ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ

ಚಿತ್ರ: ಹರ್ಯಾಣದ ಜಜ್ಜಾರ‍್ ನಲ್ಲಿ ಕಾನೂನುಬದ್ಧ ಉದ್ಯೋಗದ ಭಾಗವಾಗಿ ಸತ್ತ ದನಗಳ ಚರ್ಮ ಸುಲಿಯಿತ್ತಿದ್ದುದ್ದಕ್ಕಾಗಿ ಸಂಘ ಪರಿವಾರದಿಂದ ಹತ್ತೆಯಾದ ದಲಿತರು ಮತ್ತು ಹತ್ಯೆ ನಡೆದ ಸ್ಥಳ.

ದನಗಳನ್ನು ಆಹಾರವಾಗಿ ಬಳಸುವ ಪ್ರಶ್ನೆಯಲ್ಲಿ ಅಘಾತಕಾರಿಯಾದದ್ದು, ಅಪವಿತ್ರವಾದದ್ದು ಏನೂ ಇಲ್ಲ. ಪ್ರಾಚೀನ ಕಾಲದಲ್ಲಿ ಆರ್ಯರಲ್ಲಿ ದನದ ಮಾಂಸದ ಬಳಕೆ ವ್ಯಾಪಕವಾಗಿತ್ತು. ಇಂದಿ ಗೂ ದೊಡ್ಡ ಸಂಖ್ಯೆಯ ಜನ ಇದನ್ನು ಆಹಾರವಾಗಿ ಬಳಸುತ್ತಾರೆ.ಆದರೆ ಕೋಮುವಾದಿ ರಾಜಕೀ ಯ ಮಹತ್ವಾಕಾಂಕ್ಷೆಗಳು ದನದ ಮಾಂಸದ ಪ್ರಶ್ನೆಯನ್ನು ವಿವಾದದ ಪ್ರಶ್ನೆಯಾಗಿಸಿವೆ. ಪ್ರಸ್ತುತ ವಿದಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಾಂತ್ರಿಕ ಕಾರಣಗಳ ಮೇಲೆ ಹಿಂದೆ ಪಡೆದಿದ್ದರೂ ಅದು ಜನವಿರೋಧಿ ಸ್ವರೂಪದಲ್ಲಿ ಮತ್ತೆ ಬರುವ ಸಂದರ್ಭ ಹತ್ತಿರದಲ್ಲೇ ಇದೆ.

`ಗೋಹತ್ಯೆ ನಿಷೇದ‘ ಕಾಯ್ದೆಯನ್ನು ಜಾರಿಗೆ ತಂದು ಸಂಘ ಪರಿವಾರದ ಪಡೆಗಳು ಇನ್ನಷ್ಟು ಮುಸ್ಲಿಂ ಮತ್ತು ದಲಿತರ ಮೇಲೆ ಎರಗಲು ಅನುವು ಮಾಡಿಕೊಡಲು ಕಳೆದ ಅಧಿವೇಶನದಲ್ಲೇ ಸಂಚು ರೂಪಿಸಲಾಗಿತ್ತು. ಆದರೆ ಜನರ ವಿರೋಧ ರಾಜಕೀಯವಾಗಿ ಬಯಲಾಗತೊಡಗಿದ ಪರಿಣಾಮ ಆ ಅಧಿವೇಶನದಲ್ಲಿ ಗೋಹತ್ಯೆ ನಿಷೇದದ ಕಾಯಿದೆಯನ್ನು ಜಾರಿಗೆ ತರುವ ಧೈರ್ಯ ಮಾಡಲಿಲ್ಲ.

ಬದಲಿಗೆ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ವೈದಿಕವಾದಿ ಗೃಹಸಚಿವ ಆಚಾರ್ಯ ನೇತೃತ್ವದಲ್ಲಿ ಸಂಪುಟ ಉಪಸಮಿತಿಯ ಸುಪರ್ದಿಗೆ ವಹಿಸಲಾಗಿತ್ತು.

