| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ |
ಪ್ರಕಟಿಸಿದ ದಿನಾಂಕ : 2010-03-15
ಬಂಟ್ವಾಳ, ಮಾ.೧೪: ಶಾಂತಿ ಸುವ್ಯ ವಸ್ಥೆಯ ರಾಜ್ಯ ರೂಪಿಸುವಲ್ಲಿ ಪ್ರತಿ ಯೊಬ್ಬನು ಸರಕಾರದ ಚಿಂತನೆಗಳೊಂ ದಿಗೆ ಕೈ ಜೋಡಿಸಬೇಕು ಎಂದು ರಾಜ್ಯ ಗೃಹಸಚಿವ ವಿ.ಎಸ್. ಆಚಾರ್ಯ ಕರೆ ನೀಡಿದ್ದಾರೆ.
ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಇದರ ಆಶ್ರಯ ದಲ್ಲಿ ತಾಲೂಕಿನ ನಂದಾವರದಲ್ಲಿ ರವಿವಾರ ನಡೆದ ಏಕದಿನ ಸಲಫಿ ಸಮ್ಮೇಳನದ ಸೌಹಾರ್ದ ಸಮಾವೇಶ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಾಂತಿ ಸುವ್ಯವಸ್ಥೆ ಇದ್ದಲ್ಲಿ ಮಾತ್ರ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಮುಂದು ವರಿಯಲು ಸಾಧ್ಯ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಭೇದವಿ ಲ್ಲದೆ ಬಾಳಬೇಕು ಎಂದು ಕರೆ ನೀಡಿದ ಅವರು, ಸನಾತನ ಧರ್ಮ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂ ಡಿತ್ತು ಎಂದರು. ಎಲ್ಲಾ ಧರ್ಮದ ಪ್ರವಾದಿಗಳು ಹೇಳಿರುವುದು ಸತ್ಯ ಎಂದ ಆಚಾರ್ಯರು, ಧಾರ್ಮಿಕ ವಾದ ರೂಪಗಳು ವಿರೂಪಗಳಾಗಿ ಬಂದಿರುವುದರಿಂದ ಧರ್ಮಗಳ ಬಗ್ಗೆ ವಿಕ್ಷಿಪ್ತ ಭಾವನೆ ಬರುವಂತಾಗಿದೆ ಎಂದರು.
ಇದೇ ಸಂಧರ್ಭ ಸಚಿವರು ‘ಮೋಕ್ಷದ ಮಾರ್ಗ’ ಎಂಬ ಪುಸ್ತಕ ವನ್ನು ಬಿಡುಗಡೆಗೊಳಿಸಿದರು, ಹಾಗೂ ಸಲಫಿ ಮೂವ್‌ಮೆಂಟ್‌ನ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
ಸಮ್ಮೇಳನವನ್ನು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಕೇಂದ್ರ ಸಮಿತಿ ಅಧ್ಯಕ್ಷ ಅಹ್ಮದ್ ಅನ್ಸಾರ್ ಉದ್ಘಾಟಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ಎನ್.ಯೋಗೀಶ್ ಭಟ್, ಡಿಸಿಸಿಐ ಉಪಾಧ್ಯಕ್ಷ ಐವನ್ ಡಿಸೋಜ, ಸುಷ್ಮಾ ಜನಾರ್ದನ್, ಮ.ನ.ಪಾ. ಸಚೇತಕ ರಂಗನಾಥ ಕಿಣಿ, ಸಲಫಿ ಮುಖಂಡರಾದ ನಝೀರ್ ಅಹ್ಮದ್, ಕೆ.ಅಬೂಬಕರ್, ಜಿ. ಅಬ್ದುರ್ರಝಾಕ್, ಯು.ಎನ್. ಅಬ್ದುರ್ರಝಾಕ್, ಅಹ್ಮದ್ ಬಾವ ಕಣ್ಣೂರು, ಮುನವ್ವರಲಿ, ಶರ್ಫುದ್ದೀನ್ ದೇರೆಬೈಲು, ಅಬ್ದುಲ್ ಖಾದರ್, ಫಯಾಝ್, ನ್ಯಾಯ ವಾದಿ ಮುಹಮ್ಮದ್ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.
ಡಯಸ್ ಬೆಂಗಳೂರು ಇದರ ಅಧ್ಯಕ್ಷ ಉಮರ್ ಶರೀಫ್, ಮೌಲವಿ ಮುಹಮ್ಮದ್ ಅಕ್ಮಲ್ ಜೌಹರ್, ಮೌಲವಿ ನಿಅಮುತುಲ್ಲಾ ಫಾರೂಕಿ ಪ್ರವಚನಗೈದರು.
ಈ ಸಂದರ್ಭ ನಡೆದ ವಿದ್ಯಾರ್ಥಿ ಯುವಜನ ಸಮಾವೇಶವನ್ನು ಮೌಲವಿ ಹಸನ್ ಶರೀಫ್ ಕುಂಜತ್ತಬೈಲ್ ಉದ್ಘಾಟಿಸಿದರು.
ಮುಹಮ್ಮದ್ ಇಜಾಝ್ ಸ್ವಲಾಹಿ ಅಧ್ಯಕ್ಷತೆ ವಹಿಸಿದ್ದರು. ಮೌಲವಿ ಅಬ್ದುಲ್ ಮಜೀದ್ ಸ್ವಲಾಹಿ, ಮೌಲವಿ ಶಿಹಾಬ್ ವಿಡಕ್ಕರ ಉಪನ್ಯಾಸಗೈದರು.
ಮೌಲವಿ ಅಬ್ದುಲ್ ಮಾಲಿಕ್ ಸಲಫಿ, ಮೌಲವಿ ನಝೀರ್ ಸಲಫಿ, ಮೌಲವಿ ಎ.ಎನ್.ಅಬ್ಬಾಸ್ ಅಬ್ಬೆಟ್ಟು, ಮೌಲವಿ ಅಮೀರ್ ಸ್ವಲಾಹಿ, ನಾಸಿರ್ ಹುಸೈನ್ ಉಳ್ಳಾಲ, ಹಸನ್ ಸಚ್ಚೇರಿಪೇಟೆ, ಡಾ.ಮುನೀರ್ ಅಹ್ಮದ್, ಜಿ.ಪಂ.ಸದಸ್ಯ ಅಝೀಝ್ ಮಲಾರ್, ಅಬ್ದುಲ್ಲಾ ಸುಳ್ಯ, ಮೌಲವಿ ಯೂಕೂಬ್ ಕಲ್ಲರ್ಪೆ ಉಪಸ್ಥಿತರಿದ್ದರು.
ಅಶ್ರಫ್ ಉಜಿರೆ ಸ್ವಾಗತಿಸಿದರು. ಮುಹಮ್ಮದ್ ಗುಲಾಂ ವಂದಿಸಿದರು. ಇಸ್ಮಾಯೀಲ್ ಶಾಫಿ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|
|
|