ದೇಶದಲ್ಲಿ ಮೊತ್ತಮೊದಲ ಆಪ್‌ಶೋರ್ ನಾವೆ ಶುಭಾರ೦ಭ |
ಪ್ರಕಟಿಸಿದ ದಿನಾಂಕ : 2010-03-13
(ಚಿತ್ರ ವರದಿ- ರೋನ್ಸ್ ಬ೦ಟ್ವಾಳ್)
ಭಾರತ ದೇಶದ ಹೆಸರಾಂತ ಉದ್ಯಮಶೀಲ ಸಂಸ್ಥೆಯಾದ ಪೂಂಜ್‌ಲಾಯ್ಡ್ ಸಮೂಹ ಸಂಸ್ಥೆಯು ಇಂದಿಲ್ಲಿ ದೇಶದಲ್ಲಿ ಮೊತ್ತಮೊದಲ, ಅತ್ಯಾಧುನಿಕವಾದ ಆಪ್‌ಶೋರ್ ನಾವೆಯನ್ನು ಶುಭಾರಂಭ ಗೊಳಿಸಿತು.

ಚೀನದಲ್ಲಿ ಸಿದ್ಧಗೊಂಡು ಮುಂಬಯಿಯ ಬಂದರು ಪ್ರದೇಶಕ್ಕೆ ಆಗಮಿಸಿದ್ದ ಈ ಸುಸಜ್ಜಿತ ನಾವೆ ಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಪುರೋಹಿತ ಅಶೋಕ್ ಭಟ್ ಕುಂಬ್ಳೆ ಇವರು ಇವರು ವಾಸ್ತುಪೂಜೆ, ಗಣಹೋಮ, ಸತ್ಯನಾರಯಣ ಮಹಾಪೂಜೆಯೊಂದಿಗೆ ವೈಧಿಕಪೂಜಾಧಿಗಳನ್ನು ವಿಧಿವತ್ತಾಗಿ ನೆರವೇರಿಸಿದ್ದು, ಪೂಂಜ್‌ಲಾಯ್ಡ್ ಸಂಸ್ಥೆಯ ಆಡಳಿತ ನಿರ್ದೇಶಕ ಪಿ.ಕೆ.ಗುಪ್ತ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಹೆಚ್.ಕೆ.ಖೌಲ್, ಹಿರಿಯ ಅಧಿಕಾರಿಗಳಾದ ದಿಲೀಪ್ ಮಾಣ್ಕಮೆ ಪೂಂಜ್‌ಲಾಯ್ಡ್ ನಿರ್ವಾಹಣೆಯ ಮಂಗಳೂರು ಜೆಪ್ಪು ಮೂಲದ ತುಳು-ಕನ್ನಡಿಗರ ಫಾಲ್ಕನ್ ಆಪ್‌ಶೋರ್‍ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಕೋನಾಲ್ಡ್ ಬ್ಯಾಪ್ಠಿಸ್ಟ್, ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ವಲೇ ರಿಯನ್ ಡಿ'ಸೋಜಾ ನಕ್ರೆ, ಪಿ.ಸುಬ್ರಹ್ಮಣ್ಯ ಐತಾಳ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-13
|
|
|