ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ

ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಎಂಬ ಹೆಸರು ನಾಮಕರಣ ಮಾಡಲು ಸಚಿವ ಜಿ ಈ ಟ್ರಸ್ಟ್ ಕಾರ್ಯಕ್ಕೂ ಕನ್ನಡ ವಿಶ್ವವಿದ್ಯಾಲಯಕ್ಕೂ ಏನು ಸಂಬಂಧ ?

ಅದು ಕನ್ನಡ ವಿಶ್ವವಿದ್ಯಾಲಯ, ಕನ್ನಡ ನಾಡು, ನುಡಿಗಾಗಿ ಸ್ಥಾಪಿತವಾಗಿರುವ ಕನ್ನಡ ವಿಶ್ವವಿದ್ಯಾ ಲಯ ಹಂಪಿಯು ಕಮಲಾಪುರದ ಬಳಿ 700 ಎಕರೆ ಪ್ರದೇಶದಲ್ಲಿ 1992ರಲ್ಲಿ ಸ್ಥಾಪಿತವಾಯಿತು. ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಈ ಮೊದಲು ಕನ್ನಡಿಗರು ಹೋರಾಟ ನಡೆಸಿದ್ದರು.
ಕನ್ನಡಕ್ಕೆ ಇರುವುದು ಒಂದೇ ವಿಶ್ವವಿದ್ಯಾಲಯ ಕನ್ನಡ ವಿವಿಯು ದೇಶಿ ಪರಂಪರಾ ಶೈಲಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಗಿಡಗಳನ್ನು ಬೆಳೆಸಿ ಇಡೀ ಪ್ರದೇಶವನ್ನು ಹಸಿರುಕರಣಗೊಳಿಸಿ, ಎಲ್ಲರ ಗಮನ ಸೆಳೆಯುವುದಕ್ಕೆ ಕಾರಣವಾಯಿತು.

ಕನ್ನಡ ವಿವಿ ಬೆಳೆದಂತೆಲ್ಲಾ 700 ಏಕರೆ ಭೂಮಿಯು ಸಾಕಾಗುವುದಿಲ್ಲ. ಇನ್ನೂ 500 ಏಕರೆ ಭೂಮಿಯಾದರೂ ಬೇಕು. ನೀಡಿ ಎಂದು ಆಗೀನ ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂ ಬಾರ ಸರ್ಕಾರಕ್ಕೆ ಮನವಿ ನೀಡಿದ್ದರು.

ನಂತರ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ಆಲೋಚನೆ ಮಾಡಲೇ ಇಲ್ಲ. ಯುಜಿಸಿ ಅನುದಾನ ಪಡೆದು, ಕನ್ನಡ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿ ತನ್ನದೇ ಆದ ಶೈಕ್ಷಣಿಕ ಅಭಿವೃದ್ಧಿಗೆ ಕಾರಣವಾಯಿತು. ರಾಜ್ಯ ಸರ್ಕಾರವು ವರ್ಷಕ್ಕೆ ಇಂತಿಷ್ಟು ಅನುದಾನ ನೀಡುತ್ತಾ ಬಂದಿದ್ದು ಬಿಟ್ಟರೆ ಉಳಿದಂತೆ ಅಲ್ಲಿಯ ಅನೇಕ ಯೋಜನೆಗಳಿಗೆ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ಕನ್ನಡಿಗರ ಏಕೈಕ ಪ್ರತಿನಿಧಿಯಾಗಿರುವ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಸರ್ಕಾರವು ತಾತ್ಸಾರ ಭಾವನೆ ಹೊಂದಿದೆ.

ವಿವಿಧ ವಿಭಾಗಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆ. ರಚನೆಯಾಗಿರುವ ಯಾವ ಪೀಠಗಳಿಗೂ ಸ್ವಂತಹ ಕಟ್ಟಡಗಳಿಲ್ಲ. ಎಂ.ಎ. ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಸಹ ಒಂದು ವಿಶಾಲ ಕಟ್ಟಡವಿಲ್ಲ. ಕನ್ನಡ ವಿವಿಯು ಇಂತಹ ಹಲವಾರು ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾ ರಕ್ಕೆ ಹಲವಾರು ಬಾರಿ ಮನವಿ ನೀಡಿದೆ.