ಇಷ್ಟಾದರೂ ಬಿಜೆಪಿ ಮತ್ತು ಸಂಘ ಪರಿವಾರದ ತನ್ನ ಬಾಲಂಗೋಚಿ ಮಠಾಧಿಪತಿಗಳು, ಸಂಘ ಪರಿವಾರದ ಎಲ್ಲಾ ಸಂಘ ಸಂಸ್ಥೆಗಳು `ಹಸುವನ್ನು ಸ್ಮರಿಸೋಣ ಪುಣ್ಯವನ್ನು ಗಳಿಸೋಣ‘, ಎಂಬಿ ತ್ಯಾದಿ ಘೋಷಣೆಗಳಡಿ ಗೋ ಗ್ರಾಮ ಯಾತ್ರೆಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ. ಇದಕ್ಕೆಲ್ಲಾ ಮೇವು, ನೀರು ಹಾಕಿ ಗೋ ಗ್ರಾಮ ಯಾತ್ರೆಗಳನ್ನು ಸಾಗಿಸುತ್ತಿರುವುದು ಬಿಜೆಪಿಯೇ ಎಂಬುದನ್ನು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಅನಾಗರಿಕರಿಗೆ ಹಸುಗಳ ಮೇಲೆ ಪ್ರೀತಿ ಹುಟ್ಟಿದ್ದು ಯಾವಾಗ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವವಾದಿಗಳು ಉಗ್ರಗಾಮಿಗಳಾಗಿ ಅಲ್ಪ ಸಂಖ್ಯಾತ, ದಲಿತರ ಮೇಲೆ ಎರಗಿ ಗೋರಕ್ಷಣೆ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸುವುದು ಇದೇ ಮೊದಲಲ್ಲ. ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ (2002ರಲ್ಲಿ) ಗೋಹತ್ಯೆ ನಿಷೇದ ಕಾಯಿದೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದು ಕೂಡಾ ಮೊದಲಲ್ಲ.

ಬಹಳ ವರ್ಷಗಳ ಹಿಂದೆಯೇ ಅಂದರೆ 1870 ರಲ್ಲಿ ಮುಸ್ಲಿಂ ಜನತೆಯ ವಿರುದ್ಧ ಸಾಮೂಹಿಕ ವಾಗಿ ಹಿಂದುಗಳನ್ನೆಲ್ಲಾ ಎತ್ತಿಕಟ್ಟಲು ಮೊದಲಿಗೆ ಪಂಜಾಬ್ನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ನಂತರದಲ್ಲಿ ದಯಾನಂದ ಸರಸ್ವತಿಯವರು 1882 ರಲ್ಲಿ "ಗೋರಕ್ಷಣೆ ಸಭಾ" ನಡೆಸುವ ಮೂ ಲಕ ರಾಜಕೀಯವಾಗಿ ಹಿಂದೂಗಳನ್ನು ಮತೋನ್ಮಾದಗೊಳಿಸಲು ಹಸುವನ್ನು `ಆಯುಧ‘ವನ್ನಾಗಿ ಮಾಡಿಕೊಳ್ಳಲಾಯಿತು.

1880 ಮತ್ತು 1890 ರಲ್ಲೇ ಗೋರಕ್ಷಣೆ ಹೆಸರಿನಲ್ಲಿ ಹಿಂದೂ, ಮುಸ್ಲಿಂ ನಡುವೆ ಕೋಮುಗಲಭೆ ಗಳನ್ನು ಸೃಷ್ಠಿಸಲಾಗಿತ್ತು. ಈ ಸಂದರ್ಭದಲ್ಲಿ ನೂರಾರು ಹಿಂದೂ, ಮುಸ್ಲಿಂ ಜನತೆ ಗಲಭೆಯಲ್ಲಿ ಸತ್ತರು. ತೀವ್ರತರ ಗಾಯಗೊಂಡರು.ಇದೇ ಸಂದರ್ಭದಲ್ಲಿ ದೇಶಾದ್ಯಂತ ಕೋಮುಗಲಭೆಗಳು ಹರಡತೊಡಗಿದವು.

