ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ. |
ಪ್ರಕಟಿಸಿದ ದಿನಾಂಕ : 2010-03-12
ಮಂಗಳೂರು,ಮಾ.13 : ರಸ್ತೆ ಸುರಕ್ಷಾ ನಿಯಮಗಳನ್ನು ಅಳವಡಿಸುವಂತೆ ಒತ್ತಾಯಿಸಿ ನಗರದ ಕದ್ರಿ ಹಿಲ್ಸ್‌ನಲ್ಲಿರುವ "ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ" ವಿಧ್ಯಾರ್ಥಿಗಳು ನಗರದ ನಂತೂರಿನ ಪಾದುವಾ ಹೈಸ್ಕೂಲ್ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಮಾ.೧೧ರಂದು ನಂತೂರ್ - ಪಾದುವಾ ಹೈಸ್ಕೂಲ್ ಎದುರಿನ ಕದ್ರಿ ಪಾರ್ಕ್ ಕಡೆ ಬರುವ ಕ್ರಾಸ್ ರಸ್ತೆಯಲ್ಲಿ ರಿಕ್ಷಾಕ್ಕೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ವಿಧ್ಯಾರ್ಥಿ ಮೂಡಬಿದ್ರೆಯ ಮಹಮದ್ ಮಜೀನ್(೧೯) ಸಾವನ್ನಪ್ಪಿದ್ದಾರೆ. ಇನ್ನೋರ್ವ (ಪ್ರಯಾಣಿಕ) ವಿಧ್ಯಾರ್ಥಿ ಮೂಡಬಿದ್ರೆಯ ಮಹಮದ್ ಮುಝಾಮಿನ್ (೧೯) ಮತ್ತು ರಿಕ್ಷಾ ಚಾಲಕ ನಾರಯಣ ಪೂಜಾರಿ ತೀವ್ರವಾಗಿ ಗಾಯಗೊಂಡು ನಗರದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆಯಲಿ ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು ಪಾದಚಾರಿಗಳ ರಕ್ಷಣೆಗೆ ಹಾಗೂ ರಸ್ತೆ ಸುರಕ್ಷಾತ ಕ್ರಮಗಳಿಗಾಗಿ ಕೈಗೊಳ್ಳಬೇಕಾದ ವಿವಿಧ ಬೇಡೆಕೆಗಳಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿದರು. ಆಟೋ ರಿಕ್ಷಾ ಚಾಲಕರೂ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆಯ ನೇತ್ರತ್ವವನ್ನು ವಹಿಸಿದ್ದ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರಾದ ಸ್ಟೀಫನ್ ಮೆಂಡಿಸ್, ಕಾರ್ಯದರ್ಶಿ ಫ್ಲೋರೆನ್ಸ್ ಮೆಂಡಿಸ್ ಹಾಗೂ ವಿಧ್ಯಾರ್ಥಿ ನಾಯಕ ನಿತಿನ್ ವಾಸ್ ಮೊದಲಾದವರು ಮಾತನಾಡಿ ನಂತೂರ್- ಪಾದುವಾ ಹೈಸ್ಕೂಲ್ ಎದುರಿನ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು, ಸ್ಪೀಡ್ ಬ್ರೇಕರ್ ನಿರ್ಮಿಸಿ ಬಸ್ಸ್ ನ ವೇಗಕ್ಕೆ ಕಡಿವಾಣ ಹಾಕ ಬೇಕು, ರಸ್ತೆ ಬದಿಯಲ್ಲಿ ಸೂಚನಾ ಫಲಕ ಆಳವಡಿಸಬೇಕು, ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದಾಡುವಂತಾಗಲು ಫುಟ್ಪ್‌ಪಾತ್ ನಿರ್ಮಿಸಬೇಕು, ನಂತೂರ್- ಪದುವ ಕ್ರಾಸ್ ಬಳಿ, ನಂತೂರ್ ಜಂಕ್ಷನ್ ಹಾಗೂ ಕೆಪಿಟಿ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸಬೇಕು ಎಂಬ ವಿವಿಧ ಬೇಡಿಕೆಗಳಿಗೆ ಅಗ್ರಹ ಪಡಿಸಿದರು. ಆರೋಪಿ ಬಸ್ಸ್ ಚಾಲಕನ ಚಾಲನಾ ಪರವಾನಿಗೆಯನ್ನು ರದ್ದು ಪಡಿಸುವಂತೆ ಕೂಡ ಒತ್ತಾಯಿಸಿದರು.
ಬಳಿಕ ಕದ್ರಿ ಪೊಲೀಸ್ ಠಾಣೆಯವರೆಗೆ ಮೆರವಣಿಗೆಯಲ್ಲಿ ಸಾಗಿದ ವಿಧ್ಯಾರ್ಥಿಗಳು ಸಮ್ಮಂದ ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮನವಿಯೊಂದನ್ನು ನೀಡಿದರು. ಹಾಗೂ ವಿಧ್ಯಾರ್ಥಿಗಳ ನಿಯೋಗವು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬಸ್ಸು ಚಾಲಕನ ವಿರುದ್ಧ ಅತಿಯಾದ ವೇಗ ಮತ್ತು ನಿರ್ಲಕ್ಷದ ಚಾಲನೆ ಆರೋಪದ ಮೇಲೆ ಸಂಚಾರ ಪೂರ್ವ ಠಾಣೆಯ ಪೊಲೀಸರು ಈಗಾಗಲೇ ಕೇಸು ದಾಖಲಿಸಿಕೊಂಡಿದ್ದಾರೆ
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|