ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ. |
ಪ್ರಕಟಿಸಿದ ದಿನಾಂಕ : 2010-03-15
(ವಿಶೇಷ ವರದಿ ಹಾಗೂ ಚಿತ್ರ: ಸತೀಶ್ ಕಾಪಿಕಾಡ್)
ಮಂಗಳೂರು,ಮಾ.15: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಪುರಭವನದಲ್ಲಿ ಇಂದು ಬೆಳಿಗ್ಗೆ ಸಮ್ಮೇಳನದ ದ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕ್ರಷ್ಣ ಜೆ ಪಾಲೆಮಾರ್ ಅವರು ರಾಷ್ಟ್ರಧ್ವಜ ರೋಹಣ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮ.ನ.ಪಾ ಮೇಯರ್ ರಜನಿ ದುಗ್ಗಣ ಅವರು ಸಾಹಿತ್ಯ ಪರಿಷತ್ ಧ್ವಜ ಹಾಗೂ ಸಮ್ಮೇಳನದ ಧ್ವಜವನ್ನು ಅನಾವರಣಗೊಳಿಸುವ ಮೂಲಕ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಹಿಂದಿನ 15 ಸಮ್ಮೇಳನಗಳ ಧ್ವಜಗಳನ್ನು ಅನಾವರಣಗೊಳಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಕ್ರಷ್ಣ ಜೆ ಪಾಲೆಮಾರ್ ಅವರು ಕರ್ನಾಟಕ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತಹ ಸಮ್ಮೇಳನ ಇದಾಗಬೇಕು ಹಾಗೂ ನಮ್ಮ ಆಚಾರ, ವಿಚಾರ, ಸಂಸ್ಕ್ರತಿಗಳನ್ನು ಎತ್ತಿ ತೋರಿಸುವಂತಹ ಕಾರ್ಯ ಈ ಸಮ್ಮೇಳದಿಂದ ಆಗಬೇಕು ಎಂದು ನುಡಿದರು.
ಶಾಸಕ ಎನ್ ಯೋಗೀಶ್ ಭಟ್, ಶಾಸಕ ಯು.ಟಿ.ಖಾದರ್, ಉಪಮೇಯರ್ ರಾಜೇಂದ್ರ ಕುಮಾರ್, ಕ.ಸಾ.ಪ ಮಾಜಿ ರಾಜ್ಯಧ್ಯಕ್ಷ ಹರಿಕ್ರಷ್ಣ ಪುನರೂರು, ಮ.ನ.ಪಾ ಅಯುಕ್ತ ಡಾ| ವಿಜಯ ಪ್ರಕಾಶ್, ಎಂ.ಬಿ.ಪುರಾಣಿಕ್, ರತ್ನಕರ್ ಜೈನ್ ಹಾಗೂ ಇನ್ನಿತರ ಹಲವಾರು ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಗಣೇಶ್ ಅಮೀನ್ ಸಂಕಮಾರ್ ವಂದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|