ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು |
ಪ್ರಕಟಿಸಿದ ದಿನಾಂಕ : 2010-03-14
ಇತ್ತೀಚೆಗೆ ನಮ್ಮ ದೇಶದಲ್ಲಿ ಸಾವಿರಾರು ಜನರು, ಭೂ ಹಾಗೂ ಜಲಚರ ಜೀವರಾಶಿಗಳ ಸಾವಿಗೆ ಹಾಗೂ ನಿರ್ವಸತಿಗೆ ಕಾರಣವಾದ ತ್ಸುನಾಮಿಯು ಕಾಂಡ್ಲಾವನವಿರುವ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾನಿ ಮಾಡಿರು ವುದನ್ನು ಗಮನಿಸಲಾಗಿದೆ ಮತ್ತು ಈ ಬಗ್ಗೆ ದಾಖಲೆಗಳು ಲಭ್ಯ ವಾಗಿವೆ ಎಂದು ಅರಣ್ಯ ಇಲಾಖೆಯ ಮಾಹಿತಿ ಹೇಳುತ್ತದೆ. ಆದುದರಿಂದ ಬಿರುಗಾಳಿ, ತ್ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳನ್ನು ಕಾಂಡ್ಲಾವನಗಳ ಮೂಲಕ ಸ್ವಲ್ಪಮಟ್ಟಿಗೆ ತಡೆಯಬಹು ದಾಗಿದೆ.
ಮಂಗಳೂರು: `ಕಾಂಡ್ಲಾ' ಕರಾವಳಿ ಪ್ರದೇಶದ ಭೂ- ಪರಿಸರ ಸಂರಕ್ಷಣೆ ಹಾಗೂ ಮಾನವ ಮತ್ತು ಇತರ ಜೀವರಾಶಿ ಗಳ ಉಳಿವಿನಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವ ಒಂದು ವಿಶೇಷ ಸಸ್ಯ ಸಂಕುಲ. ಸಮುದ್ರ ಸೇರುವ ಮುಖಜ ಭೂಮಿಗಳಲ್ಲಿ ಬೆಳೆದು ನಿಂತಿರುವ, ಹಚ್ಚಹಸಿರಿನ ಕಾಂಡ್ಲಾವನ ಕರಾವಳಿಯ ಸೌಂದರ್ಯಕ್ಕೆ ವಿಶೇಷ ಮೆರಗು ನೀಡಿ ಕಣ್ಮನ ಸೆಳೆಯುತ್ತಿದೆ.
`ಕಾಂಡ್ಲಾ ವನಗಳನ್ನು ರಕ್ಷಿಸಲು ಸಹಕರಿಸಿ ಕಾಂಡ್ಲಾಗಳು ನಿಮ್ಮನ್ನು ರಕ್ಷಿಸುತ್ತವೆ' ಇದು ಅರಣ್ಯ ಇಲಾಖೆಯ ಒಂದು ಘೋಷಣೆ. ಕಾಂಡ್ಲಾವನಗಳನ್ನು ಉಳಿಸಿ ಬೆಳೆಸೋಣ ಮತ್ತು ಅಭಿವೃದ್ಧಿ ಪಡಿಯೋಣ' ಎಂಬ ಘೋಷಣೆಯೊಂದಿಗೆ ೨೦೦೭- ೨೦೦೮ ಹಾಗೂ ೨೦೦೮-೦೯ನೇ ಸಾಲಿನಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕರಾವಳಿಯಲ್ಲಿ ಕಾಂಡ್ಲಾ ವನಗಳನ್ನು ಬೆಳೆಸಿ ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದರಂತೆ ಕರಾವಳಿ ಪ್ರದೇಶದ ಹಿನ್ನೀರಿನ ಮತ್ತು ಜವುಗು ಪ್ರದೇಶಗಳಲ್ಲಿ ಈ ಹಿಂದೆ ಇರುವ ಕಾಂಡ್ಲಾವನಗಳ ಜತೆಗೆ ಇನ್ನಷ್ಟು ಕಾಂಡ್ಲಾವನಗಳನ್ನು ಬೆಳೆಸಲಾಯಿತು. ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗ, ಕುಂದಾಪುರ, ಹೊನ್ನಾವರ, ಕಾರವಾರದಲ್ಲಿ ಪ್ರಮುಖ ಕಾಂಡ್ಲಾ ವನಗಳಿವೆ. ಮಂಗಳೂರು ಅರಣ್ಯ ವಿಭಾಗದ ಉಳ್ಳಾಲ, ಬೆಂಗರೆ, ಸಸಿಹಿತ್ಲು, ತಣ್ಣೀರು ಬಾವಿ, ಜಪ್ಪಿನ ಮೊಗರು ಪ್ರದೇಶಗಳಲ್ಲಿ ಸುಮಾರು ೨೫೦ ಹೆಕ್ಟೇರ್ ಪ್ರದೇಶಗಳಲ್ಲಿ ಕಾಂಡ್ಲಾವನ ಗಳನ್ನು ಬೆಳೆಸಲಾಗಿದೆ.
