ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ |
ಪ್ರಕಟಿಸಿದ ದಿನಾಂಕ : 2010-03-15
ದುಬೈ: ಇದೇ ಶುಕ್ರವಾರ ತಾ.೧೯ ರಂದು ಬ್ಯಾರೀಸ್ ಕಲ್ಚರಲ್ ಫೋರಂ ಶಾರ್ಜಾ ವಿಭಾಗದ ಆಶ್ರಯದಲ್ಲಿ ಈ ಸಾಲಿನ ಬಿ.ಸಿ.ಎಫ್ ಕ್ರೀಡಾ ಕೂಟ ನೆಡೆಯಲಿದೆ ಎಂದು ಕ್ರೀಡಾ ಸಮಿತಿಯ ಅದ್ಯಕ್ಷ ಮಹಮ್ಮದ್ ಶಾಹದ್ ಅವರು ತಿಳಿಸಿದ್ದಾರೆ.
ಶಾರ್ಜಾ ನೇಶನ್ಲ್ ಪೈಂಟ್ ಹತ್ತಿರ ಇರುವ ಗಲ್ಫ್ ಏಷಿಯನ್ ಇಂಗ್ಲೀಷ್ ಸ್ಕೂಲ್ ಹೊರಾಂಗಣದಲ್ಲಿ ಬೆಳಿಗ್ಗೆ 9ರಿಂದ ಸಾಯಂಕಾಲದವರೆಗೆ ನೆಡೆಯಲಿರುವ ಈ ಕ್ರೀಡಾ ಕೂಟವು ದಿನ ಪೂರ್ತಿ ನಕ್ಕು ನಲಿಸುವ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕೀಡಾ ಕೂಟದ ಯಶಸ್ವಿಯಾಗಿಸಲು ಸಹಕರಿಸಬೇಕೆಂದು ಕ್ರೀಡಾ ಸಮಿತಿ ಕರೆ ನೀಡಿದೆ.
ಬಿ.ಸಿ.ಎಫ್ ಅದ್ಯಕ್ಷ ಡಾ.ಬಿ.ಕೆ.ಯುಸುಫ್, ಕಾರ್ಯದರ್ಶಿ ಡಾ.ಕಾಪು ಮಹಮ್ಮದ್, ಉಪಾದ್ಯಕ್ಷ ಅಬು ಸಲಿಹ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅದ್ಯಕ್ಷ ನೋಯಲ್ ಅಲ್ಮೇಡಾ ಬಾಗವಹಿಸಲಿರುವ ಈ ಸಡಗರದಲ್ಲಿ ಮದ್ಯಾಹ್ನ ಬರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ ಕ್ರೀಡಾ ಸಮಿತಿಯ ಅದ್ಯಕ್ಷ ಮಹಮ್ಮದ್ ಶಾಹದ್ ( 050-7152888), ಉಪಾದ್ಯಕ್ಷರುಗಳಾದ ಹುಮಾಯೂನ್ (050- 5451034), ಅಬ್ದುಲ್ ಲತೀಫ್ (050-6530518) ಹಾಗೂ ಇರ್ಶಾದ್ (050-8714373), ಅಬ್ದುಲ್ ರಹಿಮಾನ್ ಸಜಿಪ, ಆಫಿಕ್ ಹುಸೈನ್ (050- 5883943) ಮತ್ತು ಮಹಮ್ಮದ್ ಇಕ್ಬಾಲ್ (050-5149106) ಅವರಗಳನ್ನು ಸಂಪರ್ಕಿಸಿರಿ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00
|
|
|