಗೆದ್ದುಕೊಂಡಿ ದ್ದಾರೆ.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಪಂಕಜ್ ಪಶ್ಚಿಮ ಬಂಗಾಳದ ಬೃಜೇಶ್ ದಮಾನಿ ವಿರುದ್ಧ ೮-೫, ೨೫-೬೪, ೫೧(೩೮)-೦೦, ೪೩-೦೯, ೬೦(೬೦)-೦೧, ೨೯-೦೫, ೦೦-೬೯, (೬೯), ೩೬(೨೫)-೩೩, ೩೦-೩೮, ೩೧-೨೫, ೦೮-೩೩, ೦೬-೪೮, (೪೩),೪೭-೧೯, ೧೧-೬೫ (೨೭), ೪೮-(೩೯)-೦೨, ೩೩-೦೨ ಅಂತರದಲ್ಲಿ ಗೆದ್ದುಕೊಂಡರು.
೩ ಮತ್ತು ೪ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ರೇಲ್ವೆಯ ಕಮಲ್ ಚಾವ್ಲಾ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಶನ್ ಬೋರ್ಡ್‌ನ ಮನನ್ ಚಂದ್ರಾ ಅವರನ್ನು ಸೋಲಿಸಿ ೩ನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ರ್ಯಾಂಕಿಂಗ್ ಪಟ್ಟಿ: ಪಂದ್ಯಗಳು ಮುಗಿದ ನಂತರ ಪ್ರಕಟವಾದ ರ್ಯಾಂಕಿಂಗ್ ಪಟ್ಟಿಯಲ್ಲಿ ಪಂಕಜ್ ಆಡ್ವಾಣಿಗೆ ಅಗ್ರಸ್ಥಾನ ದಕ್ಕಿದೆ. ಬೃಜೇಶ್ ದವಾನಿಗೆ ೨ನೇ ರ್ಯಾಂಕ್, ಕಮಲ್ ಚಾವ್ಲಾಗೆ ೩ನೇ ರ್ಯಾಂಕ್, ಮನನ್ ಚಂದ್ರಾ ನಾಲ್ಕನೇ ನೇ ರ್ಯಾಂಕ್, ರಫತ್ ಹಬೀಬ್ ಐದನೇ ರ್ಯಾಂಕ್, ಸಂದೀಪ್ ಗುಲಾಟಿ ಆರನೇ ರ್ಯಾಂಕ್, ಐ.ಎಚ್. ಮನುದೇವ್ ೭ನೇ ರ್ಯಾಂಕ್ ಹಾಗೂ ದಿವ್ಯಾ ಶರ್ಮಾ ಎಂಟನೇ ರ್ಯಾಂಕ್ ಪಡೆದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|