| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಳ್ಳಾರೆಯಲ್ಲಿ ತುಳು ಮಿನದನ: ಸವಣೂರಿನಲ್ಲಿ ತುಳು ಸಮ್ಮೇಳನ: ಸೀತಾರಾಮ ರೈ |
ಪ್ರಕಟಿಸಿದ ದಿನಾಂಕ : 2010-03-15
ಸುಳ್ಯ, ಮಾ.೧೪: ಮುಂದಿನ ಡಿಸೆಂಬರ್‌ನಲ್ಲಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ತುಳು ಸಮ್ಮೇಳನ ನಡೆಸಲಾಗುವುದು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಸೀತಾರಾಮ ರೈ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಬೆಳ್ಳಾರೆ ಜೇಸಿಐ ಸಹಯೋಗದೊಂದಿಗೆ ಬೆಳ್ಳಾರೆಯಲ್ಲಿ ರವಿವಾರ ಸಂಘಟಿಸಿದ ‘ತುಳು ಮಿನದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತುಳು ಸಂಸ್ಕೃತಿಗೆ ಭವ್ಯ ಹಿನ್ನೆಲೆ ಇದೆ. ಕೃಷಿಖುಷಿ ನಷ್ಟವಾದರೆ ಈ ಸಂಸ್ಕೃತಿ ಕ್ಷೀಣಿ ಸುತ್ತದೆ. ತುಳು ಮನೆ ಮನೆಗಳಲ್ಲಿ ವಿಜೃಂಭಿ ಸಬೇಕು. ಆಗ ತುಳು ಮನೆ ಮಾತನಾಗುತ್ತದೆ. ತುಳು ಸಂಸ್ಕೃತಿಯೂ ಉಳಿಯುತ್ತದೆ ಎಂದು ಸೀತಾರಾಮ ರೈ ಹೇಳಿದರು.
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ಡಿ.ವಿಠ್ಠಲ ದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಚಂದ್ರಶೇಖರ್ ಕಾಮತ್ ಮುಖ್ಯ ಅತಿಥಿಯಾಗಿದ್ದರು. ತುಳು ಅಕಾಡಮಿಯ ಸದಸ್ಯರುಗಳಾದ ಉದಯ ಧರ್ಮಸ್ಥಳ, ದುಗ್ಗಪ್ಪ ಕಜೆಕಾರ್, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಬೆಳ್ಳಾರೆ ಕಾಲೇಜು ಪ್ರಾಂಶುಪಾಲ ಕೆ.ಸಿ.ಗಣೇಶ್, ಬೆಳ್ಳಾರೆ ಜೇಸಿಐ ಅಧ್ಯಕ್ಷ ಮಿಥುನ್ ಶೆಣೈ, ಸಂಯೋ ಜಕರಾದ ಆರ್.ಕೆ. ಬೆಳ್ಳಾರೆ, ಪ್ರದೀಪ್‌ಕುಮಾರ್ ರೈ ಪನ್ನೆ, ಗಂಗಾಧರ ಬೆಳ್ಳಾರೆ ಉಪಸ್ಥಿತರಿದ್ದರು.
ಬಿ.ಎಸ್.ಸರ್ದಾರ್ ಸ್ವಾಗತಿಸಿ ದರು. ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಕಳಂಜ ವಿಶ್ವನಾಥ ರೈ ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ತುಳು ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ಮೆರವಣಿಗೆ ನಡೆಯಿತು. ಕಂಬಳ ಕೋಣಗಳು, ಜನಪದ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಸಂಭ್ರಮ ಕಳೆಗುಂದಿಸಿದ ಗೈರು
ಬೆಳ್ಳಾರೆಯ ಈ ಸಂಭ್ರಮದ ಕ್ಷಣಗಳಿಗೆ ಅಥಿತಿಗಳ ಗೈರು ಹಾಜರಿ ನಿರಾಸೆ ಮೂಡಿಸಿತು. ಉದ್ಘಾಟಕರಾದ ಸಂಸದ ನಳಿನ್‌ಕುಮಾರ್ ಕಟೀಲು, ಜಿ.ಪಂ.ಅಧ್ಯಕ್ಷ ಸಂತೋಷ್‌ಕುಮಾರ್ ಭಂಡಾರಿ, ಜೇಸಿ ವಲಯಾಧ್ಯಕ್ಷ ಉದಯಕುಮಾರ್ ಗೈರು ಹಾಜರಾಗಿದ್ದರು.
ಅಕಾಡಮಿ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅನಾರೋಗ್ಯದ ಕಾರಣದಿಂದ ಬಂದಿರಲಿಲ್ಲ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|