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಕೋಮುವಾದಿಗಳು ಭಾವನಾತ್ಮಕವಾಗಿ ಜನತೆಯನ್ನು ಹುಚ್ಚೆಬ್ಬಿಸುತ್ತಲೇ ಬಂದವು. ಇಷ್ಟಾದರೂ ಸಂವಿಧಾನದ ಆಶಯದಂತೆ ಜಾತ್ಯಾತೀತ ಪ್ರಜಾಪ್ರ ಭುತ್ವ ವ್ಯವಸ್ಥೆಯಲ್ಲಿ 12 ವರ್ಷ ಮೀರಿದ ಹಸುಗಳು, ಎತ್ತುಗಳು, ಎಮ್ಮೆ ಹಾಗೂ ಇನ್ನಿತರ ಸಾಕು ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸಲು ಸುಪ್ರಿಂ ಕೋರ್ಟ್ 1966 ರಲ್ಲೇ ಅವಕಾಶ ನೀಡಿತ್ತು.

ಸಂಘ ಪರಿವಾರದ ಪೂರ್ವಿಕರೇ ಮೊದಲಿಗೆ ಗೋ ಭಕ್ಷಕರು 

ಭಾರತ ದೇಶದ ಐತಿಹಾಸ ಬಲ್ಲ ಎಲ್ಲರಿಗೂ ಆರ್ಯರ ಮೂಲ ಯಾವುದು. ಅವರ ಕುಲ ಕಸುಬು ಬೇನೆಂಬುದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳ ಮೂಲಕ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕವೂ ದೃಢಪಟ್ಟಿದೆ. ಋಗ್ವೇದದಲ್ಲಿ ಮಹಾಭಾರತದ,ರಾಮಾಯಣದ ಗ್ರಂಥಗಳಲ್ಲೂ ಗೋಮಾಂಸ ಭಕ್ಷಣೆಯ ಉಲ್ಲೇಖಗಳು ವಿಜೃಂಭಿಸುತ್ತವೆ.

ಋಗ್ವೇದದಲ್ಲಿ ಅನೇಕ ಬಾರಿ ಪ್ರಚುರಪಡಿಸುವುದೇನೆಂದರೆ ಹಿಂದೂ ದೇವರಾದ ಇಂದ್ರನಿಗೆ ಎತ್ತಿನ ಮಾಂಸವೇ ಇಷ್ಟವಾಗಿತ್ತಂತೆ. ಯಾಕೆಂದರೆ ಶತ್ರುಗಳ ಸಂಹಾರಕ್ಕಾಗಿ ತನ್ನ ದೇಹಧಾ ಡ್ಯತೆ ಮತ್ತು ಬಾಹುಗಳನ್ನು ಗಟ್ಟಿಗೊಳಿಸಲು ಎಂದು ಅನೇಕ ಬಾರಿ `15ಕ್ಕಿಂತ ಹೆಚ್ಚಿನ ಎತ್ತು ಗಳು ಹಾಗೂ 30 ರಿಂದ 1000 ಕೋಣಗಳನ್ನು ಅಗ್ನಿಯಿಂದ ಸುಟ್ಟಿದ್ದ ಮಾಂಸಹಾರವನ್ನು ನನ ಗಾಗಿ ತಯಾರು ಮಾಡಲಾಗಿತ್ತೆಂದು‘ಇಂದ್ರನೇ ಹೇಳಿದ್ದಾನೆ.

 ಇಂತಹ ಉದಾಹರಣೆಗಳನ್ನು ನಾವು ಡಾ. ಡಿ.ಎನ್.ಜಾ ರವರು ಸಂಶೋಧನೆ ನಡೆಸಿ ಸಂಪಾ ದಿಸಿರುವ`ದಿ ಮಿಥ್ ಅಫ್ ದಿ ಹೋಲಿ ಕೌ‘ ಎಂಬ ಪುಸ್ತಕ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ರವರ ಬರಹಗಳು ಮತ್ತು ಭಾಷಣಗಳ ಸಂಪುಟ7 ರಲ್ಲಿ ಮತ್ತು ಸಂಪುಟ 5 ರಲ್ಲಿ ನೋಡಬಹುದು.

ನಾಲಿಗೆಗೆ ಮೆತ್ತಗಿರಲು ಹಾಗೂ ಕೊಬ್ಬಿರುವ, ಹುಟ್ಟಿ ಎರಡು ಮೂರು ದಿನಗಳನ್ನು ಮಾತ್ರ ಕಳೆದಿ ರುವ ಎಳೆಯ ಕರುಗಳನ್ನು ತಿಂದು ತೇಗುತ್ತಿದ್ದ ಬ್ರಾಹ್ಮಣರು ಸಸ್ಯಹಾರಿಗಳಾಗಲು ಕಾರಣವೇ ನು?