ಆದರೆ ಸರ್ಕಾರಕ್ಕೆ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲದಿರುವುದರಿಂದ ಇಂತಹ ಯಾವುದೇ ರೀತಿ ಭೌತಿಕ ವಾತಾವರಣ ನಿರ್ಮಾಣಕ್ಕೆ ಸ್ಪಂದಿಸುತ್ತಿಲ್ಲ. ವಸ್ತು ಸ್ಥಿತಿ ಹೀಗಿ ರುವಾಗ ಇರುವ ಕನ್ನಡ ವಿಶ್ವವಿದ್ಯಾಲಯದಲ್ಲಿ `ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)’ ಎನ್ನುವ ಖಾಸಗಿ ಸಂಸ್ಥೆಗೆ 80 ಏಕರೆ ಭೂಮಿ ನೀಡಿದೆ. ಭೂಮಿ ಪೂಜೆ ನಡೆಸಿ, ಆನಂತರ ಸಿಂಡಿ ಕೇಟ್ ಸಭೆಯಲ್ಲಿ ಇಬ್ಬರು ಡೀನ್ಗಳು ಗೈರು ಹಾಜರಾಗುವಂತೆ ನೋಡಿಕೊಂಡು ತರಾತುರಿಯಲ್ಲಿ ಇತರೆ ವಿಷಯಗಳಲ್ಲಿ ಈ ವಿಷಯ ತಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನದ ಹಿಂದೆ ಸಚಿವರಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ.

ವಿಜಯನಗರ ಪುನಶ್ಚೇತನ ಪ್ರತಿಷ್ಠಾನ. ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ ಪ್ರಯತ್ನ ನಡೆ ಸಿದ್ದರು. ಇದರ ವಿರುದ್ಧ ನಾಡಿನಾದ್ಯಂತ ಬಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಇದನ್ನು ಕೈಬಿಟ್ಟರು. ಈಗ ಹಿಂಬಾಗಿಲಿನಿಂದ ಇದನ್ನು ತರಲು ಖಾಸಗಿ ಟ್ರಸ್ಟ್ಗೆ ಕನ್ನಡ ವಿವಿಯ 80 ಏಕರೆ ಭೂಮಿ ಪರಭಾರೆ ಮಾಡುವ ಮೂಲಕ ಅಲ್ಲಿ ಕೃಷ್ಣದೇವರಾಯನ ಪ್ರತಿಮೆ ಸ್ಥಾಪನೆ, ದೆಹಲಿ ಅಕ್ಷರಧಾಮ ಮತ್ತು ಕುರುಕ್ಷೇತ್ರದ ಮಹಾಭಾರತ ಥೀಮ್ ಪಾರ್ಕ್ ನಿರ್ಮಾಣ, ವಿಜಯನಗರ ಕಾಲದ ವಸ್ತು ಸಂಗ್ರಹಾಲಯ,ವಿಜಯನಗರ ಜನ- ಜೀವನ, ವೈಭವ ನಿರೂಪಿಸುವ ಮಲ್ಟಿಮಿಡೀಯಾ ಪ್ರದ ರ್ಶನ, ಪ್ರತಿಷ್ಠಾನ ಧ್ಯೇಯಕ್ಕೆ ಅನುಗುಣವಾಗು ವಂತಹ ಇತರ ಚಟುವಟಿಕೆಗಳು ನಡೆಸಲಾ ಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ. ಈ ಟ್ರಸ್ಟ್ ಖಾಸಗಿಯಲ್ಲ, ಸರ್ಕಾರದ್ದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೊಸ ರಾಗ ತೆಗೆದಿದ್ದಾರೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಎಂಬ ಹೆಸರು ನಾಮಕರಣ ಮಾಡಲು ಸಚಿವ ಜಿ ಈ ಟ್ರಸ್ಟ್ ಕಾರ್ಯಕ್ಕೂ ಕನ್ನಡ ವಿಶ್ವವಿದ್ಯಾಲಯಕ್ಕೂ ಏನು ಸಂಬಂಧ ? ಈ ಟ್ರಸ್ಟ್ ಅಭಿವೃದ್ಧಿಯಾದ ನಂತರ ಈ ಟ್ರಸ್ಟ್ ಕನ್ನಡ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುತ್ತೇವೆ ಎಂದು ಹೇಳಲಾಗು ತ್ತಿದೆ. ಕನ್ನಡ ವಿಶ್ವ ವಿದ್ಯಾಲಯದ ಕೆಲಸವೇ ಬೇರೆ ಇರಬೇಕಾದರೆ ಈ ವಸ್ತು ಪ್ರದರ್ಶನ, ಪ್ರತಿಮೆ ತೆಗೆದುಕೊಂಡು ಇರುವ ಕೆಲಸ ಬಿಟ್ಟು ಅದನ್ನು ನಿರ್ವಹಿಸುವ ಕೆಲಸ ಮಾಡುವುದೇ ಕನ್ನಡ ವಿಶ್ವವಿದ್ಯಾಲಯದ ಉದ್ದೇಶಗಳಿಗೆ ಬಗೆದ ಅಪಚಾರವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಮೂಲ ಉದ್ದೇಶವನ್ನೇ ಸರ್ಕಾರ ಮರೆತು ಬಿಟ್ಟಿದೆಯೇ ? ಬಿಜೆಪಿ ಆಳುವ ಪಕ್ಷದ ರಾಜಕಾರಣಿಗಳು ಹಾಗೂ ಹೊಟೇಲ್ ಉದ್ಯಮಿಗಳು ಹಾಗೂ ಸಂಘ-ಪರಿವಾರಕ್ಕೆ ಸೇರಿದವರೇ ತುಂಬಿದ್ದಾರೆ. ಇತಿಹಾಸದ ಹೆಸರಾಂತ ವಿದ್ವಾಂಸರಾಗಲಿ, ತಜ್ಞರಾಗಲಿ ಸದರಿ ಟ್ರಸ್ಟ್ನಲ್ಲಿ ಇಲ್ಲ. ಇದೊಂದು `ಹಿಡೆನ್ ಅಜೆಂಡಾ‘ ಆಗಿದೆ. ಇದು ಕನ್ನಡ ವಿವಿಯ 80 ಏಕರೆ ಭೂ ಕಬಳಿಕೆ ನಡೆಸುವ ಹುನ್ನಾರ ಹೊಂದಲಾಗಿದೆ. ಕನ್ನಡ ವಿವಿ ಯನ್ನು ವ್ಯಾಪಾರಿ ಕೇಂದ್ರವನ್ನಾಗಿ ಸುವ, ಧಾರ್ಮಿಕ ಬ್ರಾಹ್ಮಣ ಮೌಲ್ಯಗಳ ಮತೀಯ ಕೇಂದ್ರವನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆ. ಬಲಿ ಚಕ್ರವರ್ತಿಗೆ ಒಂದು ಹೆಜ್ಜೆ ಜಾಗ ಕೇಳಿ ವಾಮನಮೂರ್ತಿ ಕೊನೆಗೆ ಯಾವ ಜಾಗವೂ ಸಾಕಾಗದೇ ಬಲಿ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿದಂತೆ ಕೇವಲ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ಕಬಳಿಸುವ ಮೂಲಕ ಇಡೀ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನೇ ಅಲ್ಲಿಂದ ಎತ್ತಿ ಹಾಕುವ ಹುನ್ನಾರ ಹೊಂದಿದೆ.

