ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು

ಕಠಿಣ ಷರತ್ತುಗಳಿಗೆ ಒಳಪಟ್ಟು ವಿದೇಶಿ ವಿವಿಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಮ್ಮತಿ ಸೂಚಿಸಿದೆ.   

ನವದೆಹಲಿ (ಪಿಟಿಐ): ವಿದೇಶಿ ವಿಶ್ವವಿದ್ಯಾಲಯವೊಂದು ಭಾರತದಲ್ಲಿ ಕ್ಯಾಂಪಸ್ ತೆರೆಯಬೇಕು ಎಂದರೆ 50 ಕೋಟಿ ರೂಪಾಯಿ ಮೂಲಧನ ಇಡಬೇಕು ಹಾಗೂ ಶಿಕ್ಷಣ ಚಟುವಟಿಕೆಯಿಂದ ಬರುವ ಹೆಚ್ಚುವರಿ ಹಣಅಥವಾ ಲಾಭವನ್ನು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ಕಠಿಣ ಷರತ್ತುಗಳಿಗೆ ಒಳಪಟ್ಟು ವಿದೇಶಿ ವಿವಿಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಮ್ಮತಿ ಸೂಚಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಕಟು ಟೀಕೆಗೆ ಒಳಗಾಗಿರುವ ‘ವಿದೇಶಿ ಶಿಕ್ಷಣ ಸಂಸ್ಥೆ (ಪ್ರವೇಶ ಮತ್ತು ಕಾರ್ಯಾಚರಣೆ ನಿಯಂತ್ರಣ) ಮಸೂದೆ-2010’ಗೆ ಅಂತಿಮವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದು, ಸಂಸತ್‌ನಲ್ಲಿ ಮಂಡಿಸಲು ಅವಕಾಶ ನೀಡಲಾಗಿದೆ.

ಭಾರತಕ್ಕೆ ಪ್ರವೇಶಿಸಿ ಕಾರ್ಯಚಟುವಟಿಕೆ ಆರಂಭಿಸಲು ಇಚ್ಛಿಸುವ ವಿವಿಗಳು ಪ್ರಮುಖವಾಗಿ ಐವತ್ತು ಕೋಟಿ ರೂಪಾಯಿ ಮೂಲಧನವನ್ನು ಠೇವಣಿಯಾಗಿ ಇಡಬೇಕು. ನಂತರ ಅದರ ಕಾರ್ಯಚಟುವಟಿಕೆಗೆ ಅವಕಾಶ ನೀಡಲಾಗುವುದು.
ಭಾರತದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಪ್ರತಿಯೊಂದು ವಿದೇಶಿ ವಿವಿಯೂ ಸಹ ತಾನು ಕಾರ್ಯನಿರ್ವಹಿಸಲು ಇಚ್ಛಿಸುವ ಪ್ರದೇಶದ ಬಳಿ ಇರುವ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಥವಾ ಇನ್ನಿತರ ನಿಯಂತ್ರಣ ಸಂಸ್ಥೆಗಳ ಬಳಿ ನೋಂದಾಯಿಸಿಕೊಳ್ಳಬೇಕು. 
 
ವಿದೇಶಿ ವಿವಿಯ ಉದ್ದೇಶ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಂಡು ಬಂದರೆ ಕೇಂದ್ರ ಸರ್ಕಾರ ಅಂತಹ ವಿವಿಯ ನೋಂದಣಿ ಅರ್ಜಿಯನ್ನು ತಿರಸ್ಕರಿಸಬಹುದು.

ಹಲವಾರು ಅವಕಾಶಗಳಿಗೆ ನಾಂದಿ ಹಾಡುವ ಈ ಮಸೂದೆಯು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೈಲಿಗಲ್ಲಾಗಿದ್ದು, ಗುಣಮಟ್ಟದ ಶಿಕ್ಷಣ ಪಡೆಯಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಂಪುಟದ ಅನುಮತಿ ದೊರೆತ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದರು.

ಕಂಪನಿ ಕಾಯಿದೆಯ ‘ಸೆಕ್ಷನ್ 25’ ವಿದೇಶಿ ಶಿಕ್ಷಣ ಸಂಸ್ಥೆಗೆ ಅನ್ವಯವಾಗುತ್ತಿದ್ದು, ಈ ಕಾಯಿದೆ ಪ್ರಕಾರ ಶೈಕ್ಷಣಿಕ ಚಟುವಟಿಕೆಯಿಂದ ಬರುವ ಹೆಚ್ಚುವರಿ ಆದಾಯ ಇಲ್ಲವೇ ಲಾಭವನ್ನು ಸಂಸ್ಥೆ ತೆಗೆದುಕೊಂಡು ಹೋಗುವಂತಿಲ್ಲ. ಬದಲಾಗಿ ಆ ಹಣವನ್ನು ಸಂಸ್ಥೆಯ ವಿಸ್ತರಣೆಗೆ ಬಳಸಬಹುದಾಗಿದೆ.

ವಿದೇಶಿ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣದ ಜತೆಗೆ ಸಲಹೆ ನೀಡುವ ಯೋಜನೆ (ಕನ್ಸಲ್ಟೆನ್ಸಿ ಪ್ರಾಜೆಕ್ಟ್)ಗಳನ್ನು ಸ್ಥಾಪಿಸಬಹುದಾಗಿದ್ದು, ಅದರಿಂದ ಬರುವ ಲಾಭವನ್ನು ತೆಗೆದುಕೊಂಡು ಹೋಗಬಹುದಾಗಿದೆ.

ಈ ಮಸೂದೆ ಕಳೆದ ನಾಲ್ಕು ವರ್ಷಗಳಿಂದ ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಹಾಗೂ ಸಮಾಜದ ವಿವಿಧ ರಂಗಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ಹಾಗಾಗಿ ಕಳೆದ ವರ್ಷ ಈ ಮಸೂದೆಯ  ಕರಡನ್ನು  ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಗೆ ಮಾರ್ಪಾಡು ಮಾಡಲು ಕಳುಹಿಸಿದ್ದು, ಅದಕ್ಕೆ ಸೋಮವಾರದ ಸಂಪುಟ ಸಭೆ ಅನುಮತಿ ನೀಡಿದೆ.

ಇಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತದಲ್ಲಿರುವ ಮೀಸಲಾತಿ ವ್ಯವಸ್ಥೆಯು ಅನ್ವಯ ಆಗುವುದಿಲ್ಲ ಎಂದು ಈಗಾಗಲೇ ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ದಾರೆ.

ವಿದೇಶಿ ವಿವಿಗೆ ಕೆಂಪುಹಾಸು

ನವದೆಹಲಿ: ವಿದೇಶಿ ಬಟ್ಟೆಯಾಯ್ತು, ವಿದೇಶಿ ಆಹಾರವಾಯ್ತು, ವಿದೇಶಿ ಆಟಿಕೆಗಳಾಯ್ತ್ತು..., ಇನ್ನು ವಿದೇಶಿ ಸಂಸ್ಥೆಗಳು ನೀಡುವ ಶಿಕ್ಷಣವನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಭಾರತ ಬರಬೇಕಾಗಬಹುದು. ಕಾರಣ, ಕೇಂದ್ರ ಸಚಿವ ಸಂಪುಟ ಸಭೆ ವಿದೇಶಿ ವಿವಿಗಳಿಗೆ ಕೆಂಪುಹಾಸಿನ ಸ್ವಾಗತ ಕೋರುವ ಮಸೂದೆಗೆ ಅನುಮೋದನೆ ನೀಡಿದೆ.

ಈ ವಿವಿಗಳ ಪ್ರವೇಶ ಬೇಡ ಎಂದು ಕಳೆದ ನಾಲ್ಕು ವರ್ಷಗಳಿಂದಲೂ ವಿಪಕ್ಷಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ ಕೆಲ ಮಾರ್ಪಾಡು ಮಾಡಿತ್ತು. ಇದೀಗ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಒಪ್ಪಿಗೆ ನೀಡಲಾಗಿದೆ.