ಡಾ.ಬಿ.ಆರ್.ಅಂಬೇಡ್ಕರ್ರವರು ಹೇಳಿದಂತೆ ಬ್ರಾಹ್ಮಣರು ಹಸುಗಳನ್ನು ದಾನ ಪಡೆದು ಪಶು ಸಂಗೋಪನೆ ಮಾಡುತ್ತಿರಲಿಲ್ಲ. ವ್ಯವಸಾಯವನ್ನು ಮೊದಲಿನಿಂದಲೇ ಮಾಡುತ್ತಿರಲಿಲ್ಲ.ಬದಲಿಗೆ ಕಟುಕರಾಗಿದ್ದಲ್ಲದೇ ಗೋಮಾಂಸ ಭಕ್ಷಕರಾಗಿದ್ದರೆಂದು ಹೇಳಿದ್ದಾರೆ.

ಬ್ರಾಹ್ಮಣ ಅತಿಥಿ ಮನೆಗೆ ಬಂದರೆ ಅವನನ್ನು ಗೋಘ್ನ (`Go Ghna‘) ಎಂದು ಕರೆಯತ್ತಿದ್ದರು. ಯಾಕೆಂದರೆ ಆ ಅತಿಥಿಯನ್ನು ಸತ್ಕರಿಸಲು ಒಂದು ಹಸುವನ್ನು ಹತ್ಯೆ ಮಾಡಿ ಮಾಂಸದೂಟ ವನ್ನು ತಯಾರಿ ಮಾಡಿಕೊಡಬೇಕಿತ್ತು. ಆದ್ದರಿಂದ ಅತಿಥಿಯಾಗಿ ಬಂದ ಬ್ರಾಹ್ಮಣನನ್ನು `ಗೋಘ್ನ‘ ಎಂದು ಕರೆಯುತ್ತಿದ್ದರು.

ಹೀಗೆ ಋಗ್ವೇದದಲ್ಲಿ, ವಿವಿಧ ರೀತಿಯಲ್ಲಿ ಹಸು ಎತ್ತು, ಎಮ್ಮೆಗಳನ್ನು ಯಜ್ಞಗಳ ಹೆಸರಿನಲ್ಲಿ ಬಲಿ ಕೊಟ್ಟು ಬ್ರಾಹ್ಮಣರೆಲ್ಲರೂ ಭಕ್ಷಿಸುತ್ತಿದ್ದರು. ಅಶ್ವಮೇಧ, ರಾಜಸೂಯ ಮತ್ತು ವಾಜಪೇಯ ಇಂತಹ ಯಜ್ಞಗಳಲ್ಲಿ ಮುಖ್ಯವಾಗಿ ಸಾವಿರಾರು ಪ್ರಾಣಿಗಳನ್ನು ಬಲಿಕೊಟ್ಟು ಸಾಮೂಹಿಕವಾಗಿ ಭಕ್ಷಿಸುತ್ತಿ ದ್ದರು.

ಇಂತಹ ಯಜ್ಞಗಳ ಮೂಲಕ, ಧಾನ-ಧರ್ಮಗಳ ಮೂಲಕ ಸಂಘ ಪರಿವಾರದ ಪೂರ್ವಿಕರು ದನ ದ ಮಾಂಸವನ್ನು ಭಕ್ಷಿಸುತ್ತಿದ್ದರೆಂಬುದಕ್ಕೆ ಪುರಾತತ್ವ ಆಧಾರಗಳು (archacological evidence) ಸಾಕ್ಷೀಕರಿಸಿವೆ. ಮೀರತ್ನ ಹಸ್ತೀನಾಪುರದಲ್ಲಿ ಎತ್ತು, ಹಸು,ಎಮ್ಮೆಗಳ ಕತ್ತರಿಸಲ್ಪ ಟ್ಟಂತಹ ಮೂಳೆಗಳ ರಾಶಿ ರಾಶಿ ಪಳೆಯುಳಿಕೆಗಳೇ ಗೊತ್ತುಪಡಿಸುತ್ತಿವೆ. ಇದೇ ರೀತಿ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮುಂತಾದೆಡೆ ಮೂಳೆಗಳ ರಾಶಿ ಕಾಣಬಹುದೆಂದು ಇತಿಹಾಸತಜ್ಞರು ದೃಢಪಡಿಸಿದ್ದಾರೆ.

