ಗುಂಡ್ಲುಪೇಟೆ: ನೆಲಮಾಳಿಗೆಯಲ್ಲಿ ಉಸಿರುಗಟ್ಟಿ ನಾಲ್ವರ ಸಾವು |
ಪ್ರಕಟಿಸಿದ ದಿನಾಂಕ : 2010-03-16
ಗುಂಡ್ಲುಪೇಟೆ: ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಬಾಳೆ ಕಾಯಿ ಚಿಲ್ಲರೆ ಅಂಗಡಿ ಯ ನೆಲ ಮಾಳಿಗೆಯಲ್ಲಿ ಬಾಳೆಕಾಯಿ ಗೊನೆಗಳನ್ನು ಶೇಖರಿಸಿಟ್ಟಿದ್ದ ತೊಟ್ಟಿಗೆ ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ ವಾಸಿಗಳಾದ ಹರ್ಷಿನ್‌ಕುಮಾರ್ (45), ಅವರ ತಮ್ಮ ಈಶ್ವರ್ (35), ಸಂಬಂಧಿಕ ಪ್ರಕಾಶ್ (22), ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ (20) ಮೃತಪಟ್ಟವರು. ಈ ನೆಲ ಮಾಳಿಗೆ 12 ಅಡಿ ಆಳವಿದ್ದು ಪ್ರತಿನಿತ್ಯ ಬಾಳೆಗೊನೆಗಳನ್ನು ಅಲ್ಲಿ ಶೇಖರಿಸಿಡಲಾಗುತ್ತಿತ್ತು.
ಎಂದಿನಂತೆ ಬಾಳೆಗೊನೆಯನ್ನು ತೆಗೆಯಲು ಹೋದ ಪ್ರಕಾಶ್ ಉಸಿರುಗಟ್ಟಿ ಸಾವನ್ನಪ್ಪಿದರು. ನಂತರ ಈಶ್ವರ್, ಹರ್ಷಿನ್‌ಕುಮಾರ್, ಮಂಜುನಾಥ್ ಅವರು ನೆಲ ಮಾಳಿಗೆ ಒಳಕ್ಕೆ ಇಳಿದಾಗ ಅವರೂ ಉಸಿರುಗಟ್ಟಿ ಮೃತಪಟ್ಟರು.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನು ಮೇಲಕ್ಕೆತ್ತಿ ಪಟ್ಟಣದ ಸಾರ್ವಜ ನಿಕ ಆಸ್ಪತ್ರೆ ಸಾಗಿಸಲಾಗಿತು. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಹರ್ಷಿನ್ ಕುಮಾರ್ ಲಯನ್ಸ್ ಕ್ಲಬ್ ಮತ್ತು ಇತರ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್, ಇಬ್‌ಇನ್‌ಸ್ಪೆಕ್ಟರ್ ಸಿದ್ದರಾಜು, ತಹಶೀಲ್ದಾರ್ ಜಿ.ಎಂ. ಮಂಜುನಾಥ್ ಮುಂತಾದವರು ಭೇಟಿ ನೀಡಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|