ಮಸೂದೆಯಲ್ಲಿ ವಿವಿಗಳ ಪ್ರವೇಶಕ್ಕೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಮೊದಲು ೫೦ ಕೋಟಿ ಮೂಲಧನ ಇಡಬೇಕಾಗುತ್ತದೆ. ನಂತರ ವಿವಿಗಳಿಂದ ಬರುವ ಲಾಭವನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಈ ಹಣವನ್ನು ಇಲ್ಲಿಯೇ ವಿನಿಯೋಗಿಸಬೇಕು ಎಂದು ನಿಯಮ ಹಾಕಲಾಗಿದೆ. ಈ ನೀತಿಗಳನ್ನು ಒಪ್ಪಿಕೊಂಡು ಬರುವ ವಿವಿಗಳಿಗೆ ಅವಕಾಶ ನೀಡಲಾಗುತ್ತದೆ.

ಹೇಗೆ ಕಾರ್ಯಾಚರಣೆ? : ಭಾರತದಲ್ಲಿ ವಿದೇಶಿ ವಿವಿ ತೆರೆಯುವ ಆಸಕ್ತಿ ಇರುವ ಶಿಕ್ಷಣ ಸಂಸ್ಥೆಗಳಿಗೆ ೮ ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ಯುಜಿಸಿ ಅಥವಾ ಇದಕ್ಕೆ ಸಮನಾದ ಅಧಿಕಾರ ಹೊಂದಿರುವ ಸಂಸ್ಥೆಯೊಂದರಿಂದ ವಿದೇಶಿ ಶಿಕ್ಷಣ ಸಂಸ್ಥೆ ಅನುಮತಿ ಪಡೆಯಬೇಕು. ಬಳಿಕ ಯುಜಿಸಿ ಅಥವಾ ಇದಕ್ಕೆ ಸಮನಾದ ಸಂಸ್ಥೆ ಪರಿಶೀಲನೆ ನಡೆಸುತ್ತದೆ. ಈ ಸಂಸ್ಥೆ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನೋಡಿಕೊಂಡು ಬಳಿಕ ಅನುಮತಿ ನೀಡಲಾಗುತ್ತದೆ. ಆದರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಯಾವುದೇ ದೇಶದ ವಿವಿಗಳ ಸ್ಥಾಪನೆಗೆ ಅನುಮತಿ ನಿರಾಕರಿಸುವ ಅಧಿಕಾರವನ್ನು ಈ ಮಸೂದೆ ಒಳಗೊಂಡಿದೆ. ಯುಜಿಸಿ ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದೆ.

ಶೇ.೧೦೦ರಷ್ಟು ವಿದೇಶಿ ವಿನಿಮಯ!: ೨೦೦೦ನೇ ಇಸವಿಯಲ್ಲಿಯೇ ಶಿಕ್ಷಣ ವಲಯದಲ್ಲಿ ಶೇ.೧೦೦ ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಅವಕಾಶ ನೀಡಲಾಗಿತ್ತು. ಆದರೆ ಭಾರತದಲ್ಲಿ ಪ್ರಸ್ತುತವಿರುವ ಕಾನೂನುಗಳು ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿ ಇಲ್ಲೇ ಕಾರ್ಯ ನಿರ್ವಹಿಸುವ, ಪದವಿ ಕೊಡುವ ಅವಕಾಶ ಇರಲಿಲ್ಲ. ಇದೀಗ ಈ ಮಸೂದೆ ವಿದೇಶಿ ಸಂಸ್ಥೆಗಳು ಇಲ್ಲೇ ವಿವಿ ಸ್ಥಾಪಿಸಿ ಪದವಿ ಅಥವಾ ಉದ್ಯೋಗಾಧಾರಿತ ವಿಷಯಗಳಿಗೆ ತರಬೇತಿ ನೀಡಬಹುದಾಗಿದೆ.  