ಹೋರಾಟಕ್ಕೆ ಕೈ ಜೋಡಿಸಲು ಮನ

ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಪ್ರದೇಶದ ಭೂಕಬಳಿಕೆ ವಿರುದ್ಧ ನಾಡಿನಾದ್ಯಂತ ಸಾಹಿತಿ ಗಳು, ಕಲಾವಿದರು,ಬುದ್ಧಿಜೀವಿಗಳು, ವಿಶ್ರಾಂತ ಕುಲಪತಿಗಳು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆ ಗಳು ಹಾಗೂ ರಾಜ್ಯ ರೈತ ಸಂಘ ಸೇರಿ ದಂತೆ ಎಲ್ಲಾ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿ, ಪ್ರತಿಭಟನೆ ನಡೆಸುತ್ತಿವೆ. ಹಿರೀಕರು ಮಾಡಿ ರುವ ಅಸ್ತಿಯನ್ನು ಉಳಿಸಿಕೊಳ್ಳಬೇಕು. ನಾಡು ನುಡಿಗಾಗಿ ರೂಪಿತವಾಗಿರುವ ಕನ್ನಡ ವಿವಿ ಉಳಿಸಬೇಕೆಂದು ತಮ್ಮ ಪ್ರತಿರೋಧ ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಪ್ರಗತಿಪರ, ಕನ್ನಡಪರ, ದಲಿತಪರ, ರೈತಪರ ಎಲ್ಲಾ ಸಂಘಟನೆಗಳು `ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ‘ ರಚಿಸಿಕೊಂಡು ಹೋರಾಟ ನಡೆಸಿವೆ. ಹೋರಾಟ ಮುಂದುವರೆಸಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪರಶುರಾಮ ಕಲಾಲ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri