| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಪ್ರೊ.ಉಪಾಧ್ಯರಿಗೆ ‘ಪ್ರೊ.ಇನಾಂದಾರ್ ಪ್ರಶಸ್ತಿ’ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-16
ಉಡುಪಿ, ಮಾ.೧೫: ವಜ್ರಮಹೋತ್ಸವ ಆಚರಿಸುತ್ತಿರುವ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ಸಹಸಂಸ್ಥೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರತಿವರ್ಷ ಕನ್ನಡದ ಶ್ರೇಷ್ಠ ವಿಮರ್ಶಾ ಗ್ರಂಥಕ್ಕೆ ನೀಡುವ ‘ಪ್ರೊ.ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ’ಯನ್ನು ಈ ಬಾರಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕರಿಗೆ ಸೋಮವಾರ ಇಲ್ಲಿ ಪ್ರದಾನ ಮಾಡಲಾಯಿತು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಇಂದು ನಡೆದ ಕಾಲೇಜು ವಾರ್ಷಿಕೋತ್ಸವ, ಸ್ಥಾಪಕರ ದಿನಾಚರಣೆ ಹಾಗೂ ವಿದ್ಯಾರ್ಥಿ ವೇದಿಕೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿ ಕಾರಿ ಡಾ.ಎಚ್.ಶಾಂತಾರಾಮ್, ಪ್ರೊ.ಉಪಾಧ್ಯರಿಗೆ ಶಾಲು ಹೊದಿಸಿ, ಪ್ರಶಸ್ತಿ ಫಲಕ, ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ತಮ್ಮ ಅಂಕಣ ಬರಹಗಳ ವಿಮರ್ಶಾ ಕೃತಿ ‘ಪುಸ್ತಕ ಪ್ರತಿಷ್ಠೆ’ಗಾಗಿ ೨೦೦೯ರ ಸಾಲಿನ ಇನಾಂದಾರ್ ಪ್ರಶಸ್ತಿ ಪಡೆದ ಪ್ರೊ.ಉಪಾಧ್ಯ ಅವರು ಪ್ರಶಸ್ತಿಯೊಂದಿಗೆ ಬಂದ ನಗದು ಬಹುಮಾನವನ್ನು ಗೋವಿಂದ ಪೈ ಸಂಶೋಧನಾ ಕೇಂದ್ರದ ಪೇಜಾವರ ಸದಾಶಿವ ರಾವ್ ದತ್ತಿನಿಧಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಪ್ರೊ.ಕೆ.ಇ. ರಾಧಾಕೃಷ್ಣ ಮಾತನಾಡಿ, ಇಂದಿನ ಯುವಜನತೆ ಶ್ರಮ ಶಕ್ತಿಯನ್ನು ತಿಳಿದು ಕೊಳ್ಳುತ್ತಿಲ್ಲ ಇದಕ್ಕೆ ತಂತ್ರಜ್ಞಾನವೂ ಕಾರಣವಾಗಿರಬಹುದು ಎಂದರು.
ಡಾ.ಎಚ್.ಶಾಂತಾರಾಮ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಎಸ್.ಶಿವಸ್ವಾಮಿ ಹಾಗೂ ಪ್ರೊ.ಕುಸುಮ ಕಾಮತ್ ಅವರು ಪ್ರಶಸ್ತಿ ವಿಜೇತರು ಹಾಗೂ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಪ್ರೊ.ಮೇಜರ್ ರಾಧಾಕೃಷ್ಣ ಅತಿಥಿಗಳನ್ನು ಸ್ವಾಗತಿಸಿದರು.
ಪ್ರೊ.ಪುಷ್ಪಲತಾ ಸಾಂತ್ಯಾರ್ ಸಂಸ್ಥಾಪಕರ ದಿನಾಚರಣೆಯ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಪಿ.ವೆಂಕಟರಮಣ ಗೌಡ ಕಾಲೇಜಿನ ವರದಿ ವಾಚಿಸಿದರು. ಪ್ರೊ.ಸಂಧ್ಯಾ ನಂಬಿಯಾರ್ ವಂದಿಸಿದರೆ, ವಸಂತ ರವಿಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|