ಮು೦ಬೈ: ಮನೆಮನೆಗೆ ಕನ್ನಡ ಉಪನ್ಯಾಸ ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2010-03-15
ಲೋಕಧಾರಾ, ಕಲ್ಯಾಣ (ಪೂರ್ವ): ಕನ್ನಡ ಕಲಿಯಲು ತಮ್ಮ ಕಾಲೇಜು ಅನೇಕ ಸೌಲಭ್ಯ ನೀಡುತ್ತ ಬಂದಿದೆ. ಮುಂದೆಯೂ ಎಲ್ಲಾ ಸಹಕಾರ ನೀಡಲು ಕಾಲೇಜು ಬದ್ಧವಾಗಿದ್ದು ಪಿಎಚ್‌ಡಿ ವರೆಗೆ ಕನ್ನಡಕ್ಕಾಗಿ ಅನುಕೂಲ ಕಲ್ಪಿಸಿದ್ದು ಮುಂಬೆಳಕು ಕನ್ನಡ ಬಳಗದ ಕಾರ್ಯದರ್ಶಿ ಡಾ. ಕೆ. ರಘುನಾಥ್ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಶ್ರಮಿಸುತ್ತಾ ಬಂದಿದ್ದಾರೆ. ತಾವೆಲ್ಲ ಮುಂದೆ ಬಂದು ಕನ್ನಡ ವಿಷಯ ಒಂದನ್ನು ಆಯ್ಕೆ ಮಾಡಿ ಏಕಮೇವ ಕನ್ನಡ ಕಾಲೇಜು ಎಂದು ಹೆಸರು ಗಳಿಸಿದ್ದ ನ್ನು ಸಾರ್ಥಕಗೊಳಿಸಬೇಕು ಎಂದು ಪ್ರಮೋದ ಅಥಣಿಕರ ಬೆಂಗಳೂರು ಇವರು ನುಡಿದರು.
ಘಾಟಕೋಪರ ಆರ್.ಜೆ. ಕಾಲೇಜಿನ ಆವರಣದಲ್ಲಿ ಮುಂಬೆಳಕು ಕನ್ನಡ ಬಳಗ ಝಂಝನವಾಲಾ ಕಾಲೇಜು ಕನ್ನಡ ಸಂಘದೊಡನೆ ಆಚರಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮನೆಮನೆಗೆ ಕನ್ನಡ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು.
ಮುಂಬೆಳಕು ಕನ್ನಡ ಬಳಗದ ಅಧ್ಯಕ್ಷ ಬೋಳ ವಿಶ್ವನಾಥ ಕಾಮತರು ಮಾತನಾಡುತ್ತಾ ಮುಂ ಬೈಯಲ್ಲಿ ಕನ್ನಡ ಉಳಿಯಬೇಕಾದರೆ ಸ್ಥಳೀಯ ಕನ್ನಡ ಪತ್ರಿಕೆಯನ್ನು ನೀವೂ ಓದಿ, ನಿಮ್ಮ ಮಕ್ಕಳಿಗೂ ಒಂದಿಷ್ಟು ಅಕ್ಷರ ಕಲಿಸಿ ಎಂದು ತಿಳಿಸಿ ರಂಗಕರ್ಮಿ ಸದಾನಂದ ಸುವರ್ಣ, ಕನ್ನಡ ವಿಭಾಗದ ಮುಂಬೈ ವಿವಿ ಮಾಜಿ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ, ಪ್ರಮೋದ ಅಥಣಿ ಕರ ಇವರೆಲ್ಲ ಸ್ವಯಂ ಸ್ಫೂರ್ತಿಯಿಂದ ದತ್ತಿ ನೀಡಿ ಕನ್ನಡ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
ಇತರ ಸಂಘಗಳಿಗಿಂತ ವಿಭಿನ್ನ ಪಾತಳಿಯಲ್ಲಿ ನಮ್ಮ ಕ್ಷಮತೆಗನುಗುಣವಾಗಿ ನಾವು ಆಯೋಜಿ ಸುವ ಕಾರ್ಯಕ್ರಮ ಜನಮೆಚ್ಚುಗೆ ಪಡೆದಿವೆ ಎಂದರು. ಮುಖ್ಯ ಅತಿಥಿಯಾಗಿದ್ದ ಮುಂಬೆಳಕು ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ವಿದ್ಯಾಧರ ಮುತಾಲಿಕ್ ದೇಸಾಯಿ ಕನ್ನಡ ಮನೆಮನೆಗಳಿಗೆ ತಲುಪಬೇಕಾದ ಮೊದಲು ಮನಕ್ಕೆ, ಮನದಿಂದ ಮನಕ್ಕೆ ತಟ್ಟಬೇಕು. ಸಂವಹನ, ಮಾಧ್ಯಮ, ಶಿಕ್ಷಣ, ಕರ್ತವ್ಯ-ಧರ್ಮ ಈ ೫ ಪ್ರಮುಖ ದೃಷ್ಟಿಕೋನದ ಸಂಕಲ್ಪ ಪೂರ್ವಕದ ಕನ್ನಡದ ಅನು ಸಂಧಾನ ಯುಕ್ತ ಕಾರ್ಯಕ್ಕೆ ಬದ್ಧರಾಗಬೇಕೆಂದರು.
ಮುಂಬೆಳಕು ಉಪಾಧ್ಯಕ್ಷ ಗಿರಿಜಾ, ಸದಸ್ಯರಾದ ದಾಕ್ಷಾಯಿಣಿ, ಅರ್ಚನಾ, ಪತ್ರಕರ್ತ ದಿನೇಶ್ ಉಪಸ್ಥಿತರಿದ್ದರು. ಝಂಝಂನವಾಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಕೆ. ರಘುನಾಥ ನಿರ್ವಹಿಸಿ ವಂದಿಸಿದರು. ವಿದ್ಯಾದರ ಮುತಾಲಿಕ್ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|