ಹೊಸದಿಲ್ಲಿ, ಮಾ.೧೩: ಇಲ್ಲಿ ನ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆದ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನ ಪೈನಲ್‌ನಲ್ಲಿ ಆಸ್ಟ್ರೇಲಿಯವು ಹಾಲಿ ಚಾಂಪಿಯನ್ ಜರ್ಮನಿಯನ್ನು ಸೋಲಿಸಿ ೨೪ ವರ್ಷಗಳ ಬಳಿಕ ಪ್ರಥಮ ಬಾರಿಗೆ ವಿಶ್ವಚಾಂಪಿಯನ್ ಪಟ್ಟವನ್ನಲಂಕರಿಸಿದೆ.
ಇದರೊಂದಿಗೆ ವಿಶ್ವಕಪ್ ಪೈನಲ್‌ನಲ್ಲಿ ಮೂರನೆ ಬಾರಿಗೆ ವಿಜಯಗಳಿಸಿ ಹ್ಯಾಟ್ರಿಕ್‌ನ ಕನಸು ಕಾಣುತ್ತಿದ್ದ ಜರ್ಮನಿಯ ಕನಸು ಭಗ್ನಗೊಂಡಿದೆ.
ಲುಕೆ ಡೊರ್ನೆರ್ ೫೯ನೆ ನಿಮಿಷದಲ್ಲಿ ಗೋಲ್ ಬಾರಿಸಿ ಆಸ್ಟ್ರೇಲಿಯಕ್ಕೆ ೨-೧ ಮುನ್ನಡೆ ದೊರಕಿಸಿಕೊಟ್ಟರು.
ಇನ್ನೊಂದು ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್‌ನ್ನು ೪-೩ ಅಂತರದಿಂದ ಸೋಲಿಸಿದ ನೆದರ್‌ಲೆಂಡ್ ಕಂಚಿನ ಪದಕ ಗೆದ್ದುಕೊಂಡಿದೆ.
ಈ ಬಾರಿಯ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಜರ್ಮನಿ ೨ನೆ ಸ್ಥಾನ -ಬೆಳ್ಳಿ ಪದಕ, ನೆದರ್‌ಲೆಂಡ್ ೩ನೆ ಸ್ಥಾನ - ಕಂಚು ಪದಕವನ್ನು ಗೆದ್ದುಕೊಂಡಿದೆ.