ಎಲ್ಲೆಲ್ಲಿ ವಿದೇಶಿ ವಿವಿ?
ರಾಜ್ಯಕ್ಕೂ ವಿದೇಶಿ ವಿವಿಗಳ ಆಗಮನವಾಗಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಹೆಸರು ಮಾಡಿರುವ ರಾಜ್ಯದ ಪ್ರಮುಖ ನಗರಗಳಲ್ಲಿ ವಿದೇಶಿ ವಿವಿಗಳ ಸ್ಥಾಪನೆಯಾಗಬಹುದು ಎನ್ನಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿಗಳಲ್ಲಿ ವಿದೇಶಿ ವಿವಿಗಳ ಸ್ಥಾಪನೆಯಾಗಬಹುದು ಎಂಬುದು ಶಿಕ್ಷಣ ವಲಯದ ತಜ್ಞರ ಲೆಕ್ಕಾಚಾರ.

ಸಾಧಕ
ದೇಶದ ವಿವಿಗಳು ಸ್ಪರ್ಧೆ ಎದುರಿಸಬೇಕಾಗುತ್ತದೆ. ಹಾಗಾಗಿ ಉತ್ತಮ ಸಾಧನೆ ತೋರಲು ಅವಕಾಶವಿದೆ.
ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದಲ್ಲೇ ಉತ್ತಮ ಅಧ್ಯಯನ ಅವಕಾಶ, ಉಪನ್ಯಾಸಕರು ಸೇರಿ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ.

ಬಾಧಕ
ದುಬಾರಿ ಶುಲ್ಕದಿಂದ ಬಡ ವಿದ್ಯಾರ್ಥಿಗಳು ವಿದೇಶಿ ವಿವಿ ಪ್ರವೇಶ ಕಷ್ಟ. ವಿದ್ಯಾರ್ಥಿಗಳ ನಡುವೆ ಕಂದಕ ಏರ್ಪಡಬಹುದು.
ನಮ್ಮಲ್ಲಿರುವಂತೆ ರೋಸ್ಟರ್ ವ್ಯವಸ್ಥೆ ಆ ವಿಶ್ವವಿದ್ಯಾಲಯಗಳಲ್ಲಿ ಜಾರಿಯಾಗದೇ ಇರಬಹುದು. ಇದರಿಂದ ಹಿಂದುಳಿದ ಜನಾಂಗಕ್ಕೆ ಅನ್ಯಾಯ ಖಚಿತ.