ಪುರಾತನ ಕಾಲದಲ್ಲಿ ಎಲ್ಲಾ ಪ್ರಾಣಿಗಳನ್ನು ಭಕ್ಷಿಸುತ್ತಿದ್ದವರು ಸಸ್ಯಹಾರಿಗಳಾಗಲು ಕಾರಣವೇನು ಎಂಬುದು ಜನಸಾಮಾನ್ಯರಲ್ಲಿ ಹುಟ್ಟುವ ಪ್ರಶ್ನೆ. ಇತಿಹಾಸ ತಜ್ಞರೇ ದೃಢಪಡಿಸಿರುವ ಹಾಗೆ ಶುದ್ಧ ಸೋಮಾರಿಗಳಾಗಿ ಯಜ್ಞ, ಯಾಗಾದಿಗಳ ಹೆಸರಿನಲ್ಲಿ ಹಿಂಸೆಗಳಿಗೆ ನಾಂದಿ ಹಾಡುತ್ತಿದ್ದ ಸನಾ ತನ ಬ್ರಾಹ್ಮಣ್ಯದ ಅಧರ್ಮವನ್ನು ಧಿಕ್ಕರಿಸಿ ಬೌದ್ಧ ಧರ್ಮಕ್ಕೆ ಜನರು ಆಕರ್ಷಿತರಾಗತೊಡಗಿದ್ದರು.

ಇಂಥ ಸಂದರ್ಭದಲ್ಲಿ ಬ್ರಾಹ್ಮಣ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಗೋಮಾಂಸ ಭಕ್ಷಕರು ಗೋ ರಕ್ಷಕರಾಗಿ ಪರಿವರ್ತನೆಗೊಂಡರು. ಬೌದ್ಧ ಧರ್ಮದ ಭಿಕ್ಕುಗಳು ಹಾಗೂ ಬ್ರಾಹ್ಮಣ್ಯದ ವಿರುದ್ಧ ಸಂಘರ್ಷವೇ ನಡೆದು ಲಕ್ಷಾಂತರ ಬೌದ್ಧ ಭಿಕ್ಕುಗಳನ್ನು ಕೊಲ್ಲಲಾಯಿತು. ಇಂಥವುಗಳಿಗೆ ನಾಯ ಕತ್ವ ನೀಡಿದವರು ಶಂಕರಾಚಾರ್ಯರು.

ಅಮಾನವೀಯ ಪದ್ಧತಿ, ಮೌಢ್ಯತೆಯನ್ನು ಎತ್ತಿಹಿಡಿದಿದ್ದುದರ ಪರಿಣಾಮವೇ ದೇಶದಲ್ಲಿ ಜಾತಿ ಅಸ್ಪೃಶ್ಯತೆಯ ಆಚರಣೆ ಅನಾಗರೀಕತೆ ಭಾರತದಲ್ಲಿ ಮುಂದುವರೆದಿದೆ. ಆಧುನಿಕ ಯುಗದಲ್ಲೂ ನೇಗಿಲ ಗುಳದಿಂದ ದಲಿತ ಸೋದರಿಯರ ಯೋನಿಗೆ ಚುಚ್ಚಿ ಸಾಯಿಸುತ್ತಾರೆ. (ಮಹಾರಾಷ್ಟ್ರದ ಖ್ಯೆರ್ಲಾಂಜಿ ಘಟನೆ) ಜೀವಂತ ಸುಡುತಾರೆ. ಮಲ ತಿನ್ನಿಸುತ್ತಾರೆ, ಮೂತ್ರ ಕುಡಿಸುತ್ತಾರೆ.