-ಪರಿಸರ, ಜೀವವೈವಿಧ್ಯ ರಕ್ಷಕ: :ಕರಾ ವಳಿ ಪ್ರದೇಶದ ಒಂದು ವಿಶೇಷ ಸಸ್ಯ ಸಂಕುಲ ವಾಗಿರುವ ಕಾಂಡ್ಲಾ ಅಮ್ಲಜನಕ ಕಡಿಮೆ ಇರುವಂತಹ ಹಿನ್ನೀರು ಮತ್ತು ಜವುಗು ಪ್ರದೇಶಗಳಲ್ಲಿ ನೆಲ ಮತ್ತು ಸಮುದ್ರದ ನಡುವಣ ಹಿನ್ನೀರು ಪರಿಸರ ದಲ್ಲಿ ಬೆಳೆಯುತ್ತದೆ.ಚಿಗುರು ಕಾಂಡ್ಲಾ, ಪೆನ್ಸಿಲ್ ಕಾಂಡ್ಲಾ, ಚೀರ್ ಕಾಂಡ್ಲಾ , ಬೇರು ಕಾಂಡ್ಲಾ, ಗಿರಿಗಿಟ್ಲಿ ಕಾಂಡ್ಲ ಮುಂತಾದ ಪ್ರಭೇದಗಳು ನಮ್ಮ ಕರಾವಳಿಯಲ್ಲಿ ಕಂಡುಬಂದಿದೆ. ಈ ಕಾಂಡ್ಲಾವನಗಳು ೪ ಬಿ/ಟಿಎಸ್೨ ಪ್ರಭೇದಗಳಿಗೆ ಸೇರಿದವು ಗಳೆಂದು ಚಾಂಪಿಯನ್ ಮತ್ತು ಸೇಟ್ ಅವರ ಪ್ರಕಾರ ದಾಖಲೆಗಳಲ್ಲಿ ನಮೂದಿಸ ಲ್ಪಟ್ಟಿದೆ.
ಕಾಂಡ್ಲಾವನಗಳು ಮತ್ಸ್ಯ, ಪಕ್ಷಿಗಳ ವಂಶವರ್ಧನೆ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತಿವೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ.
ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಸಾಮಾನ್ಯವಾಗಿ ಕರಾವಳಿಯಲ್ಲಿ ೩೧೦ ಜಾತಿಯ ಮೀನುಗಳು ಹಾಗೂ ೧೦ ಜಾತಿಯ ಸಿಗಡಿಗಳಿರುವುದು ದಾಖ ಲಾಗಿದೆ. ಏಡಿ, ಸಿಗಡಿ, ಕಾಣೆ, ಬೂತಾಯಿ, ಅಂಜಲ್, ಬಂಗುಡೆ, ಮಾಂಜಿ, ತಾಟೆ ಮುಂತಾದ ಮತ್ಸ್ಯ ಸಂಪತ್ತು ಕಂಡು ಬರು ತ್ತದೆ. ಕಾಂಡ್ಲ ಸಸ್ಯಸಂಕುಲವು ಮತ್ಸ್ಯಜೀವಿ ಗಳ ಸಂತಾನೋತ್ಪತಿ ಮತ್ತು ಬೆಳವಣಿಗೆಗೆ ಪೂರಕವಾದ ಪರಿಸರವನ್ನು ನಿರ್ಮಿಸಿದೆ.
ಕರಾವಳಿ ಪ್ರದೇಶದ ಸುಮಾರು ೬೦ ಸಸ್ತನಿ ಪ್ರಭೇದಗಳು, ೨೦೦ ಪಕ್ಷಿ ಪ್ರಭೇದ ಗಳು, ೫೭ ಉರ ಗ ಪ್ರಭೇದಗಳು ಹಾಗೂ ೨೩ ಭೂ-ಜಲಚರ ಪ್ರಾಣಿ ಪ್ರಭೇದಗಳು ಇಲ್ಲಿವೆ. ಇವುಗಳಲ್ಲಿ ಹೆಚ್ಚಿನ ವರ್ಗಗಳಿಗೆ ಕಾಂಡ್ಲಾವನಗಳು ವಂಶಾಭಿ ವೃದ್ಧಿಯ ತಾಣವಾಗಿವೆ. ಅಲ್ಲದೆ ವರ್ಷದ ವಿವಿಧ ಋತು ಗಳಲ್ಲಿ ವಲಸೆ ಬರುವ ಹಕ್ಕಿಗಳಿಗೆ ಅಶ್ರಯತಾಣಗಳಾಗಿವೆ.
ಅರಣ್ಯ ಇಲಾಖೆ ವಿವಿಧ ಯೋಜನೆ ಗಳಡಿಯಲ್ಲಿ ಕರಾವಳಿಯಲ್ಲಿ ಕಾಂಡ್ಲಾವನ ಗಳನ್ನು ಬೆಳೆಸಿದೆ. ಕೇಂದ್ರ ಸರಕಾರದ ಒಂದು ಹಂತದ ಯೋಜನೆ ಪೂರ್ಣ ಗೊಂಡಿದೆ. ಬೆಳೆಸಿದ ವನಗಳನ್ನು ಸಂ ರಕ್ಷಿಸುವ, ಸಾಧ್ಯವಿರುವ ಕಡೆಗಳಲ್ಲಿ ಇನ್ನಷ್ಟು ಬೆಳೆಸುವ ಕಾರ್ಯ ನಡೆಯಬೇಕಾಗಿದೆ. ಕಾಂಡ್ಲಾ ವನಗಳ ಸಂರಕ್ಷಣೆ ಬಗ್ಗೆ ಜನ ಜಾಗೃತಿ, ಹೊಸ ಯೋಜನೆಗಳ ಅಗತ್ಯವಿದೆ.
ವರದಿಯ ವಿವರಗಳು |
 |
ಕೃಪೆ : ಕೇಶವ ಕುಂದರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|