ಡೊಂಬಿವಿಲಿ: ಪುರಂದರ, ತ್ಯಾಗರಾಜ ಆರಾಧನೋತ್ಸವ |
ಪ್ರಕಟಿಸಿದ ದಿನಾಂಕ : 2010-03-15
ಡೊಂಬಿವಿಲಿ (ಮುಂಬೈ) : ಕರ್ನಾಟಕ ಸಂಗೀತ ಪಿತಾಮಹರು ಪುರಂದರದಾಸರೆಂದು ಅವರು ಸಾಹಿತ್ಯಕ್ಕೆ ಸಂಗೀತಕ್ಕೆ ಆಧ್ಯಾತ್ಮಕ್ಕೆ ಕೊಟ್ಟ ಕೊಡುಗೆ ಅಪಾರ. ವಿಶೇಷವಾಗಿ ಎಲ್ಲ ವರ್ಗದ ಜನರು ಹಾಡಿಕೊಳ್ಳುವಂತೆ ಸರಳವಾಗಿ ಕೃತಿಗಳನ್ನು ರಚಿಸಿದ್ದಾರೆ. ಕಳೆದ ೨೭ ವರ್ಷಗಳಿಂದ ಯುವ ಜನಾಂಗವನ್ನು ಪ್ರೇರೇಪಿಸಿ ಶಾಸ್ತ್ರೀಯ ಸಂಗೀತ ಕಲಿಯುವಂತೆ ಮಾಡುತ್ತಿರುವ ಮೈಸೂ ರು ಸಂಗೀತ ವಿದ್ಯಾಲಯದ ಸಾಹಸ ಮೆಚ್ಚುವಂತಹದ್ದು ಎಂದು ಪ್ರಮುಖ ಲೆಕ್ಕ ಪರಿಶೋಧಕ ಉಮೇಶ್ ಪೈ ಹೇಳಿದರು.
ಡೊಂಬಿವಿಲಿಯ ಮೈಸೂರು ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಶ್ರೀ ಪುರಂದರ- ತ್ಯಾಗರಾಜ ರ ಆರಾಧನೋತ್ಸವದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮತ್ತೋರ್ವ ಅತಿಥಿ ಉದಯ ವಾಣಿ ಸಂಪಾದಕಿ ಡಾ. ಪೂರ್ಣಿಮಾ ಮಾತನಾಡಿ ಇಂತಹ ಸಂಗೀತ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ನಾಗಭೂಷಣ ದಂಪತಿಗಳನ್ನು ಅಭಿನಂದಿಸಿ ತಮ್ಮ ಕೈಲಾದ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ಮುಂಜಾನೆ ವಿದ್ಯಾಲಯದ ಕಿರಿಯ, ಹಿರಿಯ, ಪ್ರೌಢ ವಿದ್ಯಾರ್ಥಿಗಳು ಪುರಂದರ ದಾಸರ, ತ್ಯಾಗರಾಜರ ಕೃತಿಗಳನ್ನು ಗಾಯನ ಮಾಡಿದರು. ಯುವ ಕಲಾವಿದ ರವಿಕಿರಣ್ ಸಂಗೀತ ಕಚೇರಿ ನಡೆಸಿದನು. ಮಹಿಳಾ ವೃಂದದವರಿಂದ ಪುರಂದರ ದಾಸರ ದೇವರ ನಾಮಗಾಯನ ನಡೆಯಿತು. ಕೊನೆಯಲ್ಲಿ ತಾಳವಾದ್ಯ ವಿದ್ಯಾರ್ಥಿಗಳಿಂದ ತಬಲಾ ಮೃದಂಗ ವಾಹನದ ನುಡಿಸುವಿಕೆ ಕಾರ್ಯಕ್ರಮ ನಡೆಯಿತು. ಮಾಸ್ಟರ್ ಆನಂದ್, ಮಾಸ್ಟರ್ ಶ್ರೇಯಸ್ ರವರ ಮೃದಂಗ-ತಬಲಾ ಜುಗಲಬಂಧಿ ರಸಿಕರೆಲ್ಲರ ಮೆಚ್ಚುಗೆ ಪಡೆಯಿತು.
ಕುಮಾರಿ ಅರುಣಾ ದುವ್ವಾರಿ ಪಿಟೀಲಿನಲ್ಲಿ, ರಾಮಮೋಹನ್ ಮೃದಂಗದಲ್ಲಿ ಸಹಕರಿಸಿದರು. ನಾಗಭೂಷಣ ಸ್ವಾಗತಿಸಿದರು. ಉಮಾ ನಾಗಭೂಷಣ ಅತಿಥಿಗಳನ್ನು ಸತ್ಕರಿಸಿದರು. ಉಪಾಧ್ಯ ಕ್ಷ ರಾಮಶೇಟ್ ಹೆಬ್ಬಳ್ಳಿ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.
ಕೆ.ಎಸ್. ರಾವ್ ವಂದಿಸಿದರು. ಆನಂದ ಲಕ್ಷ್ಮಿ ನಿರ್ವಹಿಸಿದರು. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಸಂಗೀತ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಐಶ್ವರ್ಯ, ಗೌರಿ, ದೀಕ್ಷಾ, ಅನುಷಾ, ಕೌಸಲ್ಯ ಮತ್ತು ಶೈಲಶ್ರೀ ಅವರಿಗೆ ಕರ್ನಾಟಕ ಸರ್ಕಾರದಿಂದ ಬಂದ ಅರ್ಹತಾ ಪತ್ರಗಳನ್ನು ಮತ್ತು ಬೆಂಗಳೂರು ನಗರಪಾಲಿಕೆ ಇಂಜಿನಿಯರ್ ಬಾಲಕೃಷ್ಣ ನೀಡಿದ ತಲಾ ೫೦೦ ರು. ನಗದು ಬಹುಮಾನವನ್ನು ಉಮೇಶ ಪೈ ವಿತರಿಸಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15
|
|
|