ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ |
ಪ್ರಕಟಿಸಿದ ದಿನಾಂಕ : 2010-03-15
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
{ ಬಹಳ ಚೆನ್ನಾಗಿರುವ ಚಿತ್ರಗಳನ್ನು ನೀವು ನೋಡಲೇ ಬೇಕು }
ಮಂಗಳೂರು,ಮಾ.15: ಇಂದು ಸಂಜೆ ಉದ್ಘಾಟನೆಗೊಳ್ಳಲಿರುವ ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇಂದು ಅಪರಾಹ್ನ 4ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ಅವರಣದಿಂದ ಸಮ್ಮೇಳನ ನಡೆಯುವ ತಾಣವಾದ ಪುರಭವನದವರೆಗೆ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ದಿಬ್ಬಣವು (ಮೆರವಣಿಗೆ) ನಡೆಯಿತು.
ಇಂದಿನ ಸಮ್ಮೇಳನಾಧ್ಯಕ್ಷರಾದ ಪಾದೆಕಲ್ಲು ನರಸಿಂಹ ಭಟ್ ಅವರನ್ನು ಮನಾಪ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ, ಕಸಾಪ ಜಿಲ್ಲಾಧ್ಯಾಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹರಿಕ್ರಷ್ಣ ಪುನರೂರು ಮೊದಲಾದವರು ಸಮ್ಮೇಳನ ತಾಣಕ್ಕೆ ಮೆರವಣಿಗೆ ಮೂಲಕ ಗೌರವಪೂರ್ವಕ ವಾಗಿ ಕರೆತಂದರು.
ಜಿಲ್ಲೆಯ ಸಾಂಸ್ಕ್ರತಿಕ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೋಗಳು, ಕಲಾ ತಂಡಗಳು, ವಿವಿಧ ಶಾಲೆಯ ವಿಧ್ಯಾರ್ಥಿಗಳು ಈ ದಿಬ್ಬಣದಲ್ಲಿ ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|