ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ |
ಪ್ರಕಟಿಸಿದ ದಿನಾಂಕ : 2010-03-14
ವಿವಾದಗಳ ಮುಳ್ಳಿನ ಹಾದಿಯಲ್ಲೇ ರಾಜಕೀಯದಲ್ಲಿ ದೀರ್ಘಕಾಲ ನಡೆದು ಬಂದಿರುವ ಗುಜರಾತಿ ನ ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಈಗ ಹೊಸ ಬಗೆಯ ಇತಿಹಾಸದ ದಾಖಲೆ ಸೃಷ್ಟಿಯಾಗಿದೆ.
ಇದುವರೆಗೆ ಭಾರತದಲ್ಲಿ ಯಾವ ಮುಖ್ಯಮಂತ್ರಿಯನ್ನೂ, ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾದಳ 'ವಿಚಾರಣೆಗಾಗಿ' ಕರೆದಿರಲಿಲ್ಲ. ಈಗ ೨೦೦೨ರ ಗೋಧ್ರಾ ದುರಂತದ ಅನಂತರದ ಗುಜರಾತ್ ಹತ್ಯಾಕಾಂಡದಲ್ಲಿನ ಒಂದು ಪ್ರಕರಣದಲ್ಲಿ (ಗುಲ್ಬಾರ್ಗ್ ಸೊಸೈಟಿ ಸಾಮೂಹಿಕ ಹತ್ಯೆ) ಹೇಳಿಕೆ ನೀಡಬೇಕೆಂದು ಆ ಪ್ರಕರಣದ ವಿಶೇಷ ತನಿಖೆ ನಡೆಸುತ್ತಿರುವ ವಿಶೇಷ ತನಿಖಾದಳ ಮೋದಿಯ ವರನ್ನು ತನ್ನ ಕಾರ್ಯಾಲಯಕ್ಕೇ ಕರೆದಿದೆ.
ಈ ವಿಶೇಷ ತನಿಖಾದಳ ನೇಮಕವಾಗಿದ್ದು ಸುಪ್ರೀಮ್ ಕೋರ್ಟಿನಲ್ಲಿ ಸಲ್ಲಿಸಿದ್ದ ಒಂದು ಅರ್ಜಿಯ ವಿಚಾರಣೆ ಪ್ರಕರಣದಲ್ಲಿ ವಿಶೇಷ ತನಿಖೆಗೆ ವ್ಯವಸ್ಥೆಯಾದ ಸಂದರ್ಭದಲ್ಲಿ.
ಆ ಸಾಮೂಹಿಕ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸತ್ ಸದಸ್ಯ ಎಹ್ಸಾನ್ ಜಾಫ್ರಿ ಅವರೂ ಸೇರಿ ದಂತೆ ೬೯ ಮಂದಿಯ ಸಜೀವ ದಹನವಾಗಿತ್ತು. ಸ್ಥಳೀಯ ಪೊಲೀಸರು ಜನರ ಪ್ರಾಣ ರಕ್ಷಣೆಯ ಕರ್ತವ್ಯದಲ್ಲಿ ಚ್ಯುತಿ ಎಸಗಿದ್ದಾರೆಂದೂ, ಇದಕ್ಕೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪ್ರೇರಣೆ ಇತ್ತೆಂದೂ ಜಾಫ್ರಿ ಅವರ ಪತ್ನಿ ದೂರನ್ನು ನೀಡಿದ್ದರು.
