ವಾಷಿ೦ಗ್ಟನ್: ತನಗೆ ಸಿಕಿದ ನೊಬೆಲ್ ಪ್ರಶಸ್ತಿಯ ಹಣವನ್ನು ದಾನ ನೀಡಿದ ಒಬಾಮ |
ಪ್ರಕಟಿಸಿದ ದಿನಾಂಕ : 2010-03-14
ವಾಷಿಂಗ್ಟನ್ (ಡಿಪಿಎ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ನೊಬೆಲ್ ಶಾಂತಿ ಪ್ರಶಸ್ತಿ ಯಿಂದ ಪಡೆದ 1.4 ದಶಲಕ್ಷ ಡಾಲರ್ ಹಣವನ್ನು ಹತ್ತು ವಿವಿಧ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುತ್ತಿರುವ ಫಿಶರ್ ಹೌಸ್ ಸಂಸ್ಥೆಗೆ 2 ಲಕ್ಷದ 50 ಸಾವಿರ ಡಾಲರ್, ಅಮೆರಿಕದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಡಬ್ಲ್ಯು. ಬುಶ್ ಅವರು ಸ್ಥಾಪಿಸಿರುವ ಹೈಟಿ ಭೂಕಂಪ ಸಂತ್ರಸ್ತರ ಪರಿ ಹಾರ ನಿಧಿಗೆ 2 ಲಕ್ಷ ಡಾಲರ್ ನೀಡಿದ್ದಾರೆ.
ಬಾಕಿ ಹಣವನ್ನು ವಿದ್ಯಾಲಯಗಳ ಒಕ್ಕೂಟ, ಪೊಸೆ ಪ್ರತಿಷ್ಠಾನ, ಯುನೈಟೆಡ್ ನೀಗ್ರೋ ಕಾಲೇ ಜು ನಿಧಿ, ಹಿಸ್ಪಾನಿಕ್ ಸ್ಕಾಲರ್‌ಶಿಪ್ ನಿಧಿ, ಅಮೆರಿಕ-ಭಾರತ ವಿದ್ಯಾಲಯ ನಿಧಿ, ಆಫ್ರಿಕೇರ್ - ಮಧ್ಯ ಏಷ್ಯಾ ಸಂಸ್ಥೆಗಳಿಗೆ ನೀಡಿದ್ದಾರೆ. ಮಧ್ಯ ಏಷ್ಯಾ ಸಂಸ್ಥೆಯು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳ ಗಡಿಯಲ್ಲಿನ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಅಕ್ಷರತೆ ಹರಡಲು ಶ್ರಮಿಸುತ್ತಿದೆ ಅಲ್ಲದೇ ಸಮುದಾಯ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|