ಪಾಪ್ ಸಿಂಗರ್ ಜತೆ ಬ್ರೂನಿ, ಸಚಿವೆ ಜತೆ ಸರ್ಕೋಜಿ ರೊಮ್ಯಾನ್ಸ್! |
ಪ್ರಕಟಿಸಿದ ದಿನಾಂಕ : 2010-03-13
ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಮತ್ತು ಅವರ ಪತ್ನಿ ಕಾರ್ಲಾ ಬ್ರೂನಿ
ಲಂಡನ್, ಶುಕ್ರವಾರ, 12 ಮಾರ್ಚ್ 2010
ಕಳೆದ ಕೆಲವು ಸಮಯದಿಂದ ಜಾಗತಿಕ ಮಟ್ಟದಲ್ಲೇ ಸುದ್ದಿಯಲ್ಲಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಮತ್ತು ಅವರ ಪತ್ನಿ ಕಾರ್ಲಾ ಬ್ರೂನಿ ದಾಂಪತ್ಯ ಬಹುತೇಕ ಕೊನೆಯ ಉಸಿರಿನ ಹತ್ತಿರದಲ್ಲಿದ್ದು, ಇಬ್ಬರೂ ತಮ್ಮ ಪ್ರೇಮಿಗಳೊಂದಿಗೆ ಸುತ್ತಾಡುತ್ತಿ ದ್ದಾರೆ ಎಂದು ವರದಿಗಳು ಹೇಳಿವೆ.
ಸಾರ್ವಜನಿಕವಾಗಿಯೇ ಎಲ್ಲರ ಗಮನ ಸೆಳೆಯುತ್ತಿದ್ದ ಸರ್ಕೋಜಿ - ಬ್ರೂನಿ ಜೋಡಿ ತಮ್ಮ ಮದುವೆಯ ಬಗ್ಗೆ ಆಸಕ್ತಿ ಕಳೆದು ಕೊಂಡಿದ್ದಾರೆ. ಬ್ರೂನಿ ತನ್ನ ಪ್ರಿಯಕರನ ಜತೆ ಥಾಯ್ಲೆಂಡ್‌ಗೆ ಹೋಗಿದ್ದು, ಇತ್ತ ಸರ್ಕೋಜಿ ತನ್ನ ಸಂಪುಟದ ಸಚಿವೆಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದಾರೆ ಎಂದು ಬ್ರಿಟೀಷ್ ಪತ್ರಿಕೆಗಳು ವರದಿ ಮಾಡಿವೆ.
43ರ ಹರೆಯದ ಬ್ರೂನಿ ತನಗಿಂತ ಆರು ವರ್ಷ ಕಿರಿಯವನಾದ ದಟ್ಟ ಕೂದಲಿನ ಪಾಪ್ ಸಿಂಗರ್ ಬೆಂಜಮಿನ್ ಬಿಯೋಲೇ ಎಂಬಾತನ ಜತೆ ಥಾಯ್ಲೆಂಡ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಇವರಿಬ್ಬರು ಹಳೆಯ ಗೆಳೆಯರು. ಆದರೆ ಇದನ್ನು ಸಹಿಸದ ಸರ್ಕೋಜಿ, ತಕ್ಷಣವೇ ತವರಿಗೆ ಬರುವಂತೆ ಆದೇಶ ನೀಡಿದ್ದಾರೆ. ಅದಕ್ಕಾಗಿ ಬಾಡಿಗೆ ವಿಮಾನವೊಂದನ್ನು ಕೂಡ ಥಾಯ್ಲೆಂಡ್‌ಗೆ ಸರ್ಕೋಜಿ ಕಳುಹಿಸಿದ್ದಾರೆ ಎಂದು 'ದಿ ಸನ್' ಪತ್ರಿಕೆ ಹೇಳಿದೆ.
ಬ್ರೂನಿಯವರ ರಜಾದಿನವನ್ನು ನಿಕೋಲಾಸ್ ಸರ್ಕೋಜಿ ಕಡಿತಗೊಳಿಸಿದ್ದಾರೆ ಎಂದು ಸ್ವಿಜರ್ಲೆಂಡ್ ಪತ್ರಿಕೆ 'ಟ್ರಿಬ್ಯೂನ್ ಡೇ ಜಿನೇವೆ' ನಿನ್ನೆ ವರದಿ ಮಾಡಿದೆ. ಅಧ್ಯಕ್ಷರು ಕಳುಹಿಸಿರುವ ಬಾಡಿಗೆ ವಿಮಾನವು ಅವರ ಪತ್ನಿಯನ್ನು ಕರೆದುಕೊಂಡು ಪ್ಯಾರಿಸ್‌ಗೆ ಹೋಗಲಿದೆ ಎಂದೂ ಪತ್ರಿಕೆ ಹೇಳಿದೆ.
ಅದೇ ಹೊತ್ತಿಗೆ ಇತ್ತ 55ರ ಹರೆಯದ ಸರ್ಕೋಜಿಯವರು ಪರಿಸರ ಖಾತೆ ಸಚಿವೆ ಚಾಂಟಲ್ ಜುವಾನೋ ಜತೆ ನಿಕಟ ಸಂಬಂಧ ಹೊಂದಿದ್ದು, ಬ್ರೂನಿ ಥಾಯ್ಲೆಂಡ್‌ಗೆ ಹೋಗುತ್ತಿದ್ದಂತೆ ಸಚಿವೆಯ ಜತೆ ರೊಮ್ಯಾನ್ಸ್ ಶುರುವಿಟ್ಟುಕೊಂಡಿದ್ದಾರೆ ಎಂಬ ಗಾಳಿಸುದ್ದಿಗಳು ಹುಟ್ಟಿಕೊಂಡಿವೆ.
ಆದರೆ ಜುವಾನೋ ಅವರ ವಕ್ತಾರರು ಇದನ್ನು ತಳ್ಳಿ ಹಾಕಿದ್ದಾರೆ. ಈ ರೂಮರ್ ಮೂಲಕ ಸಚಿವೆಯ ಹೆಸರು ಕೆಡಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳ ಕಾಲ ರೊಮ್ಯಾನ್ಸ್ ಮಾಡಿಕೊಂಡಿದ್ದ ಸರ್ಕೋಜಿ ಮತ್ತು ಬ್ರೂನಿ 2008ರ ಆರಂಭದಲ್ಲಿ ಅಧಿಕೃತವಾಗಿ ಮದುವೆಯಾಗಿದ್ದರು. ಅದಕ್ಕೂ ಮೊದಲು ಬ್ರೂನಿ ಕನಿಷ್ಠ ಮೂವರ ಜತೆ ಸಂಬಂಧ ಹೊಂದಿದ್ದರು. ಸರ್ಕೋಜಿಗೆ ಇದು ಎರಡನೇ ಅಧಿಕೃತ ಮದುವೆಯಾಗಿತ್ತು ಎಂದು ಪತ್ರಿಕೆಗಳು ಹೇಳಿವೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|