ರಾಜ್ಯದ ಎಲ್ಲ ಜನರ ಮಾನಪ್ರಾಣಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತ ಮುಖ್ಯ ಮಂತ್ರಿಯನ್ನೇ ಆರೋಪಿಯನ್ನಾಗಿ ಮಾಡುವಂತಹ ದೂರಿದು. ಸುಪ್ರೀಮ್ ಕೋರ್ಟಿನ ಆದೇಶದ ಮೇಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾದಳ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವರ್ಷಗಳ ಅನಂತರ ಅಂದಿನ ಮುಖ್ಯಮಂತ್ರಿಗೆ 'ಸಮನ್ಸ್' ಜಾರಿ ಮಾಡುವಂತೆ ವ್ಯವಸ್ಥೆ ಮಾಡಿ ದೆ. ಅಹಮದಾಬಾದ್ ನಗರಕ್ಕೇ ಆ ಪ್ರಕರಣದ ತನಿಖೆ ಸೀಮಿತವೆಂದೂ, ಇಲ್ಲಿ ಇತರ ಪ್ರಕರಣ ಗಳ ವಿವರಗಳ ಪ್ರಸ್ತಾಪವಾಗುವುದಿಲ್ಲವೆಂದೂ ವಿಶೇಷ ತನಿಖಾ ದಳದ ವಕ್ತಾರರು ಸ್ಪಷ್ಟಪಡಿಸಿ ದ್ದಾರೆ.
ಒಂದು ರಾಜ್ಯದಲ್ಲಿನ ಸಂವಿಧಾನ ವಿಧಿದ್ವಾರಾ ಸ್ಥಾಪನೆಯಾಗಿರುವ ಸರ್ಕಾರದ ನಾಯಕ, ಮುಖ್ಯ ಮಂತ್ರಿ ಒಂದು ಕ್ರಿಮಿನಲ್ ಪ್ರಕರಣದಲ್ಲಿ ತನಿಖಾಧಿಕಾರಿಯ ಮುಂದೆ ಹೇಳಿಕೆಯನ್ನು ಕೊಡಲು, ಪೊಲೀಸ್ ಕಾರ್ಯಾಲಯಕ್ಕೇ ಹೋಗುವುದೆಂದರೆ ನಿಜಕ್ಕೂ ಒಂದು ವಿಚಿತ್ರವಾದ ಸ್ಥಿತಿಯನ್ನು ಸೃಷ್ಟಿಸಿದಂತೆಯೇ ಆಗಿದೆ.
೨೦೦೨ರಲ್ಲಿ ಗೋಧ್ರಾದ ಸಬರಮತೀ ಎಕ್ಸ್‌ಪ್ರೆಸ್‌ಗೆ ಬೆಂಕಿ ಹೊತ್ತಿ ಸುಮಾರು ಅರವತ್ತು ಕರಸೇವ ಕರ ನಿಧನದ ಘಟನೆಯ ಅನಂತರ, ಆ ಸಂಬಂಧದಲ್ಲಿ ಯಾವುದೇ ರೀತಿಯ ಬೆಳವಣಿಗೆಯಾ ದರೂ ಅದನ್ನು ನರೇಂದ್ರ ಮೋದಿಯ ತಲೆಗೇ ಕಟ್ಟುವ ಪ್ರವೃತ್ತಿ ಬೆಳೆದಿದೆ. ಇದನ್ನೆಲ್ಲ ಜೀರ್ಣಿಸಿ ಕೊಂಡು, ನರೇಂದ್ರ ಮೋದಿ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯ ವರ್ತನೆ ರಾಜಕೀಯ ಇತಿಹಾಸವನ್ನೇ ನಿರ್ಮಿಸಬಹುದು. ಘಟನೆ ನಡೆದ ಎಂಟು ವರ್ಷಗಳ ಅನಂತರ ಮುಖ್ಯಮಂತ್ರಿ ಪೊಲೀಸ್ ತನಿಖಾ ಅಧಿಕಾರಿಗಳ ಸಮ್ಮುಖದಲ್ಲಿ ಹೇಳಿಕೆ ನೀಡುವುದರಿಂದ ಆಗಬಹುದಾದ ನಿಜವಾದ ಪ್ರಯೋಜನವನ್ನು ಊಹಿಸು ವುದು ಕಷ್ಟವೇನೂ ಅಲ್ಲ. ಯಾವ ರೀತಿಯಲ್ಲಿ ನೋಡಿದರೂ ಇದೊಂದು ರಾಜಕೀಯದ ಸೋಂಕಿ ರುವ ವಿಷಯವೇ. ಅದನ್ನು ಸಾಕ್ಷ್ಯ ಸಂಹಿತೆಯ ಚೌಕಟ್ಟಿಗೆ ಸಿಕ್ಕಿಸುವುದು ಕಷ್ಟ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|