ಮು೦ಬೈ: ಕನ್ನಡದಲ್ಲೂ ಅಮೀರ್ ಚಿತ್ರ ನಿರ್ಮಾಣ? |
ಪ್ರಕಟಿಸಿದ ದಿನಾಂಕ : 2010-03-15
ಮುಂಬೈ: ಭಾನುವಾರ ತನ್ನ ೪೫ನೇ ವರ್ಷಕ್ಕೆ ಕಾಲಿಟ್ಟ ಖ್ಯಾತ ನಟ ಅಮೀರ್ ಖಾನ್ ಹುಟ್ಟು ಹಬ್ಬದ ದಿನದಂದೇ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ಪ್ರಾದೇಶಿಕ ಭಾಷೆಯಲ್ಲಿ ಚಿತ್ರ ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಮೀರ್ ಖಾನ್‌ರಿಂದ ಕನ್ನಡ ಚಿತ್ರಗಳನ್ನೂ ನಿರೀಕ್ಷಿಸಿದರೆ ತಪ್ಪಿಲ್ಲ.
ಹೌದು. ಬಾಂದ್ರಾದ ತನ್ನ ನಿವಾಸದಲ್ಲಿ ಜನ್ಮದಿನ ಆಚರಿಸಿದ ಬಳಿಕ ಮಾತನಾಡಿದ ಅವರು, ನನಗೆ ಮರಾಠಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲ್ಲೂ ಚಿತ್ರ ನಿರ್ಮಿಸುವ ಆಸೆಯಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ವರ್ಷ ನಾನು ಮರಾಠಿ ಹಾಗೂ ಉರ್ದು ಭಾಷೆ ಕಲಿಯುವ ನಿರ್ಧಾರ ಕೈಗೊಂಡಿದ್ದೇನೆ.
ನನಗೆ ಮರಾಠಿ ಓದಲು ಮತ್ತು ಬರೆಯಲು ಬರುತ್ತದೆ. ಆದರೆ ಮಾತನಾಡಲು ಬರುವುದಿಲ್ಲ. ಅಂತೆಯೇ ಉರ್ದು ಭಾಷೆ ಮಾತನಾಡಲು ಬರುತ್ತದೆ. ಆದರೆ ಓದಲು, ಬರೆಯಲು ಬರುವುದಿಲ್ಲ. ಅದಕ್ಕಾಗಿಯೇ ಈ ವರ್ಷ ಮರಾಠಿ ಮತ್ತು ಉರ್ದು ಕಲಿತೇ ಸಿದ್ಧ ಎಂದು ಅವರು ಹೇಳಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15
|
|
|