ಮು೦ಬೈ: ಉಗ್ರರಿಗೆ 60 ವರ್ಷ ಜೈಲು ಶಿಕ್ಷೆ: ಮಹರಾಷ್ಟ್ರ ಸರ್ಕಾರ ಚಿಂತನೆ |
ಪ್ರಕಟಿಸಿದ ದಿನಾಂಕ : 2010-03-16
ಮುಂಬಯಿ, ಮಾ. ೧೫: ಭಯೋತ್ಪಾದಕರಿಗೆ ವಿಧಿಸುವ ಜೈಲು ಶಿಕ್ಷೆ ಪ್ರಮಾಣವನ್ನು ಗರಿಷ್ಠ ೬೦ ವರ್ಷಗಳವರೆಗೆ ವಿಸ್ತರಿಸಲು ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರಲು ಮಹಾರಾಷ್ಟ್ರ ಸರ್ಕಾರ ಪರಿಶೀಲಿಸುತ್ತಿದೆ.
ಉಗ್ರರಿಗೆ ಮತ್ತು ರಾಷ್ಟ್ರ ಘಾತುಕರಿಗೆ ೬೦ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಮಾಡಲಾಗಿದೆ ಎಂದು ಗೃಹ ಸಚಿವ ಆರ್.ಆರ್. ಪಾಟೀಲ್ ಹೇಳಿದರು.
ರವಿವಾರ ರಾತ್ರಿ ಅವರು ಪುಣೆಯಲ್ಲಿ ಮಹಿಳಾ ಕೈದಿಗಳಿಗಾಗಿ ರಾಷ್ಟ್ರದ ಮೊಟ್ಟ ಮೊದಲ ಮುಕ್ತ ಕಾರಾಗೃಹ ಉದ್ಘಾಟಿಸಿ ಮಾತನಾಡಿದರು.
ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರುವ ಪ್ರಸ್ತಾವನ್ನು ನಾನು ಅನುಮೋದನೆ ಮಾಡಿದ್ದು, ಕೇಂದ್ರದ ಅನುಮತಿಗಾಗಿ ಕಳುಹಿ ಸಲಾಗುವುದು. ರಾಜ್ಯ ಸರ್ಕಾರ ಮುಂಬಯಿ ಹೈಕೋರ್ಟ್ ಮತ್ತು ಕೇಂದ್ರ ಜೊತೆ ವಿಷಯದ ಕುರಿತಾಗಿ ಸಂವಹನ ನಡೆಸುತ್ತಿದೆ ಎಂದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|