ದೇಶದ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆ ಜನತೆ ಮೇಲ್ಜಾತಿ ಜನರಎದುರು ನಡುಬಗ್ಗಿಸಿಯೇ ನಡೆಯು ವಂತೆಯೇ ನಿರ್ಭಂಧಿಸಲಾಗಿದೆ. ಇಂತಹ ಕ್ರೌರ್ಯಗಳ ಬಗ್ಗೆ ಕರುಣೆ ಇಲ್ಲದೆ ಬಡ, ದಲಿತ, ಅಲ್ಪ ಸಂಖ್ಯಾತರು ಹಿಂದುಳದ ವರ್ಗಗಳು ಬಳಸುವ ದನದ ಮಾಂಸದ ಆಹಾರದ ಹಕ್ಕನ್ನು ಕಸಿಯ ಲು ಹೊರಟಿದ್ದಾರೆ.

ರಾಜಕೀಯ ಲಾಭಕ್ಕಾಗಿ ಮುಸ್ಲಿಂರ ವಿರುದ್ಧ, ಮುಸ್ಲಿಂರ ಆಗಮದಿಂದಲೇ ಭಾರತದಲ್ಲಿ ಗೋಹತ್ಯೆ ಆರಂಭವಾಯಿತೆಂದು ಇತಿಹಾಸವನ್ನು ತಿರುಚಿ ರಾಷ್ಟ್ರೀಯ ಪ್ರಾಣಿ ಹಸು ಎಂದು ಘೋಷಿಸಲು ಒತ್ತಡ ಹೇರುತ್ತಿದ್ದಾರೆ. ದುಡಿಯುವ ರೈತಾಪಿ ವರ್ಗ ಹಸುಗಳ ಆರೈಕೆಯೊಂದಿಗೆ ಜೀವನ ನಡೆಸಿ ಉಪಯೋಗವಿಲ್ಲದ ಸಂದರ್ಭದಲ್ಲಿ ಕಸಾಯಿ ಖಾನೆಗೆ ಮಾರುವುದುಂಟು. ನಂತರದಲ್ಲಿ ಈ ದನ ಗಳ ಮಾಂಸ ಬಡವರಿಗೆ ಆಹಾರವಾಗಿ ಮತ್ತು ಚರ್ಮೋದ್ಯೋಗ ಲಕ್ಷಾಂತರ ಜನರ ಉದ್ಯೋ ಗದ ಆಸರೆಯೂ ಆಗಿದೆ.

ಹೀಗಿರುವಾಗ ಸುಖದ ಸುಪ್ಪತ್ತಿಗೆಯಲ್ಲಿರುವವರು, ಹಸುವಿನ ಹತ್ತಿರ ಸುಳಿಯದವರು, ತಮ್ಮ ಡೈನಿಂಗ್ ಟೇಬಲ್ ಮೇಲೆ ಪ್ರತಿನಿತ್ಯ ಕೆ.ಜಿ.ಗಟ್ಟಲೆ ಸೇಬು ಹಣ್ಣುಗಳನ್ನು ಇಟ್ಟುಕೊಂಡು ತಿನ್ನು ವಂತೆ ಪ್ರತಿನಿತ್ಯ ದನದ ಮಾಂಸವನ್ನು ಬಡಜನತೆ ತಿನ್ನುವುದಿಲ್ಲ ಎನ್ನುವುದು ತಿಳಿದಿರಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಶೇಷ ಲೇಖನ -ಬಿ.ರಾಜಶೇಖರ ಮೂರ್ತಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-13 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............
»ನ್ಯಾ ಸುಧೀಂದ್ರರಾವ್ : ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ
»ಸೈಟು ಪ್ರಶಿಸುವವರ ಕಣ್ಣಿಗೆ ಸಂಘದ ಸಾಮಾಜಿಕ ಬದ್ಧತೆಯೇಕೆ ಕಾಣುವುದಿಲ್ಲ?
»ಕನ್ನಡಿಗರ ಕಣ್ಮಣಿಯಾಗುತ್ತಿರುವ ನಮ್ಮ ಸುವರ್ಣ ವಾರ್ತಾ ವಾಹಿನಿ 24X7
»ಆ ಪಟ್ಟಿಯಲ್ಲಿ ಈ ಪದ್ಯಾಣರ ಹೆಸರಿರಬೇಕಿತ್ತು...!
»ಇದು ನಮ್ಮ ಗ್ರ್ಯಾಂಡ್ ಪ್ರಿಕ್ಸ್: ರಥ V/S ಫಾರ್ಮುಲಾ 1

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri