ಅಜ್ಮಾನ್: ಬಾಡಿ ಎ೦ಡ್ ಸೋಲ್ ಹೆಲ್ತ್ ಕ್ಲಬ್ ವತಿಯಿ೦ದ ವಾರ್ಷಿಕ ಓಟ |
ಪ್ರಕಟಿಸಿದ ದಿನಾಂಕ : 2010-03-15
ಅಜ್ಮಾನ್: ಮಾರ್ಚ್ 12, 2010 ರ೦ದು ಬಾಡಿ ಎ೦ಡ್ ಸೋಲ್ ಹೆಲ್ತ್ ಕ್ಲಬ್ ವತಿಯಿ೦ದ ವತಿಯಿ೦ದ ಅಜ್ಮಾನ್ ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಆವರಣದಲ್ಲಿ ವಾರ್ಷಿಕ ಓಟವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 1000 ಸದಸ್ಯರು ಭಾಗವಹಿಸಿದ್ದರು. ಭಾಗವಹಿಸಿದ್ದರಲ್ಲಿ ಹೆಚ್ಚಿನವರು `ತು೦ಬೆ ಗ್ರೂಪ್' ನ ಸದಸ್ಯರಾಗಿದ್ದರು.

ಪ್ರೊ. ಗೀತಾ ಅಶೋಕ್ ರಾಜ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಪ್ರೊ. ಮೊಹಮ್ಮದ್ ಅರಿಫುಲ್ಲ ಮತ್ತು ಪ್ರೊ. ಗೀತಾ ಅಶೋಕ್ ರಾಜ್ ಅವರು ಜಯಗಳಿಸಿದವರಿಗೆ ಬಹುಮಾನವನ್ನು ನೀಡಿದರು. ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಟಿ-ಶರ್ಟ್ ಮತ್ತು ಸರ್ಟಿಫಿಕೆಟ್ ನ್ನು ನೀಡಲಾಗಿದೆ.

ಪ್ರಥಮ - Kempinski Hotel
ದ್ವಿತೀಯ - Emirates Techno Casting
8ಕಿ.ಮೀನಲ್ಲಿ ಪ್ರಥಮ-Farhanaz Kazmean
ದ್ವಿತೀಯ- Nada

ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|