| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ |
ಪ್ರಕಟಿಸಿದ ದಿನಾಂಕ : 2010-03-14
ಮಂಗಳೂರು, ಮಾ.೧೩: ಮಹಿಳೆಯರ ಸಮಸ್ಯೆಗಳಿಗೆ ಮೀಸಲಾತಿ ಒಂದೇ ಪರಿಹಾರವಲ್ಲ ಎಂದು ಎಸ್ಸೆಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅಭಿಪ್ರಾಯಪಟ್ಟಿದ್ದಾರೆ. ಎಸ್ಸೆಸೆಫ್, ಎಸ್‌ವೈಎಸ್, ಎಸ್‌ಜೆಎಂ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದ ಪುರಭವನದಲ್ಲಿ ಇಂದು ನಡೆದ ‘ಇಲಲ್ ಹಬೀಬ್’ ಮೀಲಾದ್ ಸಂದೇಶ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೆಹಲಿಯಲ್ಲಿ ಮಹಿಳೆ ಮುಖ್ಯಮಂತ್ರಿ ಆಗಿದ್ದರೂ ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಉತ್ತರಪ್ರದೇಶದಲ್ಲಿ ದಲಿತ ಮಹಿಳೆ ಮುಖ್ಯಮಂತ್ರಿ ಯಾಗಿದ್ದರೂ ಕೂಡ ದಲಿತರ ದೌರ್ಜನ್ಯ ನಿಂತಿಲ್ಲ. ಹಾಗಾಗಿ ಪ್ರವಾದಿ ಮುಹಮ್ಮದ್ (ಸ.ಅ.)ರು ಸ್ತ್ರೀಯರ ವಿಮೋಚನೆಗೆ ಸಂಬಂಧಿಸಿ ಅನುಸರಿಸಿದ ನೀತಿಯೇ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಎಂದು ಸಿದ್ದೀಕ್ ಮೋಂಟುಗೋಳಿ ನುಡಿದರು. ಸಭೆಯ ಅಧ್ಯಕ್ಷತೆಯನ್ನು ಸುನ್ನಿ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ವಹಿಸಿದ್ದರು. ದೇವರ್‌ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಡಾ. ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ಶಾಸಕ ಯು.ಟಿ. ಖಾದರ್, ಎಚ್.ಐ.ಅಬೂಸುಫಿಯಾನ್ ಮದನಿ, ಜಿ.ಎಂ.ಕಾಮಿಲ್ ಸಖಾಫಿ, ಎ.ಎ.ಹೈದರ್ ಪರ್ತಿಪ್ಪಾಡಿ, ಬಿ.ಎಸ್.ಹಸನಬ್ಬ, ಹಮೀದ್ ಬಜ್ಪೆ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಇಸ್ಮಾಯೀಲ್ ಸಅದಿ ಕಿನ್ಯ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಕೆ.ಕೆ.ಎಂ.ಕಾಮಿಲ್ ಸಖಾಫಿ, ಹನೀಫ್ ಮಿಸ್ಬಾಹಿ, ಅಶ್ರಫ್ ಸೋಮೇಶ್ವರ ಭಾಗವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿಯಾಗಿ ನೇಮಕಗೊಂಡ ಎಸ್ಸೆಸೆಫ್ ಕಾರ್ಯಕರ್ತ ಖಾದರ್ ಶಾ ಬೈಕಂಪಾಡಿ ಯನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಎಸ್ಸೆಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಸ್ವಾಗತಿಸಿದರು. ಎ.ಎಂ.ಇಸ್ಮಾಯೀಲ್ ಸಅದಿ ಉರುಮನೆ ವಂದಿಸಿದರು. ಯಾಕೂಬ್ ಸಅದಿ ಕಾರ್ಯಕ್ರಮ ನಿರೂಪಿಸಿದರು. ಬಾವುಟಗುಡ್ಡೆಯಿಂದ ನಗರದ ಪುರಭವನದವರೆಗೆ ಡಾ.ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಹಾಗೂ ಅಶ್ರಫ್ ಉಳ್ಳಾಲರ ನೇತೃತ್ವದಲ್ಲಿ ಮೀಲಾದ್ ರ‍್ಯಾಲಿ ನಡೆಯಿತು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-14 00:00:00
|
|
| Achu, Katipalla | 2010-03-16 | | Masha Allah good job done by SSF. Keep it up |
|
|
|