‘ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲಿ ಕ್ಯಾಂಪಸ್ ತೆರೆಯುವುದರಿಂದ ಸಾಧಕಬಾಧಕ ಎರಡೂ ಇದೆ. ವಿದ್ಯಾರ್ಥಿ ವಲಯದಲ್ಲಿ ಕಂದಕ ಏರ್ಪಡುತ್ತದೆ ಜೊತೆಗೆ ಹೆಚ್ಚಿನ ಅವಕಾಶವೂ ಇದೆ. ಹೀಗಾಗಿ ಧನ ಮತ್ತು ಋಣಾತ್ಮಕ ಅಂಶಗಳುಂಟು.’
- ಡಾ| ಚಿತ್ರಾ ಪಣಿಕ್ಕರ್, ರೀಡರ್, ಇಂಗ್ಲಿಷ್ ವಿಭಾಗ, ಬೆಂವಿವಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡ ಪ್ರಭ | ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-16 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ವಯೋ ವಿವಾದ: ಸರ್ಕಾರ ಪರ ವಾಲಿದ ಸುಪ್ರೀಂ, ಅರ್ಜಿ ಹಿಂಪಡೆದ ಜನರಲ್ ಸಿಂಗ್
»ಮೇಧಾರಿಂದ ಬಸವ ಪ್ರಶಸ್ತಿ ತಿರಸ್ಕಾರ
»ತುರ್ತು ಪರಿಸ್ಥಿತಿ ಸಂದರ್ಭದ ದಾಖಲೆಗಳು ಪ್ರಧಾನಿ ಕಚೇರಿಯ ಕಡತಗಳಲ್ಲಿ ಇಲ್ಲ: ಪತ್ತೆ ಹಚ್ಚಲು ಮಾಹಿತಿ ಆಯೋಗದ ನಿರ್ದೇಶನ
»ಒಂಬತ್ತು ಸರಕಾರಿ ವೆಬ್‌ಸೈಟ್‌ಗಳಿಗೆ ಕನ್ನ: ಎನ್‌ಐಸಿ
»ದೇವತೆಯ ಒಲಿಸಲು ನಾಲಗೆ ಕತ್ತರಿಸಿಕೊಂಡ ಯುವಕ!
»ಶಿರ್ಡಿ ಸಾಯಿಬಾಬಾಗೆ ರೂ. 401 ಕೋಟಿ ನಗದು, 36 ಕೆ.ಜಿ. ಚಿನ್ನ ದೇಣಿಗೆ
»ಮಕ್ಕಳನ್ನು ಸುಮ್ಮನಾಗಿಸಲು ಅಫೀಮು ನೀಡುವ ಕಾರ್ಮಿಕ ತಾಯಿಂದಿರು
»ಜಯಲಲಿತಾ ಪ್ರಕರಣದಲ್ಲಿ ಬಿಜೆಪಿಯ ಒತ್ತಡ: ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ಬಿ.ವಿ. ಆಚಾರ್ಯ
»ಬಾಂಬೆ ಹೈಕೋರ್ಟ್‌ನಿಂದ ದೇಶ್‌ಮುಖ್ ತರಾಟೆಗೆ: ಸಿನಿಮಾ ಸಂಸ್ಥೆಯ ಜಾಗ ಹಿಂದಿರುಗಿಸಲು ಘಾಯ್‌ಗೆ ಆದೇಶ
»ಮೋದಿಗೆ ಕ್ಲೀನ್ ಚಿಟ್: ಸಿಟ್ ವರದಿ ಬೇಸರ ತರಿಸಿದೆ: ಝಕಿಯಾ
»ಮುಂದಿನ ಮಹಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ: ಗಡ್ಕರಿ
»ಗುಜರಾತ್ ದಂಗೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಹಾನಿ: ಎನ್‌ಎಚ್‌ಆರ್‌ಸಿ ವರದಿಯನ್ನು ವಿಧಾನ ಸಭೆಯಲ್ಲಿ ಏಕೆ ಮಂಡಿಸಿಲ್ಲ?: ಮೋದಿ ಸರಕಾರಕ್ಕೆ ಹೈಕೋರ್ಟ್ ತರಾಟೆ
»ಚೆನ್ನೈ: ಕ್ಲಾಸ್‌ರೂಂನಲ್ಲೇ ಶಿಕ್ಷಕಿಯನ್ನೇ ಹತ್ಯೆಗೈದ ವಿದ್ಯಾರ್ಥಿ
»ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
»ಮಾಜಿ ಸಚಿವರ ವಿರುದ್ಧ ವಿರುದ್ಧ ಸೂಕ್ತ ಕ್ರಮ: ಗಡ್ಕರಿ
»‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
»ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಅನುಮತಿ ಕೋರಿ ಸಿವಿಸಿಯಿಂದ ಸರಕಾರಕ್ಕೆ ಮನವಿ
»ವಾರಣಾಸಿ: ಕುಸಿದ ನಿತಿನ್ ಗಡ್ಕರಿ ವೇದಿಕೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಆಂಧ್ರ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ ಸಿಬಿಐ
»ಆಂಧ್ರ ಅಬಕಾರಿ ಸಚಿವ ಮದ್ಯ ಲಾಬಿಯ ಕೈಗೊಂಬೆ: ಎಸಿಬಿ ವರದಿ ಆರೋಪ
»ಶೀಘ್ರವೇ ಅಡ್ಡ ಹಾಯ್ಕೆ ಕ್ಷಿಪಣಿಯ ಪುನಃ ಪರೀಕ್ಷೆ
»‘ಲಕ್ಷ-1’ ಪರೀಕ್ಷೆ ಯಶಸ್ವಿ
»ದಯಾನಿಧಿ ಮಾರನ್ ವಿರುದ್ಧ ಇನ್ನೊಂದು ಪ್ರಕರಣ ದಾಖಲು
»ಸಬ್ಸಿಡಿ ಭೂತ ನಿದ್ದೆಗೆಡಿಸುತ್ತಿದೆ: ಪ್ರಣವ್
»ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ
» ಜೀವವೈವಿಧ್ಯ ತಾಣ: `ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ’
»ರೈಲ್ವೆ ಟಿಕೆಟ್ ಕಾದಿರಿಸುವಿಕೆ ಅವಧಿ 120 ದಿನಗಳವರೆಗೆ ವಿಸ್ತರಣೆ
»ಚುನಾವಣೋತ್ತರ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಿಷೇಧಕ್ಕೆ ಚುನಾವಣಾ ಆಯೋಗದ ಸುತ್ತೋಲೆ
»ಚಿಕಿತ್ಸೆ ವೆಚ್ಚ ಭರಿಸಲಾಗದ ತಾಯಿಯಿಂದ ಮಗನಿಗೆ ದಯಾ ಮರಣ ಕೋರಿ ಅರ್ಜಿ
»ಪತ್ರಕರ್ತೆಯ ಮೇಲೆ ದಾಳಿ: ಚುನಾವಣಾಧಿಕಾರಿ, ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
»ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ
»ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಿಸುತ್ತಿರುವ ಅಝಂಗಡದ ಮಸೀದಿಗಳು
»ಆಂಧ್ರ ಪ್ರದೇಶ: ಸಚಿವರ ವಿರುದ್ಧ ಒಂದಾದ ಐಎಎಸ್ ಅಧಿಕಾರಿಗಳು
»ಅಂತರ್ಜಾಲಾಧಾರಿತ ಔಷಧಿ ವ್ಯಾಪಾರ ತಡೆಗೆ ಸಮಿತಿ
»ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ: ಆರೋಪಿ ಘೋಷ್ ಜಾಮೀನು ಬಿಡುಗಡೆ
»ಮಾ. 16ಕ್ಕೆ ಕೇಂದ್ರ ಬಜೆಟ್
»ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ
»2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ - ಸ್ವಾಮಿ ಆರೋಪ
»ದುಡಿಯದ' ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ
»ಕಪ್ಪುಹಣ; ಕೈ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ: ಮಾಯಾವತಿ
»ಆಕ್ಷೇಪಾರ್ಹ ವಿಷಯ ಅಳಿಸಲು ಜಾಲತಾಣಗಳಿಗೆ ಇನ್ನೂ 15 ದಿನ ಕಾಲಾವಕಾಶ
»ಬಜೆಟ್‌ಗೆ ಗಣಿ ಬಂಪರ್: 49 ಕಂಪೆನಿಗಳ ಗುತ್ತಿಗೆ ರದ್ದು. ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು
»ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
»3000 ಬೆಲ್ಜಿಯಂ ಶೆಫರ್ಡ್ಸ್‌ಗಳಿಗೆ ತರಬೇತಿಗೆ ಸಿಆರ್‌ಪಿಎಫ್ ನಿರ್ಧಾರ
»ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಹಿಮಪಾತದಲ್ಲಿ ಸಮಾಧಿ
»ಮಧ್ಯಪ್ರದೇಶದ ಬಿಜೆಪಿ ಸರಕಾರದಿಂದ ರೂ. 250 ಕೋಟಿ ಗೋ ಹಗರಣ: ಕಾಂಗ್ರೆಸ್
»ಜೀವಂತವಾಗಿ ಬಂದ ‘ಸಾವನ್ನಪ್ಪಿದ’ ಮಹಿಳೆ!
»ಹರೇನ್ ಪಾಂಡ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಗುಜರಾತ್ ಹೈಕೋರ್ಟ್ ನಕಾರ
»ಮೊಬೈಲ್ ಸಂಪರ್ಕ ಮಾರ್ಗಸೂಚಿ ಟ್ರಾಯ್‌ಗೆ ಕಡೆಯ ಅವಕಾಶ
»ರೂ. 36,900 ಕೋಟಿ ಇಂಧನ ಸಬ್ಸಿಡಿ ನೀಡಲು ಮುಂಚೂಣಿ ತೈಲ ಸಂಸ್ಥೆಗಳಿಗೆ ಕೇಂದ್ರದ ಮನವಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri